ಚೆನ್ನೈ(ತಮಿಳುನಾಡು): ಅಪ್ರಾಪ್ತ ಮಗಳನ್ನು ಬಲವಂತವಾಗಿ ಲೈಂಗಿಕ ಕೆಲಸದಲ್ಲಿ ತೊಡಗುವಂತೆ ಒತ್ತಾಯ ಮಾಡಿರುವ ತಾಯಿಗೆ ಇದೀಗ ಮದ್ರಾಸ್ ಹೈಕೋರ್ಟ್ (Madras High Court) 10 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.
ಜೀವನೋಪಾಯಕ್ಕಾಗಿ ಹಣ ಸಂಪಾದನೆ ಮಾಡಲು ಹೆತ್ತ ತಾಯಿಯೇ ತನ್ನ ಅಪ್ರಾಪ್ತ ಮಗಳನ್ನು ಬಲವಂತವಾಗಿ ಲೈಂಗಿಕ ಕೆಲಸದಲ್ಲಿ ತೊಡಗುವಂತೆ ಪೀಡಿಸುತ್ತಿದ್ದಳು. ಈ ವೇಳೆ ಮಗಳು ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದಾಳೆ. ಬಾಲಕಿಯ ರಕ್ಷಿಸಿದ ಆಂಧ್ರಪ್ರದೇಶ ಪೊಲೀಸರು ಮರಳಿ ಚೆನ್ನೈಗೆ ಕಳುಹಿಸಿದ್ದರು. ಈ ವೇಳೆ, ಚೆನ್ನೈ ಪೊಲೀಸರ ಮುಂದೆ ಬಾಲಕಿ ತನ್ನ ಸಂಕಷ್ಟ ಹೇಳಿಕೊಂಡಿದ್ದಳು. ಹೀಗಾಗಿ ಸಂತ್ರಸ್ತ ಬಾಲಕಿಯ ತಾಯಿ ಸೇರಿದಂತೆ 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: IND vs NZ: 2ನೇ T20 ಮೇಲೆ ಕರಿನೆರಳು, ಪಂದ್ಯ ಮುಂದೂಡಿಕೆಗೆ ಹೈಕೋರ್ಟ್ ಮೆಟ್ಟಿಲೇರಿದ ವಕೀಲ
ಮದ್ರಾಸ್ ಹೈಕೋರ್ಟ್ನ ಪೊಸ್ಕೊ ವಿಶೇಷ ಪೀಠ (POSCO special court of Madras High court) ಬಾಲಕಿ ತಾಯಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದು ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು. ಹೈಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದ, ಆರೋಪ ಸಾಬೀತಾಗಿದೆ. ನ್ಯಾಯಮೂರ್ತಿ ವೇಲ್ಮುರುಗನ್ ಅವರು ಅಪರಾಧಿ ಮಹಿಳೆಗೆ 10 ವರ್ಷಗಳ ಜೈಲುಶಿಕ್ಷೆ ವಿಧಿಸಿದ್ದಾರೆ.