ಆಂಧ್ರಪ್ರದೇಶ(ಅನಂತಪುರ) : ಕೊರೊನಾ ವೈರಸ್ ಹೆಚ್ಚಳಗೊಂಡ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜನ ಆನ್ಲೈನ್ನಲ್ಲಿ ವಸ್ತುಗಳನ್ನು ಖರೀದಿಸಲು ಮುಂದಾಗಿದ್ದಾರೆ. ಹೀಗೆ ಆಸಕ್ತಿಯಿಂದ ಕೊಂಡುಕೊಳ್ಳುವ ಯಾವುದೇ ವಸ್ತುವು ಗುಣಮಟ್ಟದ್ದಾಗಿರಲಿ ಎಂಬುವುದು ಜನರ ಅಭಿಲಾಷೆ. ಆದರೆ, ಇದಕ್ಕೆ ತೀರಾ ವ್ಯತಿರಿಕ್ತವೆಂಬಂತೆ ಕೈಮಗ್ಗ ಉದ್ಯಮಿಯೊಬ್ಬರು ಅಮೆಜಾನ್ನಲ್ಲಿ ಇನ್ವರ್ಟರ್ನ ಆರ್ಡರ್ ಮಾಡಿ ಶಾಕ್ಗೆ ಒಳಗಾಗಿರುವ ಘಟನೆ ಅನಂತಪುರದಲ್ಲಿ ನಡೆದಿದೆ.
ಹೀಗೆ ಅಮೆಜಾನ್ನಿಂದ ವಸ್ತುವನ್ನು ಪಡೆದ ವ್ಯಕ್ತಿ ಉತ್ಸಾಹದಿಂದ ಪ್ಯಾಕೇಟ್ ತೆರೆದು ಅಸಮಾಧಾನಕ್ಕೆ ಒಳಗಾಗಿದ್ದಾರೆ. ಕಾರಣ ಅದರಲ್ಲಿ ಇನ್ವರ್ಟರ್ ಬದಲಿಗೆ ಸುಮಾರು 5 ಕೆಜಿ ಗಾತ್ರದ ಕಲ್ಲು ತುಂಬಲಾಗಿತ್ತು. ಇನ್ವರ್ಟರ್ ಪೆಟ್ಟಿಗೆಯೊಳಗಿನ ವಿದ್ಯುತ್ ಸರ್ಕ್ಯೂಟ್‌ಗಳು ಮತ್ತು ಬೋರ್ಡ್‌ಗಳ ಸ್ಥಳದಲ್ಲಿ ಕಲ್ಲನ್ನು ಇಟ್ಟು ಕಳುಹಿಸಿದ್ದನ್ನು ಕಂಡ ಗ್ರಾಹಕ ತೀರಾ ಅಸಮಾಧಾನಕ್ಕೆ ಒಳಗಾಗಿದ್ದಾನೆ.
ಈಗಾಗಲೇ ಆ ವ್ಯಕ್ತಿ ಆನ್‌ಲೈನ್ ಮೂಲಕ ಅಮೆಜಾನ್ ಕಾರ್ಯನಿರ್ವಾಹಕರಿಗೆ ದೂರು ನೀಡಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮೋಸದ ಜಾಲವನ್ನು ಬೆಳಕಿಗೆ ತರಲಾಗುವುದು ಎಂಬ ಉತ್ತರವನ್ನು ನೀಡಿದ್ದಾರೆ. ಕಾರ್ಯನಿರ್ವಾಹಕರ ಪ್ರಕಾರ ಗ್ರಾಹಕರಿಗೆ ಮೋಸವಾಗಿದ್ದು, ನಿಜವಾದಲ್ಲಿ ಖರ್ಚಾದ ಎಲ್ಲಾ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ಹಿಂದಿರುಗಿಸಲಾಗುತ್ತದೆ ಎಂದಿದ್ದಾರೆ.
ಓದಿ: ನೀವ್ ಲಸಿಕೆ ಹಾಕಿಸಿಕೊಂಡ್ರಾ, 20 ಕೆಜಿ ಅಕ್ಕಿ ಕೊಡ್ತಾರಂತೆ ನೋಡಿ ಇಲ್ಲಿ..