ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು ಪೂಂಚ್ ಜಿಲ್ಲೆಯ ಸುರನ್‌ಕೋಟೆ ಪ್ರದೇಶದ ದೂರಿ ಧೋಕ್ ಗ್ರಾಮದಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿವೆ.
ಪೊಲೀಸ್ ಮತ್ತು ಸೇನೆಯ ಯಶಸ್ವಿ ಜಂಟಿ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನ ಹತ್ಯೆಯಾಗಿದೆ ಎಂದು ಸೇನೆಯ ಪಿಆರ್‌ಒ ಸ್ಪಷ್ಟಪಡಿಸಿದ್ದಾರೆ. ಸುರನ್‌ಕೋಟೆ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಉಗ್ರರು ಅಡಗಿರುವ ಬಗ್ಗೆ ಗುಪ್ತಚರ ದಳ ಮಾಹಿತಿ ನೀಡಿತ್ತು.
ಹೀಗಾಗಿ, ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಶೋಧ ಕಾರ್ಯಾಚರಣೆಗೆ ಮುಂದಾಗಿ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಸೇನೆಯ ಗುಂಡೇಟಿಗೆ ಉಗ್ರ ಹತನಾಗಿದ್ದಾನೆ.
ಇಂದು ಮುಂಜಾನೆ ನಡೆದ ಎನ್‌ಕೌಂಟರ್ ವೇಳೆ, ಭದ್ರತಾ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿ ಉಗ್ರರು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಹತ್ಯೆಯಾದವನಿಂದ ಒಂದು ಎಕೆ -47 ರೈಫಲ್, ನಾಲ್ಕು ಮ್ಯಾಗಜೀನ್‌ಗಳು ಹಾಗೂ ಇತರೆ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಿಆರ್‌ಒ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪೊಲೀಸ್ ಬಸ್ ಮೇಲೆ ಶ್ರೀನಗರ ಟೈಗರ್ಸ್ ದಾಳಿ: ಮೂರಕ್ಕೇರಿದ ಹುತಾತ್ಮರ ಸಂಖ್ಯೆ