ಇಂಫಾಲ, ಮಣಿಪುರ: ಬಿಜೆಪಿ ಆಡಳಿತವಿರುವ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಆಗಸ್ಟ್ 3 ಗುರುವಾರದಂದು ಜಾತಿ ಹಿಂಸಾಚಾರ ಭುಗಿಲೆದ್ದು ಮೂರು ತಿಂಗಳುಗಳೇ ಕಳೆದಿವೆ. ಇಷ್ಟು ದಿನ ಕಳೆದರೂ ರಾಜ್ಯದಲ್ಲಿ ಇನ್ನೂ ಶಾಂತಿ ನೆಲೆಸಿಲ್ಲ. ಕೇಂದ್ರ ಪಡೆಗಳು ಮತ್ತು ಸೇನೆ ಬಂದಿಳಿದಿದ್ದರೂ ಹಿಂಸಾಚಾರದ ವರದಿಗಳು ಹೊರಹೊಮ್ಮುತ್ತಲೇ ಇವೆ. ಈ ಉನ್ಮಾದವು ರಾಜ್ಯದಲ್ಲಿ ಬಹುಸಂಖ್ಯಾತ ಮೈತೇಯಿ ಮತ್ತು ಅಲ್ಪಸಂಖ್ಯಾತ ಕುಕಿ ಸಮುದಾಯದ ನಡುವೆ ದ್ವೇಷದ ಗೋಡೆಯನ್ನು ಸೃಷ್ಟಿಸಿದೆ. ಇದು ಮುಂದಿನ ದಿನಗಳಲ್ಲಿ ಮುರಿಯಲು ಕಷ್ಟಕರವಾಗಿದೆ.
-
"Manipur still tense:" Police appeals to people not to fall prey to rumours
— ANI Digital (@ani_digital) August 4, 2023 " class="align-text-top noRightClick twitterSection" data="
Read @ANI Story | https://t.co/aoWPadSIkM#ManipurViolence #ManipurPoliceCommando #NorthEast pic.twitter.com/0XE02Sfnul
">"Manipur still tense:" Police appeals to people not to fall prey to rumours
— ANI Digital (@ani_digital) August 4, 2023
Read @ANI Story | https://t.co/aoWPadSIkM#ManipurViolence #ManipurPoliceCommando #NorthEast pic.twitter.com/0XE02Sfnul"Manipur still tense:" Police appeals to people not to fall prey to rumours
— ANI Digital (@ani_digital) August 4, 2023
Read @ANI Story | https://t.co/aoWPadSIkM#ManipurViolence #ManipurPoliceCommando #NorthEast pic.twitter.com/0XE02Sfnul
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಮಣಿಪುರ ಪೊಲೀಸರು ಗುರುವಾರ ಹೇಳಿದ್ದಾರೆ. ಆಗಸ್ಟ್ 3 ರಂದು ನೀಡಿದ ಪತ್ರಿಕಾ ಟಿಪ್ಪಣಿಯಲ್ಲಿ ಪೊಲೀಸರು ಗುಂಡು ಹಾರಿಸುವ ಮತ್ತು ಗುಂಪು ಸಭೆಯ ವಿರಳ ಘಟನೆಗಳು ನಡೆದಿವೆ ಎಂದು ಹೇಳಿದ್ದಾರೆ. ಕೌಟ್ರುಕ್ ಬೆಟ್ಟದ ವ್ಯಾಪ್ತಿಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಏಳು ಅಕ್ರಮ ಬಂಕರ್‌ಗಳನ್ನು ಧ್ವಂಸಗೊಳಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಕಿರೆನ್‌ಫಾಬಿ ಮತ್ತು ಬಿಷ್ಣುಪುರದ ತಂಗಲವಾಯ್‌ನಲ್ಲಿನ ಪೊಲೀಸ್ ಔಟ್‌ಪೋಸ್ಟ್‌ಗೆ ಗುಂಪೊಂದು ನುಗ್ಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ತೆಗೆದುಕೊಂಡು ಹೋಗಿದೆ. ಮಣಿಪುರ ರೈಫಲ್ಸ್‌ನ ಬೆಟಾಲಿಯನ್‌ನಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಗುಂಪು ಮಾಡಿದ ಪ್ರಯತ್ನವನ್ನು ಹಿಮ್ಮೆಟ್ಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೌತ್ರುಕ್ ಹರೋಥೆ ಮತ್ತು ಸೆಂಜಮ್ ಚಿರಾಂಗ್‌ನಲ್ಲಿ ಶಸ್ತ್ರಸಜ್ಜಿತ ದುಷ್ಕರ್ಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಸೇರಿದಂತೆ 2 ಜನರು ಗಾಯಗೊಂಡಿದ್ದಾರೆ. ಭದ್ರತಾ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ.
