ETV Bharat / bharat

ಟ್ರಾಫಿಕ್ ಪೊಲೀಸರ ಕಿರಿಕಿರಿ : ತಾಳ್ಮೆ ಕಳೆದುಕೊಂಡು ಬೈಕ್​ಗೆ ಬೆಂಕಿ ಹಚ್ಚಿದ ವ್ಯಕ್ತಿ - ಬೈಕ್​ಗೆ ಬೆಂಕಿ ಹಚ್ಚಿದ ವ್ಯಕ್ತಿ

ತಕ್ಷಣವೇ ಆತನ ಬೈಕ್ ನಂಬರ್ ಮೇಲೆ ಕೆಲ ಕೇಸ್​ ಹಾಕಿ ದಂಡ ತುಂಬಲು ಚಲನ್​ ಹರಿದಿದ್ದಾರೆ. ಹಣ ಪಾವತಿ ಮಾಡಲು ತನ್ನ ಬಳಿ ಹಣವಿಲ್ಲ ಎಂದು ಮಖ್ಬುಲ್​ ಹೇಳಿದ್ದು, ಕಳೆದ ವಾರ ಸಾವಿರ ರೂ. ಪಾವತಿ ಮಾಡಿದ್ದೇನೆಂದು ತಿಳಿಸಿದ್ದಾನೆ..

Man sets his bike
Man sets his bike
author img

By

Published : Nov 27, 2021, 6:34 PM IST

ಆದಿಲಾಬಾದ್​(ತೆಲಂಗಾಣ): ಸಂಚಾರಿ ಪೊಲೀಸರ ಕಿರಿಕಿರಿಯಿಂದ ಬೈಕ್​ ಸವಾರರು ಮೇಲಿಂದ ಮೇಲೆ ತೊಂದರೆ ಅನುಭವಿಸುತ್ತಿರುತ್ತಾರೆ. ಹೀಗಾಗಿ, ಕೆಲವೊಮ್ಮೆ ಸಾವಿರಾರು ರೂಪಾಯಿ ದಂಡ ಕಟ್ಟಬೇಕಾದ ಪರಿಸ್ಥಿತಿ ಸಹ ನಿರ್ಮಾಣವಾಗಿ ಬಿಡುತ್ತದೆ. ಸದ್ಯ ತೆಲಂಗಾಣದ ಆದಿಲಾಬಾದ್​​ನಲ್ಲಿ ಅಂತಹದೊಂದು ಘಟನೆ ನಡೆದಿದೆ. ದಂಡ ಕಟ್ಟಲು ವಿಫಲವಾದ ಬೈಕ್​ ಸವಾರನೋರ್ವ ಅದಕ್ಕೆ ಬೆಂಕಿ ಹಚ್ಚಿದ್ದಾನೆ.

ಟ್ರಾಫಿಕ್ ಪೊಲೀಸರ ಕಿರಿಕಿರಿ.. ತಾಳ್ಮೆ ಕಳೆದುಕೊಂಡು ಬೈಕ್​ಗೆ ಬೆಂಕಿ ಹಚ್ಚಿದ ವ್ಯಕ್ತಿ..

ಟ್ರಾಫಿಕ್​​ ಪೊಲೀಸರ ನಿರ್ಧಾರದಿಂದ ಆಕ್ರೋಶಗೊಂಡು ತಾಳ್ಮೆ ಕಳೆದುಕೊಂಡಿರುವ ವ್ಯಕ್ತಿ ಬೈಕ್​ಗೆ ಬೆಂಕಿ ಹಚ್ಚಿದ್ದಾನೆ. ತೆಲಂಗಾಣದ ಆದಿಲಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಆದಿಲಾಬಾದ್​​ ಸಂಚಾರಿ ಪೊಲೀಸರು ರಸ್ತೆ ಮಧ್ಯೆ ತಪಾಸಣೆ ನಡೆಸುತ್ತಿದ್ದರು.

ಈ ವೇಳೆ ಮಖ್ಬುಲ್​ ಎಂಬ ವ್ಯಕ್ತಿಯ ಬೈಕ್‌ಗೆ ಅಡ್ಡ ಹಾಕಿ ಪೇಪರ್​ಗಳ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ತನ್ನೊಂದಿಗೆ ಯಾವುದೇ ರೀತಿಯ ಪೇಪರ್​ ಇಲ್ಲ ಎಂದು ತಿಳಿಸಿದ್ದಾನೆ.

ತಕ್ಷಣವೇ ಆತನ ಬೈಕ್ ನಂಬರ್ ಮೇಲೆ ಕೆಲ ಕೇಸ್​ ಹಾಕಿ ದಂಡ ತುಂಬಲು ಚಲನ್​ ಹರಿದಿದ್ದಾರೆ. ಹಣ ಪಾವತಿ ಮಾಡಲು ತನ್ನ ಬಳಿ ಹಣವಿಲ್ಲ ಎಂದು ಮಖ್ಬುಲ್​ ಹೇಳಿದ್ದು, ಕಳೆದ ವಾರ ಸಾವಿರ ರೂ. ಪಾವತಿ ಮಾಡಿದ್ದೇನೆಂದು ತಿಳಿಸಿದ್ದಾನೆ.

ಇದನ್ನೂ ಓದಿರಿ: Omicron variant: ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ, ಕೆಲ ದೇಶಗಳ ಮೇಲೆ ನಿಗಾ ಇಡಲು ಸೂಚನೆ

ಈ ವೇಳೆ ಬೈಕ್​ ಸವಾರ ಹಾಗೂ ಟ್ರಾಫಿಕ್ ಪೊಲೀಸರ ಮಧ್ಯೆ ಕೆಲ ಹೊತ್ತು ಮಾತಿನ ಚಕಮಕಿ ನಡೆದಿದೆ. ತಾಳ್ಮೆ ಕಳೆದುಕೊಂಡಿರುವ ಸವಾರ ಬೈಕ್​ಗೆ ಬೆಂಕಿ ಹಚ್ಚಿದ್ದಾನೆ. ಈ ವೇಳೆ ಪೊಲೀಸರು ಬೆಂಕಿ ನಂದಿಸಿದ್ದಾರೆ. ಸಂಚಾರ ನಿಯಮಗಳ ಪ್ರಕಾರ ದಂಡ ವಿಧಿಸಿರೋದಾಗಿ ಸ್ಪಷ್ಟನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.