ಗೋಮತಿ (ತ್ರಿಪುರ): ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರ ಗೋಮತಿ ಜಿಲ್ಲೆಯ ಉದಯಪುರದಲ್ಲಿರುವ ಪೂರ್ವಜರ ಮನೆಯ ಮೇಲೆ ಮಂಗಳವಾರ ತಡರಾತ್ರಿ ಕೆಲವು ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಅರ್ಚಕರ ಮೇಲೂ ಹಲ್ಲೆ ನಡೆಸಿದಿದೆ. ಉದಯಪುರದ ಜಮ್ಜುರಿ ಪ್ರದೇಶದ ರಾಜನಗರದಲ್ಲಿರುವ ದೇಬ್ ಅವರ ನಿವಾಸಕ್ಕೆ ಪುರೋಹಿತರ ಗುಂಪು ಆಗಮಿಸಿದ್ದಾಗ ಘಟನೆ ಸಂಭವಿಸಿದೆ.
ದೇಬ್ ಅವರ ತಂದೆಯ ವಾರ್ಷಿಕ ಶ್ರಾದ್ಧ ಸಮಾರಂಭವಿದ್ದು ಯಜ್ಞ ಕಾರ್ಯ ನೆರವೇರಿಸಲು ಅರ್ಚಕರು ಬಂದಿದ್ದರು. ಈ ವೇಳೆ ಬಿಜೆಪಿ ರಾಜ್ಯಸಭಾ ಸಂಸದರೂ ಆಗಿರುವ ಬಿಪ್ಲಬ್ ಕುಮಾರ್ ನಿವಾಸಕ್ಕೆ ನುಗ್ಗಿದ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಸ್ಥಳೀಯರು ಅರ್ಚಕರನ್ನು ರಕ್ಷಿಸಲು ಮುಂದಾದಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ವರದಿಗಳ ಪ್ರಕಾರ, ದುಷ್ಕರ್ಮಿಗಳು ಅರ್ಚಕರ ಮೇಲೆ ಮಾತ್ರ ದಾಳಿ ಮಾಡದೇ ಮನೆ ಮುಂದೆ ನಿಲ್ಲಿಸಲಾಗಿದ್ದ ಹಲವಾರು ದ್ವಿಚಕ್ರ ವಾಹನಗಳು ಹಾಗೂ ಕಾರುಗಳನ್ನು ಕೂಡ ಧ್ವಂಸಗೊಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮನೆ ಪಕ್ಕದಲ್ಲಿದ್ದ ಅಂಗಡಿಗಳಿಗೂ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ.
-
Former #Tripura CM #BiplabDeb’s ancestral house in Udaipur, Tripura ransacked & torched by miscreants. His house was attacked today ahead of a ‘yagna’ scheduled to be held tomorrow to mark his father’s death anniversary. pic.twitter.com/5qD26pRbzb
— Pooja Mehta (@pooja_news) January 3, 2023 " class="align-text-top noRightClick twitterSection" data="
">Former #Tripura CM #BiplabDeb’s ancestral house in Udaipur, Tripura ransacked & torched by miscreants. His house was attacked today ahead of a ‘yagna’ scheduled to be held tomorrow to mark his father’s death anniversary. pic.twitter.com/5qD26pRbzb
— Pooja Mehta (@pooja_news) January 3, 2023Former #Tripura CM #BiplabDeb’s ancestral house in Udaipur, Tripura ransacked & torched by miscreants. His house was attacked today ahead of a ‘yagna’ scheduled to be held tomorrow to mark his father’s death anniversary. pic.twitter.com/5qD26pRbzb
— Pooja Mehta (@pooja_news) January 3, 2023
ಇದನ್ನೂ ಓದಿ: ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಅಪಾಯದಿಂದ ಕಂದಮ್ಮ ಪಾರು
'ಬುಧವಾರ ನಡೆಯಲಿರುವ ಯಜ್ಞದ ಸಿದ್ಧತೆಗಳನ್ನು ಗಮನಿಸುವಂತೆ ನಮ್ಮ ಗುರುದೇವರು ಸೂಚಿಸಿದ ಕಾರಣ ನಾನು ಮಾ ತ್ರಿಪುರ ಸುಂದರಿ ದೇವಸ್ಥಾನಕ್ಕೆ ಭೇಟಿ ನೀಡಲು ಬಂದಿದ್ದೆ. ಇದ್ದಕ್ಕಿದ್ದಂತೆ ದಿಢೀರ್ ಆಗಮಿಸಿದ ಗುಂಪೊಂದು ನನ್ನ ಮೇಲೆ ದಾಳಿ ಮಾಡಿ, ನನ್ನ ವಾಹನವನ್ನು ಧ್ವಂಸಗೊಳಿಸಿತು' ಎಂದು ಹಾನಿಗೊಳಗಾದ ವಾಹನದ ಮಾಲೀಕ ಜಿತೇಂದ್ರ ಕೌಶಿಕ್ ಹೇಳಿದರು. ಘಟನೆಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ಆರಂಭಿಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಉಪವಿಭಾಗದ ಪೊಲೀಸ್ ಅಧಿಕಾರಿ ನಿರುಪಮ ದೆಬ್ಬರ್ಮಾ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದೇಬಂಜನಾ ರಾಯ್ ಪರಿಸ್ಥಿತಿ ನಿಭಾಯಿಸಲು ಸ್ಥಳಕ್ಕೆ ಧಾವಿಸಿದ್ದಾರೆ.
ಇದನ್ನೂ ಓದಿ:
ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ರು.. ಕುಟುಂಬವನ್ನು ಸಜೀವವಾಗಿ ಸುಟ್ಟು ಹಾಕಲು ಕಿರಾತಕರ ಯತ್ನ
ಪುಣೆ: ಕಾಲೇಜು ಆವರಣದಲ್ಲಿ ಮಾರಕಾಸ್ತ್ರಗಳಿಂದ ಜನರನ್ನು ಭಯಗೊಳಿಸಲು ಯತ್ನಿಸಿದ ದುಷ್ಕರ್ಮಿಗಳು