ETV Bharat / bharat

ಪಾಟ್ನಾದಲ್ಲಿ ಮದ್ಯ ಸೇವಿಸಿ ನರ್ಸ್ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಬಿಹಾರ ರಾಜಧಾನಿ ಪಾಟ್ನಾದ ಸರ್ಕಾರಿ ಆಸ್ಪತ್ರೆ ನರ್ಸ್ ಮೇಲೆ ಅತ್ಯಾಚಾರ ಎಸಗಿದ ಆರೋಪಿ ರಾಜೇಶ್ ಸಿಕ್ಕಿಬಿದ್ದಿದ್ದಾನೆ. ಈ ಪ್ರಕರಣ ಕಳೆದ 2021ರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ರಾಜೇಶ್
ಆರೋಪಿ ರಾಜೇಶ್
author img

By

Published : Oct 7, 2022, 4:47 PM IST

ಪಾಟ್ನಾ(ಬಿಹಾರ): ರಾಜಧಾನಿ ಪಾಟ್ನಾದಲ್ಲಿ ಸರ್ಕಾರಿ ಆಸ್ಪತ್ರೆಯ ನರ್ಸ್​ ಜೊತೆ ಅನುಚಿತವಾಗಿ ವರ್ತಿಸಿದ ಆರೋಪಿ ಕಾಂಪೌಂಡರ್​ ನನ್ನು ಬಂಧಿಸಲಾಗಿದೆ.

ಪತ್ರಕರ್ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನೋರಂಜನ್ ಭಾರತಿ ಅವರು ಮಾತನಾಡಿದರು

ಪತ್ರಕರ್ ನಗರ ಪೊಲೀಸ್ ಠಾಣೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಕಾಂಪೌಂಡರ್ ಸರ್ಕಾರಿ ಆಸ್ಪತ್ರೆಯ ನರ್ಸ್ ಜೊತೆ ಮದ್ಯ ಸೇವಿಸಿ ಅನುಚಿತವಾಗಿ ವರ್ತಿಸಿದ್ದು, ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾರೆ. ಇದರಿಂದ ಹತಾಶಳಾದ ಸಂತ್ರಸ್ತ ನರ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸುಮಾರು ಒಂದು ವರ್ಷದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅದೇ ಸಮಯದಲ್ಲಿ, ಪೊಲೀಸರು ಈ ಪ್ರಕರಣದಲ್ಲಿ ತನಿಖೆಯಲ್ಲಿ ತೊಡಗಿದ್ದಾರೆ.

2021 ರಲ್ಲಿ ಮೊದಲ ಬಾರಿಗೆ ಅತ್ಯಾಚಾರ: ಕಾಂಪೌಂಡರ್ ರಾಜೇಶ್ ಅವರು ನರ್ಸ್‌ಗೆ ಮದ್ಯಪಾನ ಮಾಡಿ 2021 ರಿಂದ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ನರ್ಸ್ ಮೇಲೆ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ. ನೀವು ಕೇಳದಿದ್ದರೆ ಆ ವಿಡಿಯೋವನ್ನು ವೈರಲ್ ಮಾಡುತ್ತೇವೆ ಎಂದು ಹೆದರಿಸಿದ್ದಾನೆ. ಅಷ್ಟೇ ಅಲ್ಲದೆ ಆರೋಪಿ ಮುಖಕ್ಕೆ ಆ್ಯಸಿಡ್ ಎರಚಿ ಸುಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾನೆ.

ಪತ್ರಕರ್ ನಗರ ಪೊಲೀಸ್ ಠಾಣೆ
ಪತ್ರಕರ್ ನಗರ ಪೊಲೀಸ್ ಠಾಣೆ

ಈ ಎಲ್ಲ ವಿಷಯಗಳಿಂದ ಹೆದರಿದ ಸಂತ್ರಸ್ತ ಬಾಲಕಿ ಕೊನೆಗೆ ಪೊಲೀಸರಿಗೆ ಎಲ್ಲ ವಿಷಯ ತಿಳಿಸಿದ್ದು, ಬಳಿಕ ಪೊಲೀಸರು ಆರೋಪಿ ಕಾಂಪೌಂಡರ್ ರಾಜೇಶ್ ಕುಮಾರ್ ನನ್ನು ಸೆಕ್ರೆಟರಿಯೇಟ್ ಕಾಲೋನಿಯಲ್ಲಿರುವ ಆತನ ಕೊಠಡಿಯಿಂದ ಬಂಧಿಸಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಕಂಪೌಂಡರ್​ಗೆ ಶಿಕ್ಷೆ ಕೊಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ನರ್ಸ್ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಬಂಧನ: ಪಾಟ್ನಾದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕಾಂಪೌಂಡರ್ ಕಳೆದ ವರ್ಷ 2021 ರಲ್ಲಿ ನರ್ಸ್‌ಗೆ ತನ್ನ ಕೋಣೆಯ ಪಕ್ಕದಲ್ಲಿ ಮತ್ತೊಂದು ಕೋಣೆ ಕೊಡಿಸಿದ್ದಾನೆ. ಒಂದು ದಿನ ನರ್ಸ್​ಗೆ ಮದ್ಯ ಕುಡಿಸಿದ್ದಾನೆ. ನಂತರ ಸಂತ್ರಸ್ತೆಗೆ ಕಿರುಕುಳ ನೀಡಿ ವಿಡಿಯೋ ಮಾಡಿ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದಾನೆ ಎಂಬುದು ತಿಳಿದು ಬಂದಿದೆ.

'ನಮ್ಮ ಸಮಾಜದ ಗೌರವಾನ್ವಿತ ಮಹಿಳೆಯೊಂದಿಗೆ ಅಕ್ರಮ ಎಸಗಿರುವ ಬಗ್ಗೆ ಮಾಹಿತಿ ಬಂದಿದೆ. ದೂರಿನ ಆಧಾರದ ಮೇರೆಗೆ ಸಂಶೋಧನೆ ನಡೆಸುತ್ತಿದ್ದೇವೆ. ಮಹಿಳೆಯರ ಘನತೆ ಮತ್ತು ಸುರಕ್ಷತೆ ನೋಡಿಕೊಳ್ಳಲಾಗುವುದು. ಆಕೆಯೂ ನಮ್ಮ ಸಹೋದರಿ ಇದ್ದಂತೆ. ಆರೋಪಿಯನ್ನು ಬಂಧಿಸಲಾಗಿದ್ದು, ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ' ಎಂದು ಪತ್ರಕರ್ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನೋರಂಜನ್ ಭಾರತಿ ಅವರು ತಿಳಿಸಿದ್ದಾರೆ.

ಓದಿ: ಸರ್ಕಾರಿ ನೌಕರ ಮತ್ತು ಸಹಚರರಿಂದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ..

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.