ETV Bharat / bharat

ಚಲಿಸುತ್ತಿದ್ದ ರೈಲಿನಿಂದ ಹಳಿ ಮೇಲೆ ಬಿದ್ದ ತಾಯಿ-ಮಗು.. ಪ್ರಾಣಾಪಾಯದಿಂದ ಪಾರಾಗಿದ್ದು ಹೀಗೆ!

author img

By

Published : Sep 4, 2021, 6:42 AM IST

ಚಲಿಸುತ್ತಿದ್ದ ರೈಲಿನಿಂದ ಹಳಿ ಮೇಲೆ ಬಿದ್ದರೂ ಪ್ರಾಣಾಪಾಯದಿಂದ ತಾಯಿ-ಮಗು ಪಾರಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

jamalapur junction
jamalapur junction

ಮುಂಗರ್(ಬಿಹಾರ) : ಆಯಸ್ಸು ಗಟ್ಟಿಯಾಗಿದ್ರೆ ಯಮ ಅಲ್ಲ.. ಆ ಬ್ರಹ್ಮ ಬಂದ್ರು ಏನೂ ಮಾಡೋಕಾಗಲ್ಲ ಎಂಬ ಮಾತಿದೆ. ಸದ್ಯ ಬಿಹಾರದಲ್ಲಿ ನಡೆದಿರುವ ಘಟನೆವೊಂದು ಅದಕ್ಕೆ ಜ್ವಲಂತ ಉದಾಹರಣೆಯಾಗಿದೆ.

ಹೌದು, ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ರೈಲ್ವೆ ಹಳಿ ಮೇಲೆ ತಾಯಿ-ಮಗು ಬಿದ್ದಿರುವ ಘಟನೆ ಮುಂಗರ್​​ನಲ್ಲಿ ನಡೆದಿದ್ದು, ಇದರ ವಿಡಿಯೋ ಇದೀಗ ವೈರಲ್​ ಆಗಿದೆ. ಈ ವೇಳೆ ಇಬ್ಬರು ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ರೈಲ್ವೆ ಹಳಿಯಲ್ಲಿ ಬಿದ್ದ ತಾಯಿ-ಮಗು

ಜಮಾಲಪುರ್​ ರೈಲ್ವೆ ಜಂಕ್ಷನ್​​ನಲ್ಲಿ ಈ ಘಟನೆ ನಡೆದಿದ್ದು, ತಾಯಿಯೋರ್ವಳು ತನ್ನ 3 ವರ್ಷದ ಮಗುವಿನೊಂದಿಗೆ ಲೋಕಮಾನ್ಯ ತಿಲಕ್​ ಎಕ್ಸ್​​ಪ್ರೆಸ್​​​ ರೈಲಿನಿಂದ ಕೆಳಗಿಳಿಯಲು ಮುಂದಾಗಿದ್ದ ಸಂದರ್ಭದಲ್ಲಿ ಆಯತಪ್ಪಿ ರೈಲ್ವೆ ಹಳಿ ಮೇಲೆ ಬಿದ್ದಿದ್ದಾಳೆ. ಈ ವೇಳೆ ಸ್ಥಳದಲ್ಲಿದ್ದ ರೈಲ್ವೆ ಪೊಲೀಸ್ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಮಹಿಳೆ ಹಾಗೂ ಮಗು ಸಂಪೂರ್ಣವಾಗಿ ರೈಲ್ವೆ ಹಳಿಯೊಳಗೆ ಬಿದ್ದಿರುವ ಕಾರಣ ರೈಲು ಅಲ್ಲಿಂದ ಹೋಗುವವರೆಗೆ ಅಸಹಾಯಕನಾಗಿ ಸುಮ್ಮನಾಗಿದ್ದಾರೆ.

ಇದನ್ನೂ ಓದಿರಿ: ಸಿಎಂ ನೇತೃತ್ವದಲ್ಲಿಂದು ಸಚಿವ ಸಂಪುಟ... ಹಲವು ಯೋಜನೆಗಳಿಗೆ ಅನುಮೋದನೆ ಸಾಧ್ಯತೆ

ಫ್ಲಾಟ್​ ಫಾರ್ಮ್​​ನಿಂದ ರೈಲು ದಾಟಿ ಹೋದ ಬಳಿಕ ಹಳಿಯಿಂದ ಮಹಿಳೆ ಹಾಗೂ ಮಗುವನ್ನ ಹೊರಗಡೆ ತೆಗೆಯಲಾಗಿದ್ದು, ಅವರಿಗೆ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.