ನವದೆಹಲಿ: ನೂಪುರ್ ಶರ್ಮಾರನ್ನು ಬೆಂಬಲಿಸಿದ್ದಕ್ಕಾಗಿ ಉದಯಪುರ್ ವ್ಯಕ್ತಿಯ ಹತ್ಯೆಯ ಮಾದರಿಯಲ್ಲೇ ಮಹಾರಾಷ್ಟ್ರದ ಔಷಧಿ ವ್ಯಾಪಾರಿಯನ್ನು ಕೊಲೆ ಮಾಡಲಾದ ಪ್ರಕರಣವನ್ನು ನಗರ ಪೊಲೀಸ್ ಆಯುಕ್ತರು ತಿರುಚಿದ್ದಾರೆ ಎಂದು ಬಿಜೆಪಿ ಸಂಸದೆ ನವನೀತ್ ರಾಣಾ ಆರೋಪಿಸಿದ್ದಾರೆ.
"ಮಹಾರಾಷ್ಟ್ರದ ಅಮರಾವತಿಯಲ್ಲಿ ವ್ಯಕ್ತಿಯನ್ನು ಕತ್ತು ಸೀಳಿ ಕೊಲೆ ಮಾಡಲಾಗಿದೆ. ಇದನ್ನು ದರೋಡೆ ಎಂದು ಬಿಂಬಿಸಿದ ನಗರ ಪೊಲೀಸ್ ಆಯುಕ್ತೆ ಆರತಿ ಸಿಂಗ್, ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಹೀಗಾಗಿ ಅವರ ವಿರುದ್ಧವೂ ತನಿಖೆ ನಡೆಯಬೇಕು" ಎಂದು ಸಂಸದೆ ರಾಣಾ ಒತ್ತಾಯಿಸಿದ್ದಾರೆ.
- — Navneet Ravi Rana (@navneetravirana) July 2, 2022 " class="align-text-top noRightClick twitterSection" data="
— Navneet Ravi Rana (@navneetravirana) July 2, 2022
">— Navneet Ravi Rana (@navneetravirana) July 2, 2022
"ಘಟನೆ ನಡೆದು 12 ದಿನಗಳ ತರುವಾಯ ಅವರು ಪ್ರಕರಣದ ಕುರಿತು ಸ್ಪಷ್ಟನೆ ನೀಡುತ್ತಿದ್ದಾರೆ. ಮೊದಲು ಘಟನೆಯನ್ನು ದರೋಡೆಯಲ್ಲಾದ ಕೊಲೆ ಎಂದು ಚಿತ್ರಿಸಿದ್ದಾರೆ. ಬಳಿಕ ಕೇಸನ್ನೇ ಮುಗಿಸಲು ಯತ್ನಿಸಿದ್ದಾರೆ. ಇದು ಪ್ರಕರಣದ ದಿಕ್ಕನ್ನೇ ಬದಲಿಸುವ ಯತ್ನ. ಎಸ್ಪಿ ವಿರುದ್ಧವೇ ತನಿಖೆ ನಡೆಸಬೇಕು" ಎಂದು ಆಗ್ರಹಿಸಿದ್ದಾರೆ.
ಅಮರಾವತಿಯಲ್ಲಿ ಜೂನ್ 21 ರಂದು ಔಷಧಿ ವ್ಯಾಪಾರಿಯ ಮೇಲೆ ಇಬ್ಬರು ವ್ಯಕ್ತಿಗಳು ದಾಳಿ ಮಾಡಿ ಕತ್ತು ಸೀಳಿ ಕೊಲೆ ಮಾಡಿದ್ದರು. ಪೈಗಂಬರರ ವಿರುದ್ಧ ಹೇಳಿಕೆ ನೀಡಿದ ನೂಪುರ್ ಶರ್ಮಾರನ್ನು ಬೆಂಬಲಿಸಿದ್ದಕ್ಕಾಗಿ ಹತ್ಯೆ ಮಾಡಿದ್ದು ತನಿಖೆಯಲ್ಲಿ ಗೊತ್ತಾಗಿದೆ. ಉದಯಪುರ್‌ನಲ್ಲಿ ಕನ್ಹಯ್ಯಾ ಲಾಲ್ ಹತ್ಯೆಗೂ ಒಂದು ವಾರದ ಮೊದಲು ಈ ಕೊಲೆ ಸಂಭವಿಸಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಬಂಡಾಯ ಶಾಸಕರಿದ್ದ ಹೋಟೆಲ್ನಲ್ಲಿ ಸುಳ್ಳು ದಾಖಲೆ ನೀಡಿ ವಾಸ್ತವ್ಯ, ಇಬ್ಬರ ಬಂಧನ