ETV Bharat / bharat

ಉಜ್ಜಯಿನಿಯಲ್ಲಿ ಮಹಾಕಾಲ ಕಾರಿಡಾರ್ ಉದ್ಘಾಟಿಸಿದ ಪ್ರಧಾನಿ ಮೋದಿ - ಈಟಿವಿ ಭಾರತ ಕನ್ನಡ ನ್ಯೂಸ್​​​

ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ನಿರ್ಮಿಸಲಾಗಿರುವ ಮಹಾದೇವ ಲೋಕ( ಕಾರಿಡಾರ್​) ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರು.ನಾಳೆಯಿಂದ ಸಾರ್ವಜನಿಕರ ಭೇಟಿಗೆ ಅವಕಾಶ ಲಭಿಸಲಿದೆ.

mp-mahakaal-corridor-to-contribute-rs-300-crore-to-tourism-economy
ಉಜ್ಜಯಿನಿಯಲ್ಲಿ ಮಹಾಕಾಲ ಕಾರಿಡಾರ್ ಉದ್ಘಾಟಿಸಿದ ಪ್ರಧಾನಿ ಮೋದಿ
author img

By

Published : Oct 11, 2022, 4:53 PM IST

Updated : Oct 11, 2022, 7:27 PM IST

ಉಜ್ಜಯಿನಿ (ಮಧ್ಯಪ್ರದೇಶ): ಉಜ್ಜಯಿನಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಹಾಕಾಲ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಉದ್ಘಾಟಿಸಿದರು. ಈ ಯೋಜನೆಯು ನಗರದ ಆರ್ಥಿಕತೆಗೆ 300 ಕೋಟಿ ರೂ ಕೊಡುಗೆ ನೀಡಲಿದೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿರುವ 12 ಜ್ಯೋತಿರ್ಲಿಂಗಗಳ ಪೈಕಿ ಉಜ್ಜಯಿನಿಯ ಮಹಾಕಾಲ ದೇವಾಲಯವೂ ಒಂದಾಗಿದೆ.

ಮಹಾಕಾಲ ದೇವಾಲಯ 12 ಜ್ಯೋತಿರ್ಲಿಂಗಗಳಲ್ಲೊಂದು: ಮಧ್ಯಪ್ರದೇಶದಲ್ಲಿರುವ ಈ ಶಿವನ ದೇವಾಲಯವು ದಕ್ಷಿಣಾಭಿಮುಖವಾಗಿದ್ದು, ಈ ಧಾರ್ಮಿಕ ಕ್ಷೇತ್ರಕ್ಕೆ ವಿಶೇಷ ಸ್ಥಾನಮಾನ ಇದೆ. ಉಜ್ಜಯಿನಿಯ ಮಹಾಕಾಲ ದೇವಾಲಯಕ್ಕೆ ಶಿವನ ದರ್ಶನ ಪಡೆಯಲು ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಭಕ್ತರು ಇಲ್ಲಿ ನಿರ್ಮಿಸಲಾಗಿರುವ ಮಹಾಕಾಲ ಕಾರಿಡಾರ್ ಮೂಲಕ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋಗಬೇಕಾಗುತ್ತದೆ. ಇಲ್ಲಿ ಏಕಕಾಲಕ್ಕೆ 20,000 ಭಕ್ತರಿಗೆ ಅನುಕೂಲವಾಗುವಂತೆ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.

ಪ್ರವಾಸೋದ್ಯಮಕ್ಕೆ 300 ಕೋಟಿ ಕೊಡುಗೆ : ಈ ಕಾರಿಡಾರ್ ಮೂಲಕ ಹಿಬಾತ್ ದೇವಾಲಯಕ್ಕೆ ಹೋಗಬಹುದು. ಈ ಕಾರಿಡಾರ್ ನಿರ್ಮಾಣದಿಂದ ಉಜ್ಜಯಿನಿ ನಗರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಮಹಾಕಾಲನ ದರ್ಶನಕ್ಕೆ ಪ್ರತಿ ವರ್ಷ ಮೂರು ಕೋಟಿ ಜನ ಆಗಮಿಸುತ್ತಿದ್ದು, ಇದರಿಂದ ನಗರದ ಆರ್ಥಿಕ ಬೆಳವಣಿಗೆಯು ಸುಮಾರು 300 ಕೋಟಿ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಉಜ್ಜಯಿನಿಯಲ್ಲಿ ಮಹಾಕಾಲ ಕಾರಿಡಾರ್ ಉದ್ಘಾಟಿಸಿದ ಪ್ರಧಾನಿ ಮೋದಿ