ಪರಿಸ್ಥಿತಿ ನಿಯಂತ್ರಣಕ್ಕೆ ಬಿಗಿ ಭದ್ರತೆ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಟ್ಟಗಳು ಮತ್ತು ಕಣಿವೆಗಳಲ್ಲಿ ಒಟ್ಟು 129 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು 1047 ಜನರನ್ನು ಬಂಧಿಸಲಾಗಿದೆ. NH37 ಮತ್ತು NH32 ನಲ್ಲಿ ಅಗತ್ಯ ವಸ್ತುಗಳನ್ನು ಹೊಂದಿರುವ ವಾಹನಗಳ ಸಂಚಾರವನ್ನು ಪೊಲೀಸರು ಖಚಿತಪಡಿಸಿದ್ದಾರೆ. ವದಂತಿಗಳನ್ನು ನಂಬಬೇಡಿ ಮತ್ತು ನಕಲಿ ವಿಡಿಯೋಗಳ ಬಗ್ಗೆ ಎಚ್ಚರದಿಂದ ಇರಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಕಲಿ ವಿಡಿಯೋಗಳನ್ನು ವರದಿ ಮಾಡಲು ಮತ್ತು ಜನರಿಗೆ ಸಹಾಯ ಮಾಡಲು ಪೊಲೀಸರು ಸಹಾಯವಾಣಿ ಸಹ ಸ್ಥಾಪಿಸಿದ್ದಾರೆ.
ಗುರುವಾರ ಮಣಿಪುರದ ಚುರಾಚಂದ್‌ಪುರದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯರ ನಡುವಿನ ಘರ್ಷಣೆ ನಂತರ ಇಂಫಾಲ್ ಪಶ್ಚಿಮ ಮತ್ತು ಇಂಫಾಲ್ ಪೂರ್ವದಲ್ಲಿ ಕರ್ಫ್ಯೂ ಘೋಷಿಸಲಾಯಿತು. ಮೈತೇಯಿ ಸಮುದಾಯದ ಮಹಿಳೆಯರ ಗುಂಪೊಂದು ಬಿಷ್ಣುಪುರದಿಂದ ಚುರಂಚಂದಪುರಕ್ಕೆ ತೆರಳಲು ಪ್ರಯತ್ನಿಸಿದರು. ಬಳಿಕ ಆ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಭದ್ರತಾ ಪಡೆಗಳು ಗುಂಪನ್ನು ತಡೆದ ನಂತರ ಘರ್ಷಣೆಗಳು ಪ್ರಾರಂಭವಾದವು.
ಕುಕಿಗಳ ಬುಡಕಟ್ಟು ಸಂಘಟನೆಯು ಹಿಂಸಾಚಾರದಲ್ಲಿ ಸಾವನ್ನಪ್ಪಿದ ಕೆಲವರನ್ನು ಆ ಪ್ರದೇಶದ ಸಮೀಪದಲ್ಲಿ ಸಮಾಧಿ ಮಾಡುವುದಾಗಿ ಘೋಷಿಸಿದ ನಂತರ ಮೆರವಣಿಗೆಯನ್ನು ಆಯೋಜಿಸಲಾಗಿದೆ. ನ್ಯಾಯಾಲಯವು ಎರಡೂ ಸಮುದಾಯಗಳಿಗೆ ನಿರ್ಬಂಧ ವಿಧಿಸಿದ ನಂತರ ಅಂತ್ಯಕ್ರಿಯೆಯನ್ನು ಮುಂದೂಡಲಾಯಿತು.
ಓದಿ: ಮಣಿಪುರದಲ್ಲಿ ಮುಂದುವರಿದ ಪ್ರಕ್ಷುಬ್ಧತೆ.. 20 ಜನರಿಗೆ ಗಾಯ, ಇಂಫಾಲ್ ಕಣಿವೆಯಲ್ಲಿ ಕರ್ಫ್ಯೂ ಜಾರಿ