ಕೈಕಲೂರು (ಆಂಧ್ರಪ್ರದೇಶ) : ವೈಎಸ್‌ಆರ್‌ಸಿಪಿ ಎಂಎಲ್‌ಸಿ ಜಯಮಂಗಲ ವೆಂಕಟ ರಮಣ ಮೂರನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಮಾರಂಭದಲ್ಲಿ ಕೈಕಲೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಲ್ಲೂರು ವ್ಯಾಪ್ತಿಯ ಅರಣ್ಯ ಇಲಾಖೆಯ ಸೆಕ್ಷನ್ ಆಫೀಸರ್ ಸುಜಾತಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಆರಂಭಿಸಿದ್ದಾರೆ. ಈ ಸಮಾರಂಭದಲ್ಲಿ ಸಬ್ ರಿಜಿಸ್ಟ್ರಾರ್ ಮದುವೆ ಪ್ರಮಾಣಪತ್ರ ವಿತರಿಸಿದರು.
ಗಮನಾರ್ಹ ಸಂಗತಿಯೆಂದರೆ, ಜಯಮಂಗಲ ಅವರ ಎರಡನೇ ಪತ್ನಿ ಸುನೀತಾ ಮತ್ತು ಅವರ ಮಗ ಮದುವೆಯ ಸಮಯದಲ್ಲಿ ಹಾಜರಿದ್ದರು. ಸುನೀತಾ ಈ ಮದುವೆಗೆ ಸಾಕ್ಷಿಯಾಗಿ ಸಹಿ ಹಾಕಿದ್ದಾರೆ. ಎಂಎಲ್‌ಸಿ ಜಯಮಂಗಲ ವೆಂಕಟರಮಣ ಅವರ ಮೊದಲ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಅವರಿಗೆ ಓರ್ವ ಹೆಣ್ಣು ಮಗಳಿದ್ದಾಳೆ. ನಂತರ ಅವರು ಎರಡನೇ ಪತ್ನಿಯಾಗಿ ಸುನೀತಾ ಅವರನ್ನು ವಿವಾಹವಾಗಿದ್ದರು. ಅವರಿಗೆ ಒಬ್ಬ ಪುತ್ರಿ ಮತ್ತು ಮಗ ಇದ್ದಾರೆ. ಪ್ರಸ್ತುತ ಅರಣ್ಯ ಇಲಾಖೆಯಲ್ಲಿ ಸೆಕ್ಷನ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುಜಾತಾ ಅವರನ್ನು ಎಂಎಲ್‌ಸಿ ಜಯಮಂಗಲ ಅವರು ಮೂರನೇ ಹೆಂಡತಿಯಾಗಿ ಸ್ವೀಕರಿಸಿದ್ದಾರೆ.
ಎಂಎಲ್‌ಸಿ ಜಯಮಂಗಲ ವೆಂಕಟರಮಣ ಅವರ ಮೂರನೇ ಮದುವೆಗೆ ಸಾಕ್ಷಿಯಾಗಿ ಅವರ ಎರಡನೇ ಹೆಂಡತಿ ಸಹಿ ಹಾಕಿರುವ ಈ ಘಟನೆ ಎಲ್ಲೆಡೆ ಗಮನ ಸೆಳೆದಿದೆ.
ಹೆಲಿಕಾಪ್ಟರ್ನಲ್ಲಿ ಮದುವೆ ಮೆರವಣಿಗೆ (ಪ್ರತ್ಯೇಕ ಘಟನೆ): ಗುಜರಾತ್ ರಾಜ್ಯದಲ್ಲಿ ಈಗ ಮದುವೆಯ ಸೀಸನ್ ಶುರುವಾಗಿದೆ. ಇಲ್ಲೊಬ್ಬ ವರ ಹೆಲಿಕಾಪ್ಟರ್ನಲ್ಲಿ ಮದುವೆ ಮೆರವಣಿಗೆ ಮಾಡಿಕೊಂಡು ಎಲ್ಲರ ಗಮನ (ನವೆಂಬರ್ 25-2023) ಸೆಳೆದಿದ್ದಾರೆ. ಹೌದು, ದ್ವಾರಕಾ ಜಿಲ್ಲೆಯ ಖಂಬಲಿಯಾದ ಕಾಥಿ ದೇವಲಿಯಾ ಗ್ರಾಮದ ವರ ಜೈಭದ್ರ ಸಿಂಗ್ ಬಹದ್ದೂರ್ ಸಿಂಗ್ ವಾಧೇರ್ ಹೆಲಿಕಾಪ್ಟರ್ ಮೂಲಕ ಮದುವೆ ಮೆರವಣಿಗೆ ಸಾಗಿ ಭಾವನಗರವನ್ನು ತಲುಪಿದ್ದರು.
ಕೇವಲ 1200 ಜನಸಂಖ್ಯೆಯನ್ನು ಹೊಂದಿರುವ ಕಾಥಿ ದೇವಲಿಯಾ ಗ್ರಾಮದಲ್ಲಿ ಈ ವಿಶೇಷ ಮದುವೆ ಮೆರವಣಿಗೆ ನೋಡಲು ಜನ ಸಾಗರವೇ ಹರಿದು ಬಂದಿತ್ತು. ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ವೊಂದು ತಮ್ಮ ಗ್ರಾಮದಲ್ಲಿ ಇಳಿದಿರುವುದನ್ನು ಕಂಡ ಗ್ರಾಮಸ್ಥರು, ಹೆಲಿಕಾಪ್ಟರ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು.
ಕಾಥಿ ದೇವಲಿಯಾದಿಂದ ತಮ್ಮ ಗ್ರಾಮದ ವರ ಹೆಲಿಕಾಪ್ಟರ್ ಮೂಲಕ ಮದುವೆ ಮೆರವಣಿಗೆಯಲ್ಲಿ ಸಾಗಿದಾಗ ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿತ್ತು. 'ಮಗನ ಮದುವೆ ಮೆರವಣಿಗೆ ಹೆಲಿಕಾಪ್ಟರ್ ಮೂಲಕ ನಡೆಯುತ್ತದೆ ಅನ್ನೋದು ನಮ್ಮ ಕನಸಾಗಿತ್ತು, ಅದು ಈಗ ನೆರವೇರಿದೆ. ನಮ್ಮ ಕುಟುಂಬ ಮತ್ತು ಗ್ರಾಮಸ್ಥರು ತುಂಬಾ ಸಂತೋಷವಾಗಿದ್ದಾರೆ' ಎಂದು ವರನ ತಂದೆ ಹೇಳಿದ್ದರು.
ಇದನ್ನೂ ಓದಿ : ರಾಯಲ್ ವೆಡ್ಡಿಂಗ್: ಹೆಲಿಕಾಪ್ಟರ್ನಲ್ಲಿ ಮದುವೆ ಮೆರವಣಿಗೆ ಮಾಡಿಕೊಂಡ ವರ - ವಿಡಿಯೋ