ETV Bharat / bharat

ಬಂಗಾಳಕೊಲ್ಲಿಯಲ್ಲಿ ವಾಯುಪಡೆ, ನೌಕಾಪಡೆಯಿಂದ 'ಮಿಲನ್'​ ತಾಲೀಮು

ಇಲ್ಲಿನ ಬಂಗಾಳಕೊಲ್ಲಿ ಸಮುದ್ರದಲ್ಲಿ ಭಾರತದ ವಾಯುಪಡೆ ಮತ್ತು ನೌಕಾಪಡೆಗಳು ಮಿಲನ್​ -22 ಹೆಸರಲ್ಲಿ ಮಂಗಳವಾರ ಯುದ್ಧಾಭ್ಯಾಸ ನಡೆಸಿದವು. ಈ ಬಹುಪಕ್ಷೀಯ ತಾಲೀಮಿನಲ್ಲಿ 26 ಹಡಗುಗಳು, 21 ವಿಮಾನಗಳು ಮತ್ತು ಒಂದು ಜಲಾಂತರ್ಗಾಮಿ ನೌಕೆ ಭಾಗವಹಿಸಿವೆ.

author img

By

Published : Mar 2, 2022, 1:01 PM IST

Milan sea phase
ಮಿಲನ್'​ ತಾಲೀಮು

ವಿಶಾಖಪಟ್ಟಣಂ(ಆಂಧ್ರಪ್ರದೇಶ): ಇಲ್ಲಿನ ಬಂಗಾಳಕೊಲ್ಲಿ ಸಮುದ್ರದಲ್ಲಿ ಭಾರತದ ವಾಯುಪಡೆ ಮತ್ತು ನೌಕಾಪಡೆಗಳು ಮಿಲನ್​ -22 ಹೆಸರಲ್ಲಿ ಮಂಗಳವಾರ ಯುದ್ಧಾಭ್ಯಾಸ ನಡೆಸಿದವು. ಈ ಬಹುಪಕ್ಷೀಯ ತಾಲೀಮಿನಲ್ಲಿ 26 ಹಡಗುಗಳು, 21 ವಿಮಾನಗಳು ಮತ್ತು ಒಂದು ಜಲಾಂತರ್ಗಾಮಿ ನೌಕೆ ಭಾಗವಹಿಸಿವೆ.

ಮಾರ್ಚ್ 4 ರವರೆಗೂ ಈ ತಾಲೀಮು ನಡೆಯಲಿದ್ದು, ಸಮುದ್ರ ಕಾರ್ಯಾಚರಣೆಗಳ ಎಲ್ಲ ಮೂರು ಆಯಾಮಗಳಲ್ಲಿ (ನೀರಿನ ಒಳಗೆ, ಮೇಲೆ ಮತ್ತು ವಾಯು) ಸುಧಾರಿತ ಮತ್ತು ಪ್ರಬಲ ಯುದ್ಧತಂತ್ರದ ಅಭ್ಯಾಸವನ್ನು ಒಳಗೊಂಡಿದೆ. ಈ ತಾಲೀಮು ಪರಸ್ಪರ ಎರಡು ಪಡೆಗಳ ಮಧ್ಯೆ ಕಾರ್ಯಕ್ಷಮತೆ ಮತ್ತು ಕಡಲ ಸಹಕಾರ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಇದಕ್ಕೂ ಮೊದಲು, ಪೂರ್ವ ನೌಕಾ ತಾಲೀಮಿನ ನೇತೃತ್ವವನ್ನು ನೌಕಾಪಡೆಯ ಹಿಂದಿನ ಅಡ್ಮಿರಲ್​ ಸಂಜಯ್ ಭಲ್ಲಾ ವಹಿಸಿದ್ದರು. ಈಸ್ಟರ್ನ್ ಫ್ಲೀಟ್ ಕಮಾಂಡಿಂಗ್ ಫ್ಲ್ಯಾಗ್ ಆಫೀಸರ್ ಮತ್ತು ಹಿರಿಯ ಅಧಿಕಾರಿಗಳು, ಕಮಾಂಡಿಂಗ್ ಅಧಿಕಾರಿಗಳು ಮತ್ತು ಮಿತ್ರರಾಷ್ಟ್ರಗಳ ಎಲ್ಲ ಘಟಕಗಳ ಯೋಜನಾ ತಂಡಗಳು ಭಾಗವಹಿಸಿದ್ದವು

ಓದಿ; ಜಿ.ಪಂ. ಚುನಾವಣೆ: 851 ರಲ್ಲಿ 766 ಕ್ಷೇತ್ರ ಗೆದ್ದು ಬೀಗಿದ ಪಟ್ನಾಯಕ್​ ಪಡೆ.. ಬಿಜೆಪಿಗೆ ದೊಡ್ಡ ಮುಖಭಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.