ETV Bharat / bharat

'ಧರ್ಮಾಂತರ' ವಿಚಾರ: ಮಗಳ ಮುಂದೆಯೇ ಮನ ಬಂದಂತೆ ವ್ಯಕ್ತಿಗೆ ಥಳಿಸಿ ಮೆರವಣಿಗೆ ಮಾಡಿದ ಜನರು

ಧರ್ಮಾಂತರವಾಗುವಂತೆ ಮಹಿಳೆಯೊಬ್ಬರನ್ನು ಒತ್ತಾಯಿಸುತ್ತಿದ್ದಾನೆಂಬ ಆರೋಪದ ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಆತನ ಮಗಳ ಮುಂದೆಯೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

Man thrashed by mob in UP's Kanpur over allegations of religious conversion
ಮನಬಂದಂತೆ ವ್ಯಕ್ತಿಯ ಥಳಿಸಿ ಮೆರವಣಿಗೆ ಮಾಡಿದ ಜನರು
author img

By

Published : Aug 13, 2021, 3:25 PM IST

ಕಾನ್ಪುರ (ಉತ್ತರ ಪ್ರದೇಶ): ಮಹಿಳೆಯೊಬ್ಬರನ್ನು ಧರ್ಮಾಂತರವಾಗುವಂತೆ ಒತ್ತಾಯಿಸುತ್ತಿದ್ದಾನೆಂಬ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಮನಬಂದಂತೆ ಥಳಿಸಿ ಮೆರವಣಿಗೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಮನಬಂದಂತೆ ವ್ಯಕ್ತಿಯ ಥಳಿಸಿ ಮೆರವಣಿಗೆ ಮಾಡಿದ ಜನರು

ಕಾನ್ಪುರದ ವರುಣ್ ವಿಹಾರ್ ಪ್ರದೇಶದಲ್ಲಿ ವಾಸವಾಗಿರುವ ವ್ಯಕ್ತಿ ಹಾಗೂ ಆತನ ಕುಟುಂಬವು ಮಹಿಳೆಯೊಬ್ಬರಿಗೆ ಧರ್ಮಾಂತರವಾಗುವಂತೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಮತಾಂತರಗೊಂಡರೆ 20,000 ರೂ. ಹಣ ನೀಡುವುದಾಗಿ ವ್ಯಕ್ತಿ ಹೇಳಿದ್ದನೆಂದು ಮಹಿಳೆ ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗದ ಕಾರಣ ಆಕೆ ಬಲಪಂಥೀಯ ಕಾರ್ಯಕರ್ತರನ್ನು ಸಂಪರ್ಕಿಸಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ತುಮಕೂರಿನಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

ಆತನ ಮನೆಗೆ ನುಗ್ಗಿದ ಒಂದಿಷ್ಟು ಪುರುಷರು, ರಸ್ತೆಯುದ್ದಕ್ಕೂ ಥಳಿಸುತ್ತಾ ಮೆರವಣಿಗೆ ಮಾಡಿದ್ದಾರೆ. 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗುವಂತೆ ಆತನನ್ನು ಒತ್ತಾಯಿಸಿದ್ದಾರೆ. ಈ ವೇಳೆ ವ್ಯಕ್ತಿಯ ಪುಟ್ಟ ಮಗಳು, 'ಅಪ್ಪನಿಗೆ ಹೊಡಿಬೇಡಿ' ಎಂದು ಅಳುತ್ತಿರುವ ದೃಶ್ಯ ಮನಕಲಕುವಂತಿದೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.