ETV Bharat / bharat

ವರದಕ್ಷಿಣೆ ಕಿರುಕುಳ: ಮನೆಯ ಗೋಡೆಗಳ ಮೇಲೆ ಸೂಸೈಡ್​ ನೋಟ್​ ಬರೆದು ಮಹಿಳೆ ಆತ್ಮಹತ್ಯೆ - ಸೂಸೈಡ್​ ನೋಟ್​ ಬರೆದು ಮಹಿಳೆ ಆತ್ಮಹತ್ಯೆ

ಜಾರ್ಖಂಡ್​ನ ರಾಂಚಿಯಲ್ಲಿ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಮಹಿಳೆ ಮನೆಯ ಗೋಡೆಗಳ ಮೇಲೆ ಸೂಸೈಡ್​ ನೋಟ್​ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

married-woman-commits-suicide-in-ranchi
ವರದಕ್ಷಿಣೆ ಕಿರುಕುಳ: ಮನೆಯ ಗೋಡೆಗಳ ಮೇಲೆ ಸೂಸೈಡ್​ ನೋಟ್​ ಬರೆದು ಮಹಿಳೆ ಆತ್ಮಹತ್ಯೆ
author img

By

Published : Aug 10, 2022, 3:59 PM IST

ರಾಂಚಿ (ಜಾರ್ಖಂಡ್​): ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್​ನ ರಾಂಚಿಯಲ್ಲಿ ನಡೆದಿದೆ. ಸಾವಿಗೆ ಶರಣಾಗುವ ಮುನ್ನ ಈ ಮಹಿಳೆ ಮನೆಯ ಗೋಡೆಗಳ ಮೇಲೆ ಸೂಸೈಡ್ ನೋಟ್‌ ಬರೆದಿದ್ದಾರೆ.

ಇಲ್ಲಿನ ಖಲಾರಿ ಪ್ರದೇಶದ ನಿವಾಸಿ ಚಂದಾ ದೇವಿ ಎಂಬುವವರೇ ಮೃತ ಮಹಿಳೆ. 2019ರಲ್ಲಿ ದಿಲೀಪ್ ಕುಮಾರ್ ಜೊತೆ ಚಂದಾದೇವಿ ವಿವಾಹವಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ, ಮದುವೆಯಾದಾಗಿನಿಂದಲೂ ವರದಕ್ಷಿಣೆಗಾಗಿ ಗಂಡನ ಮನೆಯವರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ತವರು ಮನೆಯಿಂದ 15 ಲಕ್ಷ ರೂಪಾಯಿ ತರುವಂತೆ ಒತ್ತಾಯಿಸಿದ್ದರು. ಅಲ್ಲದೇ, ಇಬ್ಬರ ಹೆಣ್ಣು ಮಕ್ಕಳನ್ನು ಹೆತ್ತಿದ್ದಕ್ಕೂ ಹಿಂಸೆ ನೀಡುತ್ತಿದ್ದರು ಎಂದು ಎನ್ನಲಾಗ್ತಿದೆ.

ವರದಕ್ಷಿಣೆ ಕಿರುಕುಳ: ಮನೆಯ ಗೋಡೆಗಳ ಮೇಲೆ ಸೂಸೈಡ್​ ನೋಟ್​ ಬರೆದು ಮಹಿಳೆ ಆತ್ಮಹತ್ಯೆ

ಹೀಗಾಗಿಯೇ ಚಂದಾ ದೇವಿ ತನಗಾದ ಚಿತ್ರಹಿಂಸೆಯನ್ನು ಗೋಡೆಗಳ ಮೇಲೆ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಡ, ಅತ್ತೆ-ಮಾವ ಕೊಟ್ಟ ಹಿಂಸೆ ಹಾಗೂ ಕಿರುಕುಳದ ಬಗ್ಗೆ ಗೋಡೆ ಬರಹದಲ್ಲಿ ವಿವರಿಸಿದ್ದಾರೆ. ಅಲ್ಲದೇ, ತಮ್ಮ ತಾಯಿಯನ್ನು ಉದ್ದೇಶಿಸಿ ಕೂಡ ಚಂದಾ ಬರೆದಿದ್ದು, 'ಕ್ಷಮಿಸು ಅಮ್ಮ' ಕೇಳಿಕೊಂಡಿದ್ದಾರೆ.

ಚಂದಾ ದೇವಿಯ ಆತ್ಮಹತ್ಯೆ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಮೃತರ ಸಹೋದರನ ಹೇಳಿಕೆ ಮೇರೆಗೆ ಚಂದಾದೇವಿ ಅವರ ಪತಿ ಹಾಗೂ ಅತ್ತೆಯ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಪತಿ ದಿಲೀಪ್​ ಕುಮಾರ್​ ಅವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕೆಎಎಸ್ ಪರೀಕ್ಷೆ ಪಾಸಾಗಲು ಅಡ್ಡ ದಾರಿ ಹಿಡಿದ ಯುವತಿಗೆ 59 ಲಕ್ಷ ರೂಪಾಯಿ ವಂಚನೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.