ಕೃಷ್ಣಾ(ಆಂಧ್ರಪ್ರದೇಶ): ಸಾಮಾನ್ಯವಾಗಿ ರೈತರು ತಮ್ಮ ಜಮೀನಿನಲ್ಲಿ ಬೆಳೆಯುವ ಶುಂಠಿಯ ಗೊಂಚಲು (ಬೀಟ್) ಒಂದರಿಂದ ಎರಡು ಕೆ.ಜಿ ಮಾತ್ರ ಮಾತ್ರ ಇರುತ್ತದೆ. ಆದರೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆ ಮೋಪಿದೇವಿ ಮಂಡಲದ ಶಿವರಾಮಪುರ ಗ್ರಾಮದ ವ್ಯಕ್ತಿಯೊಬ್ಬ ತಮ್ಮ ಮನೆಯ ಹಿತ್ತಲಲ್ಲಿ ಬೆಳೆದಿರುವ ಶುಂಠಿಯ ಗೊಂಚಲು ತೂಕ ಸುಮಾರು 7 ಕೆಜಿಗೂ ಅಧಿಕವಿದೆ. ಈ ಶುಂಠಿಯ ಗೊಂಚಲನ್ನು ಚಲ್ಲಪಲ್ಲಿ ಎಂಬಲ್ಲಿ ಇತ್ತೀಚೆಗೆ ನಡೆದ ರೈತ ಸಮಾವೇಶದಲ್ಲಿ ಪ್ರದರ್ಶಿಸಲಾಗಿದ್ದು, ಜನರನ್ನು ಆಕರ್ಷಿಸಿದೆ.
ಯರ್ಲಗಡ್ಡದ ನಾಗೇಶ್ವರರಾವ್ ಎಂಬುವವರು ಈ ಶುಂಠಿಯನ್ನು ಬೆಳೆದಿದ್ದಾರೆ. ಇದನ್ನು ಮಾವಿನ ಶುಂಠಿ (ಕರ್ಕುಮಾ ಮಂಗ್ಗಾ) ಎಂದು ಕರೆಯಲಾಗುತ್ತದೆ. ರಾಸಾಯನಿಕ ಗೊಬ್ಬರ ಹಾಕದೇ ಸಾವಯವ ಪದ್ಧತಿಯಲ್ಲಿಯೇ ಈ ಶುಂಠಿಯನ್ನು ಬೆಳೆಯಲಾಗಿದೆ ಎನ್ನುತ್ತಾರೆ ಯರ್ಲಗಡ್ಡದ ನಾಗೇಶ್ವರರಾವ್. ಈ ಶುಂಠಿಯನ್ನು ಉಪ್ಪಿನಕಾಯಿಗೆ ಹೆಚ್ಚಿಗೆ ಬಳಸಲಾಗುತ್ತದೆ. ಈಗ ಒಂದು ಕೆಜಿ ಶುಂಠಿ ಬೆಲೆ 50 ರೂಪಾಯಿವರೆಗೆ ಇದೆ.
ಶುಂಠಿ ಬೆಳೆ ಬಹುತೇಕ ಅರಿಶಿನದ ಬೆಳೆಯಂತೆ ಎಂದು ಘಂಟಸಾಲ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ಇಲಾಖೆಯ ಹಿರಿಯ ವಿಜ್ಞಾನಿ ಡಾ. ವಿ.ಮಂಜುವಾಣಿ ಹೇಳಿದ್ದು, ಅರಿಶಿನದ ಸುಗ್ಗಿಯ ಅವಧಿ 7 ತಿಂಗಳಿಂದ 9 ತಿಂಗಳುಗಳಾಗಿದೆ. ಮಾವಿನ ಶುಂಠಿ ಕೇವಲ ಆರು ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಮಾವಿನ ಶುಂಠಿಯನ್ನು ಕರ್ಕುಮಾ ಮಂಗ್ಗಾ ಎಂದೂ ಕರೆಯುತ್ತಾರೆ. ಮಾವಿನ ಶುಂಠಿಯಲ್ಲಿ ಈ ರೀತಿಯಾಗಿ ತೂಕ ಹೆಚ್ಚಾಗುವುದು ಬಹಳ ಅಪರೂಪ ಎಂದು ತಿಳಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಉಪ್ಪಿನಕಾಯಿ ಮತ್ತು ಉತ್ತರ ಭಾರತದಲ್ಲಿ ಚಟ್ನಿಗಳನ್ನು ತಯಾರಿಸಲು ಈ ಶುಂಠಿಯನ್ನು ಬಳಸಲಾಗುತ್ತದೆ. ನೇಪಾಳದ ದಕ್ಷಿಣ ಬಯಲು ಪ್ರದೇಶದಲ್ಲಿ ಸಮುದಾಯದ ಹಬ್ಬಗಳಲ್ಲಿ ಇದನ್ನು ಚಟ್ನಿಯಾಗಿ ಬಡಿಸಲಾಗುತ್ತದೆ. ಸಲಾಡ್‌ಗಳು ಮತ್ತು ಫ್ರೈಗಳಿಗೆ ಇದನ್ನು ಉಪಯೋಗಿಸಲಾಗುತ್ತದೆ.
ಇದನ್ನೂ ಓದಿ: ಪಂಜಾಬ್ನಲ್ಲಿ 'ಐ ಲವ್ ಪಾಕಿಸ್ತಾನ್' ಬರಹದ ಬಲೂನ್ ಪತ್ತೆ.. ಪೊಲೀಸ್ ತನಿಖೆ ಚುರುಕು