ETV Bharat / bharat

'ಭಾರತಕ್ಕಾಗಿ ರಕ್ತ ಹರಿಸುವವರನ್ನು ಗೇಲಿ ಮಾಡಿದಂತೆ'.. ಸಿಧು ಸಲಹೆಗಾರರ ​​ಹೇಳಿಕೆಗೆ ತಿವಾರಿ ಆಕ್ರೋಶ - Navjot Sidhu's advisors

ಕಾಶ್ಮೀರ ಮತ್ತು ಪಾಕಿಸ್ತಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪಂಜಾಬ್​ ಕಾಂಗ್ರೆಸ್​ ರಾಜ್ಯಾಧ್ಯಕ್ಷ ನವಜೋತ್ ಸಿಂಗ್​ ಸಿಧು ಅವರ ಸಲಹೆಗಾರರು ಪಂಜಾಬ್​ ಕಾಂಗ್ರೆಸ್​ನ ಭಾಗವಾಗಿರಬೇಕೇ? ಎಂದು ಪಕ್ಷದ ಹಿರಿಯ ಮುಖಂಡ ಮನೀಶ್ ತಿವಾರಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

Manish Tewari
Manish Tewari
author img

By

Published : Aug 23, 2021, 2:17 PM IST

ಚಂಡೀಗಢ (ಪಂಜಾಬ್​): ಪಂಜಾಬ್​ ಕಾಂಗ್ರೆಸ್​​ ರಾಜ್ಯಾಧ್ಯಕ್ಷ ನವಜೋತ್ ಸಿಂಗ್​ ಸಿಧು ಅವರ ಸಲಹೆಗಾರರಿಗೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಎಚ್ಚರಿಕೆ ನೀಡಿದ ಬಳಿಕ ಇದೀಗ ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಷ್ಟ್ರೀಯ ವಕ್ತಾರ ಮನೀಶ್ ತಿವಾರಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ಯಾರೆ ಲಾಲ್ ಗರ್ಗ್ ಮತ್ತು ಮಲ್ವಿಂದರ್ ಮಾಲಿ ಎಂಬವರನ್ನು ನವಜೋತ್ ಸಿಧು ಅವರು ತಮ್ಮ ಸಲಹೆಗಾರರನ್ನಾಗಿ ಇತ್ತೀಚೆಗೆ ನೇಮಿಸಿದ್ದರು. ಕಳೆದ ವಾರ ಇವರಿಬ್ಬರು "ಕಾಶ್ಮೀರ ಒಂದು ಪ್ರತ್ಯೇಕ ರಾಷ್ಟ್ರ. ಭಾರತ ಮತ್ತು ಪಾಕಿಸ್ತಾನ ಇಲ್ಲಿ ಅಕ್ರಮ ವಲಸಿಗರು" ಎಂದು ಮಲ್ವಿಂದರ್ ಮಾಲಿ ಹಾಗೂ ಪಾಕಿಸ್ತಾನದ ಬಗ್ಗೆ ಪ್ಯಾರೆ ಲಾಲ್ ಗರ್ಗ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಹೇಳಿಕೆ ವಿರುದ್ಧ ಪ್ರತಿಕ್ರಿಯೆ ನೀಡಿದ್ದ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು, ಇದು ಸಂಪೂರ್ಣವಾಗಿ ದೇಶ ವಿರೋಧಿ ಹೇಳಿಕೆ. ಕಾಶ್ಮೀರವು ಭಾರತದ ಒಂದು ಅವಿಭಾಜ್ಯ ಅಂಗವಾಗಿದೆ. ಭಾರತದ ಹಿತಾಸಕ್ತಿಗಳಿಗೆ ಹೆಚ್ಚಿನ ಹಾನಿ ಮಾಡುವ ಮೊದಲು ತಮ್ಮ ಸಲಹೆಗಾರರನ್ನು ನಿಯಂತ್ರಿಸುವಂತೆ ನವಜೋತ್ ಸಿಂಗ್​ ಸಿಧುಗೆ ಸೂಚಿಸಿದ್ದರು. ಅವರು ತಮ್ಮ ಹೇಳಿಕೆಗಳ ಪರಿಣಾಮಗಳ ಬಗ್ಗೆ ತಿಳುವಳಿಕೆಯನ್ನು ಹೊಂದಿಲ್ಲದೇ, ಜ್ಞಾನವಿಲ್ಲದ ವಿಷಯಗಳ ಬಗ್ಗೆ ಮಾತನಾಡದಂತೆ ಸೂಚಿಸಿದ್ದರು.

  • I urge @harishrawatcmuk AICC Gen Secy I/C Punjab to seriously introspect that those who do not consider J&K to be a part of India & others who have ostensibly Pro Pakistan leanings should be a part of @INCPunjab
    It mocks all those who shed blood for India.https://t.co/j6hDuZ35ci

    — Manish Tewari (@ManishTewari) August 23, 2021 " class="align-text-top noRightClick twitterSection" data=" ">

ಇದರ ಬೆನ್ನಲ್ಲೇ ಮನೀಶ್ ತಿವಾರಿ ಕೂಡ ಟ್ವೀಟ್​ ಮಾಡಿದ್ದು, "ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಭಾಗವೆಂದು ಪರಿಗಣಿಸದವರು ಮತ್ತು ಪಾಕಿಸ್ತಾನದ ಪರವಾಗಿ ಒಲವು ಹೊಂದಿರುವವರು ಪಂಜಾಬ್​ ಕಾಂಗ್ರೆಸ್​ನ ಭಾಗವಾಗಿರಬೇಕೇ? ಎಂಬ ಬಗ್ಗೆ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹರೀಶ್​ ರಾವತ್​ಗೆ ಒತ್ತಾಯಿಸಿದ್ದಾರೆ. ಅಲ್ಲದೇ ಇಂತಹ ಹೇಳಿಕೆಗಳು ಭಾರತಕ್ಕಾಗಿ ರಕ್ತ ಹರಿಸುವವರನ್ನು ಗೇಲಿ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.

ಫೆಬ್ರವರಿ 2022 ರಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇಂತಹ ಹೇಳಿಕೆಗಳು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ಹಾನಿಗೊಳಿಸಬಹುದು ಎಂಬುದು ರಾಜ್ಯ ಕಾಂಗ್ರೆಸ್​ ನಾಯಕರ ಆತಂಕವಾಗಿದೆ.

ಈ ಹಿಂದೆ ಪಂಜಾಬ್​​ನಲ್ಲಿ ಸಿಎಂ ಕ್ಯಾಪ್ಟನ್​ ಅಮರೀಂದರ್ ಸಿಂಗ್​ ಮತ್ತು ಸಿಧು ನಡುವೆ ಶೀತಲ ಸಮರ ನಡೆದಿತ್ತು. ಇವರಿಬ್ಬರ ಮುನಿಸು ಕಡಿಮೆ ಮಾಡಲು ಕಾಂಗ್ರೆಸ್​ ಹೈಕಮಾಂಡ್​ ಕಸರತ್ತು ನಡೆಸಿತ್ತು. ಬಳಿಕ ಸಿಧು ಅವರಿಗೆ ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷನ ಸ್ಥಾನ ಕಲ್ಪಿಸಿ ಅವರನ್ನು ಸಮಾಧಾನಪಡಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.