ETV Bharat / bharat

ನದಿಗೆ ಉರುಳಿ ಬಿದ್ದ ಮಿನಿ ಟ್ರಕ್​.. 36ಕ್ಕೂ ಹೆಚ್ಚು ಪ್ರಯಾಣಿಕರ ಪೈಕಿ 12 ಜನ ಸಾವು

ಮಧ್ಯಪ್ರದೇಶದ ದಾತಿಯಾದಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಬುಹಾರಾ ನದಿಗೆ ಮಿನಿ ಟ್ರಕ್ ಪಲ್ಟಿಯಾಗಿದ್ದು, ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

Mini Truck Overturned in buhara river  Mini Truck Overturned in buhara river in datia  Madhya Pradesh accident news  ನದಿಗೆ ಉರುಳಿ ಬಿದ್ದ ಮಿನಿ ಟ್ರಕ್  36ಕ್ಕೂ ಹೆಚ್ಚು ಪ್ರಯಾಣಿಕರ ಪೈಕಿ 12 ಜನ ಸಾವು  ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ  ದುರ್ಸಾದ ಪೊಲೀಸ್ ಠಾಣೆ ವ್ಯಾಪ್ತಿಯ ಬುಹಾರಾ ನದಿ  ದಾತಿಯಾದಲ್ಲಿ ಬುಹಾರಾ ನದಿಗೆ ಮಿನಿ ಟ್ರಕ್​ವೊಂದು ಪಲ್ಟಿ  ಮುಧ್ಯಪ್ರದೇಶದಲ್ಲಿ ದುರಂತ ಘಟನೆ

author img

By

Published : Jun 28, 2023, 10:08 AM IST

Updated : Jun 28, 2023, 11:54 AM IST

36ಕ್ಕೂ ಹೆಚ್ಚು ಪ್ರಯಾಣಿಕರ ಪೈಕಿ 12 ಜನ ಸಾವು

ದಾತಿಯಾ, ಮಧ್ಯಪ್ರದೇಶ: ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ದುರ್ಸಾದಾ ಪೊಲೀಸ್ ಠಾಣೆ ವ್ಯಾಪ್ತಿಯ ಬುಹಾರಾ ನದಿಯಲ್ಲಿ ವೇಗವಾಗಿ ಬಂದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿರುವುದರ ಬಗ್ಗೆ ವರದಿಯಾಗಿದೆ. ಆದರೆ, ಸಾವಿನ ಬಗ್ಗೆ ಅಧಿಕಾರಿಗಳು ದೃಢಪಡಿಸಿಲ್ಲ.

ಅಪಘಾತದಲ್ಲಿ 36ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಇದುವರೆಗೆ ಐವರ ಮೃತದೇಹಗಳು ಪತ್ತೆಯಾಗಿವೆ. ಮಾಹಿತಿ ಪಡೆದು ಜಿಲ್ಲಾಧಿಕಾರಿ ಹಾಗೂ ಅಧೀಕ್ಷಕ ಪ್ರದೀಪ್ ಶರ್ಮಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇದರೊಂದಿಗೆ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಕೂಡ ಈ ದೊಡ್ಡ ಘಟನೆಯ ಬಗ್ಗೆ ಗಮನ ಹರಿಸಿದ್ದಾರೆ ಮತ್ತು ಅವರು ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.

ಮದುವೆ ಸಮಾರಂಭಕ್ಕೆ ಹೋಗುತ್ತಿದ್ದ ವೇಳೆ ಅಪಘಾತ: ಮಾಹಿತಿ ಪ್ರಕಾರ, ಗ್ವಾಲಿಯರ್‌ನ ಬಿಲ್ಹೇಟಿ ಗ್ರಾಮದಿಂದ ಜಾತಾರಾಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಿನಿ ಟ್ರಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ಬುಹಾರಾ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆಯಿಂದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ. ಅಪಘಾತದ ಮಾಹಿತಿಯ ಮೇರೆಗೆ ಪೊಲೀಸರು-ಆಡಳಿತ ಮಂಡಳಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯ ಪ್ರಾರಂಭಿಸಿದರು. ಈ ವೇಳೆ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಧುಮಗಳ ಜೊತೆ ಪ್ರಯಾಣಿಸುತ್ತಿದ್ದ ಸಂಬಂಧಿಗಳು : ಅಪಘಾತದಲ್ಲಿ ಬಲಿಯಾದವರೆಲ್ಲರೂ ಮಧುಮಗಳ ಕುಟುಂಬಸ್ಥರ ಸಂಬಂಧಿಗಳು ಎಂದು ಹೇಳಲಾಗುತ್ತಿದೆ. ಸಂಬಂಧಿಕರೆಲ್ಲರೂ ಮಧುಮಗಳನ್ನು ಕರೆದುಕೊಂಡು ಆಕೆಯ ಮದುವೆಗೆ ಹೋಗುತ್ತಿದ್ದರು. ಆದರೆ ಅವರ ಮದುವೆಯ ಮುನ್ನ ದಿನವೇ ಶೋಕವಾಗಿ ಬದಲಾಗಿದೆ. ಅಪಘಾತಕ್ಕೆ ಕಾರಣವಾದ ಮಿನಿ ಟ್ರಕ್‌ನ ವೇಗ ಹೆಚ್ಚಿತ್ತು ಎಂದು ಹೇಳಲಾಗುತ್ತಿದೆ. ಈ ಘಟನೆ ಬಗ್ಗೆ ಜನರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.

