ಸೂರತ್(ಗುಜರಾತ್): ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿದೆ. ಕೇಂದ್ರ ಸರ್ಕಾರ ಈಗಾಗಲೇ 'ಹರ್ ಘರ್ ತಿರಂಗಾ' ಅಭಿಯಾನ ಕೈಗೊಂಡಿದೆ. ಈ ನಿಟ್ಟಿನಲ್ಲಿ ರಾಷ್ಟ್ರಧ್ವಜ ತಯಾರಿ ಕೆಲಸ ಭರದಿಂದ ಸಾಗುತ್ತಿದೆ.
ಆಗಸ್ಟ್ 13 ರಿಂದ ಆಗಸ್ಟ್ 15 ರವರೆಗೆ ದೇಶದ ಪ್ರತಿ ಮನೆಯಲ್ಲಿಯೂ ತ್ರಿವರ್ಣ ಧ್ವಜ ಹಾರಿಸುವ ರಾಷ್ಟ್ರೀಯ ಮಹತ್ವದ ಅಭಿಯಾನವಿದು. ಇದಕ್ಕಾಗಿ ಸೂರತ್‌ನಿಂದ ಐದು ರಾಜ್ಯಗಳಿಗೆ ಹತ್ತು ಕೋಟಿಗೂ ಹೆಚ್ಚು ತ್ರಿವರ್ಣ ಧ್ವಜಗಳನ್ನು ರವಾನಿಸಲಾಗುತ್ತಿದೆ. ತ್ರಿವರ್ಣ ಧ್ವಜ ಸಿದ್ಧಪಡಿಸಿದವರು ಗೌರವಾರ್ಥವಾಗಿ ಶೂ ಮತ್ತು ಚಪ್ಪಲಿ ಧರಿಸದೇ ಈ ಪವಿತ್ರ ಕಾರ್ಯ ಮಾಡಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲೊಂದು 'ಪಾಕಿಸ್ತಾನ'.. ಇಲ್ಲಿ ಹಾರಾಡುತ್ತೆ ದೇಶದ ಹಮ್ಮೆಯ ತಿರಂಗಾ ಧ್ವಜ
ದಕ್ಷಿಣ ಗುಜರಾತ್ ಪ್ರೊಸೆಸಿಂಗ್ ಹೌಸ್ ಅಸೋಸಿಯೇಷನ್ ಅಧ್ಯಕ್ಷ ಜಿತು ವಖಾರಿಯಾ ಮಾತನಾಡಿ, "10 ಕೋಟಿ ತ್ರಿವರ್ಣ ಧ್ವಜ ತಯಾರಿಸುವಂತೆ ಆರ್ಡರ್ ಬಂದಿದೆ. ಈಗಾಗಲೇ ನಾವು ಸುಮಾರು 12 ಕೋಟಿ ತ್ರಿವರ್ಣಗಳನ್ನು ಉತ್ಪಾದಿಸಿದ್ದೇವೆ. ಇನ್ನೂ ಹೆಚ್ಚಿನ ಆರ್ಡರ್ಗಳು ಬರುತ್ತಿವೆ. ಗೋವಾ ಸರ್ಕಾರ ಸಹ ಸೂರತ್ ವ್ಯಾಪಾರಿಗಳನ್ನು ಸಂಪರ್ಕಿಸಿ ತ್ರಿವರ್ಣ ಧ್ವಜಗಳನ್ನು ತಯಾರಿಸುವಂತೆ ಕೇಳಿದ್ದಾರೆ. ಆದ್ರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ತ್ರಿವರ್ಣ ಧ್ವಜವನ್ನು ಶೀಘ್ರದಲ್ಲೇ ಸಿದ್ಧಪಡಿಸುವ ಸ್ಥಿತಿಯಲ್ಲಿ ಯಾವುದೇ ಉದ್ಯಮವಿಲ್ಲ. ಹಾಗಾಗಿ ನಾವು ಆರ್ಡರ್ಗಳನ್ನು ರದ್ದುಗೊಳಿಸುತ್ತಿದ್ದೇವೆ" ಎಂದರು.