ದೇವಾಲಯಗಳ ನಗರ ಉಜ್ಜಯಿನಿ : ಉಜ್ಜಯಿನಿಯನ್ನು ದೇವಾಲಯಗಳ ನಗರ ಎಂದು ಕರೆಯಲಾಗುತ್ತದೆ. ಇಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಸಿಂಹಸ್ಥವನ್ನು ಆಯೋಜಿಸಲಾಗುತ್ತದೆ. ಮಹಾಶಿವರಾತ್ರಿ ಮತ್ತು ನಾಗ ಪಂಚಮಿಯ ಸಂದರ್ಭದಲ್ಲಿ, ಮಹಾಕಾಲ ದೇವಾಲಯವು ಅಪಾರ ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತದೆ. ಹಾಗಾಗಿ ದೇವಾಲಯದ ಅಭಿವೃದ್ಧಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಯನ್ನು ಯೋಜನಾಬದ್ಧವಾಗಿ ರೂಪಿಸಲಾಗಿದೆ. ಮಹಾಕಾಲ ಲೋಕದ ನಿರ್ಮಾಣ ಕಾರ್ಯವನ್ನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ನಂತರ 2017ರಲ್ಲಿ ಕೈಗೆತ್ತಿಕೊಳ್ಳಲಾಯಿತು.

ಸ್ಮಾರ್ಟ್ ಸಿಟಿ ಮಿಷನ್ ಅಡಿ ಅತಿ ದೊಡ್ಡ ಯೋಜನೆ : ಇದು ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ರೂಪುಗೊಂಡ ಅತಿದೊಡ್ಡ ಸಾರ್ವಜನಿಕ ಯೋಜನೆಯಾಗಿದೆ. 316.18 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಯೋಜನೆ ಪೂರ್ಣಗೊಂಡಿದ್ದು, ನಗರ ಮಟ್ಟದಿಂದ ದೇವಾಲಯದ ಪ್ರವೇಶ ದ್ವಾರದವರೆಗಿನ ಯೋಜನೆಯನ್ನು ಮುಖ್ಯ ನಗರದಲ್ಲಿನ ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಮಹಾಕಾಲ ಲೋಕದಲ್ಲಿ ವೃತ್ತಾಕಾರದ ನೀಲಿ ಕೊಳ ಕಾಣಬಹುದು, ಅದರ ಮಧ್ಯದಲ್ಲಿ ಭಗವಾನ್ ಶಿವನ ವಿಗ್ರಹವನ್ನು ಸ್ಥಾಪಿಸಲಾಗಿದೆ.

ಅಕ್ಟೋಬರ್ 12 ರಿಂದ ಸಾರ್ವಜನಿಕರ ಭೇಟಿಗೆ ಅವಕಾಶ : ಇಂದು ಹೊಸದಾಗಿ ನಿರ್ಮಿಸಲಾದ ಮಹಾಕಾಲ ಲೋಕ (ಕಾರಿಡಾರ್) ಉದ್ಘಾಟನೆ ನಂತರ, ಕಾರಿಡಾರ್ ಅನ್ನು ಅಕ್ಟೋಬರ್ 12 ರಿಂದ ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಲಾಗುವುದು. ಮಹಾಕಾಲ ಲೋಕವು ಶಿವನ ಬಗ್ಗೆ ಮಾಹಿತಿ ತಿಳಿಯಲು ಇಚ್ಛಿಸುವವರಿಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ದೇಶ ಮತ್ತು ವಿದೇಶಗಳಿಂದ ಭೇಟಿ ನೀಡುವ ಭಕ್ತರು ಶಿವನ ವಿವಿಧ ಅವತಾರಗಳನ್ನು ಮತ್ತು ಸನಾತನ ಧರ್ಮ (ಸನಾತನ ಧರ್ಮ) ಮತ್ತು ಪುರಾಣಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ : ಪಕ್ಷಕ್ಕಾಗಿ 3 ಹೊಸ ಚಿಹ್ನೆಗಳನ್ನು ಆಯೋಗಕ್ಕೆ ಸಲ್ಲಿಸಿದ ಶಿಂದೆ ಸೇನಾ ಬಣ

Last Updated : Oct 11, 2022, 7:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.