ಐವರ ಮೃತದೇಹ ಪತ್ತೆ: ಟ್ರಕ್ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದ್ದು, ಹಲವು ಜನ ಸಾವನ್ನಪ್ಪಿದ್ದಾರೆ. ಐವರ ಸಾವು ದೃಢಪಟ್ಟಿದ್ದು, ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮ್ಯಾಟಡೋರ್‌ನಲ್ಲಿ 50 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಮೃತರಲ್ಲಿ ಮೂವರು ಮಕ್ಕಳು, ವೃದ್ಧೆ ಹಾಗೂ ಯುವಕನ ಶವ ಪತ್ತೆಯಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಮೃತರನ್ನು 3 ವರ್ಷದ ಗುಂಜನ್, 2 ವರ್ಷದ ಅಮಾಯಕ ಕೌರವ್, 3 ವರ್ಷದ ಇಶು ಸೇರಿದಂತೆ 18 ವರ್ಷದ ಯುವಕ ಪ್ರಶಾಂತ್ ಮತ್ತು 65 ವರ್ಷದ ಪಾಂಚೋ ಬಾಯಿ ಎಂದು ಗುರುತಿಸಲಾಗಿದೆ.

ಗೃಹ ಸಚಿವ ನರೋತ್ತಮ್ ಮಿಶ್ರಾ ಸೂಚನೆ: ಅಪಘಾತದ ಬಗ್ಗೆ ಗೃಹ ಸಚಿವ ನರೋತ್ತಮ್ ಮಿಶ್ರಾ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ರಕ್ಷಣಾ ಕಾರ್ಯ ಚುರುಕುಗೊಳಿಸುವಂತೆ ಸೂಚನೆ ನೀಡಿದರು. ಸಂತ್ರಸ್ತರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಗೃಹ ಸಚಿವರು ಸೂಚನೆ ನೀಡಿದ್ದಾರೆ.

ನರೋತ್ತಮ್ ಮಿಶ್ರಾ ಅವರು "ಈ ಘಟನೆ ತುಂಬಾ ದುಃಖಕರವಾಗಿದೆ. ಇವರು ಖಾಟಿಕ್ ಸಮುದಾಯದ ಜನರು, ಅವರು ಗ್ವಾಲಿಯರ್ ಜಿಲ್ಲೆಯ ನಿವಾಸಿಗಳು. ಅವರು ಐಸ್ ಟ್ರಕ್‌ನಲ್ಲಿ ಟಿಕಾಮ್‌ಗಢ್ ಜಿಲ್ಲೆಯ ಜಾತಾರಾಗೆ ಹೋಗುತ್ತಿದ್ದರು. ದಾತಿಯಾದ ಹಳ್ಳಿಯೊಂದರಲ್ಲಿ ಐಷರ್ ಟ್ರಕ್‌ ಪಲ್ಟಿಯಾಗಿರುವುದು ವರದಿಯಾಗಿದೆ. ಕೂಡಲೇ ಆಡಳಿತ ಮಂಡಳಿ ಸ್ಥಳಕ್ಕೆ ತಲುಪಿತ್ತು. ಇದುವರೆಗೆ 5 ಜನರ ಮೃತದೇಹಗಳು ಪತ್ತೆಯಾಗಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಓದಿ: ಒಡಿಶಾದಲ್ಲಿ ಮದುವೆ ಮೆರವಣಿಗೆಗೆ ಟ್ರಕ್ ನುಗ್ಗಿ 6 ಮಂದಿ ದಾರುಣ ಸಾವು: 6 ಜನರ ಸ್ಥಿತಿ ಗಂಭೀರ

Last Updated : Jun 28, 2023, 11:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.