ETV Bharat / bharat

ವಂಚಿಸಿ ಮೂವರೊಂದಿಗೆ ಮದುವೆ, ಮತಾಂತರಕ್ಕೆ ಬಲವಂತ; 7 ಮಕ್ಕಳ ತಂದೆಯ ಬಂಧನ

ನಕಲಿ ಹೆಸರುಗಳನ್ನು ಬಳಸಿ ಮೂರು ಮಹಿಳೆಯರನ್ನು ಮದುವೆಯಾದ ಆಸಾಮಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

Lucknow
Lucknow
author img

By

Published : May 31, 2021, 8:25 PM IST

ಲಖನೌ: ನಕಲಿ ಹೆಸರುಗಳು ಮತ್ತು ಸುಳ್ಳು ವೃತ್ತಿಯ ವಿವರಗಳೊಂದಿಗೆ ಮೂವರು ಮಹಿಳೆಯರನ್ನು ವಂಚಿಸಿ ಮದುವೆಯಾದ ಆರೋಪಿಯನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.

ಮಹಿಳೆಯೊಬ್ಬರ ದೂರಿನ ಮೇರೆಗೆ ಮೊಹಮ್ಮದ್ ಅಬಿದ್ ಅಲಿಯಾಸ್ ಆದಿತ್ಯ ಸಿಂಗ್ ಎಂಬಾತನನ್ನು ಲಖನೌದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಇಂದಿರಾನಗರ್ ಸೆಕ್ಟರ್ -9 ರ ನಿವಾಸಿ ಅಬಿದ್ ಎರಡನೇ ಪತ್ನಿ ಆಗಿರುವ ಮಹಿಳೆ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, 2016 ರಲ್ಲಿ ನಕಲಿ ಹೆಸರು ಮತ್ತು ಸುಳ್ಳು ವೃತ್ತಿಯ ವಿವರಗಳೊಂದಿಗೆ ನನ್ನನ್ನು ಆತ ವಿವಾಹವಾದರು ಎಂದು ಅವರು ಉಲ್ಲೇಖಿಸಿದ್ದಾರೆ. ಎಫ್‌ಐಆರ್ ಪ್ರಕಾರ, ಅಬಿದ್‌ಗೆ ಈಗಾಗಲೇ ಏಳು ಮಕ್ಕಳಿದ್ದಾರೆ ಮತ್ತು ಅವರ ಹೆಂಡತಿಯರನ್ನು ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ. ಆರೋಪಿ ನಿರಂತರವಾಗಿ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿದ್ದ ಮತ್ತು ಅವಳಿಂದ 16 ಲಕ್ಷ ರೂ. ಸಹ ಪಡೆದಿದ್ದಾನೆ. ಅಲ್ಲದೇ ಅವಳನ್ನು ಬಲವಂತವಾಗಿ ಬೇರೆ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪೀಡಿಸಿದ್ದು, ಆಗುವುದಿಲ್ಲ ಎಂದಾಗ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಫೆಬ್ರವರಿಯಲ್ಲಿ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಅಜಯ್ ತ್ರಿಪಾಠಿ ತಿಳಿಸಿದ್ದಾರೆ.

ಅಬಿದ್ ಅನೇಕ ಹುಡುಗಿಯರಿಗೆ ಮೋಸ ಮಾಡಿದ್ದಾನೆ ಮತ್ತು ಅಪರಾಧ ವಿಭಾಗದಲ್ಲಿ 'ಎನ್​ಕೌಂಟರ್ ಸ್ಪೆಷಲಿಸ್ಟ್' ಎಂದು ಸುಳ್ಳು ಹೇಳಿ ಓರ್ವ ಮಹಿಳೆಯನ್ನು 2015 ರಲ್ಲಿ ಭೇಟಿ ಮಾಡಿದ್ದಾನೆ. ಅವನು ಮಹಿಳೆಯ ಮನೆಯಲ್ಲಿ ಬಾಡಿಗೆ ಇದ್ದು, ಅವಳನ್ನು ಮದುವೆಯಾಗಲು ಅವಳ ಖಾಸಗಿ ಚಿತ್ರಗಳು ಮತ್ತು ವಿಡಿಯೋಗಳನ್ನು ಮಾಡಿ ಮದುವೆ ಆಗದಿದ್ದರೆ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುವ ಮೂಲಕ ಅವಳನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.