ETV Bharat / bharat

ರಂಜಾನ್ ಮಾಸ ಆರಂಭ: ಪ್ರಧಾನಿ ಮೋದಿ, ರಾಹುಲ್ ಗಾಂಧಿ ಶುಭಾಶಯ​ - Congress leader Rahul Gandhi tweet

ಮುಸ್ಲಿಮರ ರಂಜಾನ್ ಮಾಸ ಆರಂಭದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಭ ಕೋರಿದ್ದಾರೆ.

Ramzan
ಮೋದಿ, ರಾಹುಲ್​
author img

By

Published : Apr 3, 2022, 7:14 AM IST

ನವದೆಹಲಿ: ರಂಜಾನ್ ಮಾಸಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಟ್ವೀಟ್​ ಮೂಲಕ ಸಮಸ್ತ ಮುಸ್ಲಿಂ ಧರ್ಮೀಯರಿಗೆ ಶುಭಾಶಯ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಮೋದಿ, 'ಸಮಸ್ತ ಮುಸ್ಲಿಮರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು. ಈ ಪವಿತ್ರ ತಿಂಗಳು ಬಡವರ ಸೇವೆ ಮಾಡಲು ಜನರನ್ನು ಪ್ರೇರೇಪಿಸಲಿ. ಇದು ನಮ್ಮ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಇನ್ನಷ್ಟು ಹೆಚ್ಚಿಸಲಿ' ಎಂದು ಆಶಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, 'ರಂಜಾನ್ ಶುಭಾಶಯಗಳು. ಈ ಪವಿತ್ರ ಮಾಸವು ಎಲ್ಲರಿಗೂ ಉತ್ತಮ ಆರೋಗ್ಯ, ಶಾಂತಿ ಮತ್ತು ಸಮೃದ್ಧಿ ತರಲಿ' ಎಂದು ಹಾರೈಸಿದ್ದಾರೆ.

ರಂಜಾನ್ ‘ಚಾಂದ್’ (ಚಂದ್ರ) ಶನಿವಾರ ಕಾಣಿಸಿಕೊಂಡಿದ್ದು, ಭಾನುವಾರ ಮೊದಲ ‘ರೋಜಾ’ ಆಚರಿಸಲಾಗುವುದು. ರಂಜಾನ್ ಆಚರಣೆಯನ್ನು ಇಸ್ಲಾಂನ ಐದು ಸ್ತಂಭಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಜಿಂಕೆ ಕೊಂಬಿನ ರಕ್ತದಿಂದ ಪುಟಿನ್ ಸ್ನಾನ.. ಯಾಕಾಗಿ ಈ ಜಳಕ.. ಕೇಳಿದ್ರೆ ನೀವೂ ಬಿಡಲ್ಲ ಅನ್ನಿ!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.