ETV Bharat / bharat

ಮೂರು ಮಕ್ಕಳ ತಾಯಿ ಎಸ್ಸೆಸ್ಸೆಲ್ಸಿಯಲ್ಲಿ ಟಾಪ್​.. ಕಾಶ್ಮೀರದ ಮಹಿಳೆಯ ಸಾಧನೆ - ಓದಿಗೆ ವಯಸ್ಸಿನ ಹಂಗಿಲ್ಲ

ಕಾಶ್ಮೀರದಲ್ಲಿ ಬರೀ ಮದ್ದು ಗುಂಡುಗಳ ಸದ್ದೇ ಕೇಳುತ್ತಿರುತ್ತೆ. ಆದರೆ, ಈ ಮಹಿಳೆ ಅದೆಲ್ಲವನ್ನೂ ಮೀರಿದ ಸಾಧನೆ ಮಾಡಿದ್ದಾರೆ. ಮಡಿಲಲ್ಲಿ ಮೂವರು ಮಕ್ಕಳಿದ್ದರೂ 10ನೇ ಕ್ಲಾಸ್​ ಪರೀಕ್ಷೆಯಲ್ಲಿ ಟಾಪರ್ ಆಗಿ ಪಾಸ್​ ಮಾಡಿದ್ದಾಳೆ.

mother-of-three-tops-class-10-exam-in-kashmir
ಕಾಶ್ಮೀರದ ಮಹಿಳೆಯ ಸಾಧನೆ
author img

By

Published : Sep 15, 2022, 10:34 PM IST

ಕಾಶ್ಮೀರ: ಜ್ಞಾನ, ಓದಿಗೆ ವಯಸ್ಸಿನ ಹಂಗಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಕಾಶ್ಮೀರದಲ್ಲಿ ಮೂವರು ಮಕ್ಕಳ ತಾಯಿಯೊಬ್ಬರು 10ನೇ ತರಗತಿ ಪರೀಕ್ಷೆ ಎದುರಿಸಿದ್ದು, ಎಲ್ಲರ ಹುಬ್ಬೇರಿಸುವ ಫಲಿತಾಂಶ ಪಡೆದಿದ್ದಾರೆ. ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿ ಅಚ್ಚರಿ ಮೂಡಿಸಿದ್ದಾರೆ.

ಮಂಗಳವಾರ ಪ್ರಕಟವಾದ 10ನೇ ತರಗತಿಯ ಪರೀಕ್ಷೆ ಫಲಿತಾಂಶದಲ್ಲಿ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಬಟರ್‌ಗಾಮ್ ಪ್ರದೇಶದ ಮೂರು ಮಕ್ಕಳ ತಾಯಿಯಾದ ಸಬ್ರಿನಾ ಬೇಗಂ ಉತ್ತೀರ್ಣರಾಗಿದ್ದಾರೆ. ಈಕೆ 500 ಅಂಕಗಳಿಗೆ 467 ಅಂಕಗಳನ್ನು ಪಡೆದಿದ್ದಾರೆ. ಗಣಿತ, ಉರ್ದು, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ ಈಕೆ ಅತ್ಯಧಿಕ ಅಂಕ ಪಡೆದಿದ್ದಾರೆ. ಕಾಶ್ಮೀರದಲ್ಲಿ 93.4 ರಷ್ಟು ಮಕ್ಕಳು A1 ಗ್ರೇಡ್ ಪಡೆದು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳೆ, 2012ರಲ್ಲಿ 9ನೇ ತರಗತಿ ಉತ್ತೀರ್ಣಳಾದ ಬಳಿಕ ಮರು ವರ್ಷವೇ ತನಗೆ ಮದುವೆ ಮಾಡಿಕೊಡಲಾಯಿತು. ಇದು ಶಿಕ್ಷಣದಿಂದ ದೂರವಾಗಲು ಕಾರಣವಾಯಿತು. ಬಳಿಕ ಮೂವರು ಮಕ್ಕಳಾದ ಮೇಲೆ ಶಿಕ್ಷಣ ಮುಂದುವರಿಸಲಾಗಲಿಲ್ಲ. ಬಳಿಕ 10 ನೇ ಕ್ಲಾಸ್​ ಪೂರೈಸಬೇಕು ಎಂದುಕೊಂಡು ಪರೀಕ್ಷೆ ಕಟ್ಟಿದೆ.

ಮೂವರು ಅಪ್ರಾಪ್ತ ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ ಅಧ್ಯಯನ ಮಾಡುವುದು ಸವಾಲಾಗಿತ್ತು. ಸಂಸಾರದ ಜಂಜಾಟದ ಮಧ್ಯೆ ಓದಿದ್ದು ನೆನಪಿಟ್ಟುಕೊಳ್ಳುವುದು ಕಷ್ಟವಾಗಿತ್ತು. ಆದರೆ ಸಮಯ ಕಳೆದಂತೆ ನಾನು ವಿಷಯಗಳನ್ನು ಗ್ರಹಿಸಲು ಶುರು ಮಾಡಿದೆ.

ಇದಲ್ಲದೇ, ನನ್ನ ಶಾಲಾ ದಿನಗಳಲ್ಲಿ ತರಗತಿಯಲ್ಲಿ ಅತ್ಯುತ್ತಮ ವಿದ್ಯಾರ್ಥಿನಿಯಾಗಿದ್ದೆ. ಅದೀಗ ಉತ್ತಮ ಅಂಕಗಳನ್ನು ಗಳಿಸಲು ಉತ್ತೇಜನ ನೀಡಿತು ಎಂದು ಸಬ್ರಿನಾ ಬೇಗಂ ಹೇಳಿದರು. A 1 ಗ್ರೇಡ್​ನಲ್ಲಿ ಪಾಸಾಗಿರುವ ಸಬ್ರಿನಾ ಬೇಗಂಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ.

ಓದಿ: ಆಫ್ರಿಕಾದಿಂದ ಭಾರತಕ್ಕೆ 8 ಚೀತಾ : ಸೆ 17ಕ್ಕೆ ಜೈಪುರ ವಿಮಾನ ನಿಲ್ದಾಣಕ್ಕೆ ಆಗಮನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.