ETV Bharat / bharat

ಮಹಿಳೆಯರೆದುರು ಅಶ್ಲೀಲ ವರ್ತನೆ: ದುರುಳನ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಗ್ರಾಮಸ್ಥರು - ಖಾಸಗಿ ಅಂಗಕ್ಕೆ ಬೆಂಕಿ

ಮಹಿಳೆಯರ ಮುಂದೆ ಬೆತ್ತಲಾಗಿ ನಿಂತು ವಿಪರೀತ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೋರ್ವನಿಗೆ ಗ್ರಾಮಸ್ಥರು ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Man set on fire for flashing private parts in Betul

author img

By

Published : Aug 8, 2022, 3:26 PM IST

ಬೇತುಲ್​(ಮಧ್ಯಪ್ರದೇಶ): ಮಹಿಳೆಯರೆದುರು ನಿಂತು ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯೋರ್ವನನ್ನು ಹಿಡಿದ ಗ್ರಾಮಸ್ಥರು ಆತನ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ. ಬೇತುಲ್‌ನ ಬಿಜದೇಹಿ ಪೊಲೀಸ್ ಠಾಣಾ ವ್ಯಾಪ್ತಿಯ ಕಜ್ಲಿ ಗ್ರಾಮದಲ್ಲಿ ಆರೋಪಿಯು ಮಹಿಳೆಯರ ಮುಂದೆ ಪ್ರತಿದಿನ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದನಂತೆ. ಇದರಿಂದ ಕೋಪಗೊಂಡು ಗ್ರಾಮಸ್ಥರು ಕೊನೆಗೂ ತಕ್ಕ ಶಾಸ್ತಿ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಆರೋಪಿಯನ್ನು ಚಿಚೋಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಈತ ಗ್ರಾಮದಲ್ಲಿ ಮಹಿಳೆಯರ ಮುಂದೆ ಬೆತ್ತಲೆಯಾಗಿ ನಿಂತು ಕಿರುಕುಳ ನೀಡುತ್ತಿದ್ದ. ಕಳೆದ ಶನಿವಾರವೂ ಸಹ ಇದೇ ರೀತಿಯಾಗಿ ನಡೆದುಕೊಂಡಿದ್ದಾನೆ. ಹೀಗಾಗಿ, ಗ್ರಾಮಸ್ಥರು ಆತನ ಪ್ಯಾಂಟ್ ತೆಗೆದು ಖಾಸಗಿ ಅಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಇದನ್ನೂ ಓದಿ: ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ಶ್ರೀಕಾಂತ್​ ತ್ಯಾಗಿ.. ಬುಲ್ಡೋಜರ್​ನಿಂದ ಅಕ್ರಮ ನಿವಾಸ ತೆರವು, ಗೂಂಡಾ ಕಾಯ್ದೆ ದಾಖಲು!

ಪೊಲೀಸ್ ವರಿಷ್ಠಾಧಿಕಾರಿ ಸಿಮಲಾ ಪ್ರಸಾದ್ ಪ್ರತಿಕ್ರಿಯಿಸಿ, "ಆರೋಪಿ ಮಹಿಳೆಯರ ಮುಂದೆ ಬೆತ್ತಲಾಗಿ ಪೋಸ್ ನೀಡುತ್ತಿದ್ದ. ಗ್ರಾಮಸ್ಥರು ಈತನ ಕೃತ್ಯದಿಂದ ಆಕ್ರೋಶಗೊಂಡಿದ್ದರು. ಅನೇಕ ಸಲ ಬುದ್ಧಿ ಹೇಳಿದ್ದಾರೆ. ಆದರೆ, ಪ್ರಯೋಜನವಾಗಿರಲಿಲ್ಲ. ಹೀಗಾಗಿ, ಗ್ರಾಮಸ್ಥರು ಈ ರೀತಿಯಾಗಿ ನಡೆದುಕೊಂಡಿದ್ದಾರೆ" ಎಂದು ತಿಳಿಸಿದರು.

ಪ್ರಕರಣದಲ್ಲಿ ಸುದೇಶ್ ಕಾವಡೆ ಮತ್ತು ಕೃಷ್ಣ ಉಯಿಕೆ ಎಂಬಿಬ್ಬರನ್ನು ಬಂಧಿಸಲಾಗಿದೆ. ಐಪಿಸಿ ಸೆಕ್ಷನ್ 294, 324, 506 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.