ಹೈದರಾಬಾದ್: ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಐವರು ಅಪ್ರಾಪ್ತರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಆರೋಪಿಗಳನ್ನು ಜುಬ್ಲಿಹಿಲ್ಸ್ಗೆ ಕರೆತರಲಾಗಿದ್ದು, 4 ಗಂಟೆಗಳ ವಿಚಾರಣೆ ನಡೆದಿದೆ.
ಅಪರಾಧದ ದೃಶ್ಯ ಮರುನಿರ್ಮಾಣ ಸಂದರ್ಭದಲ್ಲಿ ಕಾರ್ಪೊರೇಟರ್ ಪುತ್ರನೇ ಮೊದಲ ಬಾರಿಗೆ ಲೈಂಗಿಕ ದೌರ್ಜನ್ಯ ಎಸಗಿರುವುದು ಪೊಲೀಸರಿಗೆ ತಿಳಿದುಬಂದಿದೆ. ದೈಹಿಕ ಪ್ರಚೋದನೆಗೆ ಒಳಗಾಗಿ ಆತ ದುಷ್ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಆರೋಪಿಗಳು ಪರಸ್ಪರ ಆರೋಪ ಮಾಡಿದ್ದಾರೆ.
ವಿಚಾರಣೆಯ ನಂತರ ಆರೋಪಿಗಳನ್ನು ಜುಬಿಲಿಹಿಲ್ಸ್ ಪಿಎಸ್ನಿಂದ ಜುವೆನೈಲ್ ಹೋಮ್ಗೆ ಸ್ಥಳಾಂತರಿಸಲಾಗಿದೆ. ನಂತರ ಇಂದು ಬೆಳಗ್ಗೆ ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರ ಆದೇಶದ ಮೇರೆಗೆ ಚಂಚಲ್ ಗುಡಾ ಜೈಲಿಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ :ಮೈಸೂರಿನ ಪಾರಂಪರಿಕ ಲಲಿತಮಹಲ್ ಹೋಟೆಲ್ ತಾಜ್ ಗ್ರೂಪ್ ತೆಕ್ಕೆಗೆ?