ETV Bharat / bharat

ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಹರಾಜು... ಬರೋಬ್ಬರಿ 44 ಲಕ್ಷ ರೂ. ನೀಡಿ ಬಿಡ್​​ ಗೆದ್ದ ವ್ಯಕ್ತಿ! - ಬಿಡ್​ ಮೂಲಕ ಸರಪಂಚ್ ಹುದ್ದೆ ಗೆದ್ದ ವ್ಯಕ್ತಿ

ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕಾಗಿ ಹರಾಜು ಪ್ರಕ್ರಿಯೆ ನಡೆದಿದ್ದು, ವ್ಯಕ್ತಿಯೋರ್ವ ಬರೋಬ್ಬರಿ 44 ಲಕ್ಷ ರೂ. ನೀಡಿ ಈ ಬಿಡ್​ ಗೆದ್ದಿದ್ದಾನೆ.

Man gets sarpanch post through Auction
Man gets sarpanch post through Auction
author img

By

Published : Dec 16, 2021, 3:32 AM IST

ಅಶೋಕ​ನಗರ(ಮಧ್ಯಪ್ರದೇಶ): ಕ್ರಿಕೆಟ್​, ಕಬಡ್ಡಿ, ಫುಟ್ಬಾಲ್​​ ಸೇರಿದಂತೆ ತರಕಾರಿ ಮಾರುಕಟ್ಟೆಗಳಲ್ಲಿ ಹರಾಜು(ಬಿಡ್​​) ಕೂಗುವುದು ಸರ್ವೆ ಸಾಮಾನ್ಯ. ಆದರೆ, ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೇ ಮೊದಲ ಸಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ(ಸರಪಂಚ್​) ಹರಾಜು ಮೂಲಕ ಆಯ್ಕೆ ಮಾಡಲಾಗಿದೆ.

Man gets sarpanch post through Auction
ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಹರಾಜು

ಮಧ್ಯಪ್ರದೇಶದ ಅಶೋಕನಗರದಲ್ಲಿ ಈ ವಿಚಿತ್ರ ಪ್ರಕರಣ ನಡೆದಿದೆ. ಗ್ರಾಮ ಪಂಚಾಯ್ತಿ ಸರಪಂಚ್​​ ಸ್ಥಾನಕ್ಕಾಗಿ ಹರಾಜು ಪ್ರಕ್ರಿಯೆ ವ್ಯಕ್ತಿಯೋರ್ವನ ಆಯ್ಕೆ ಮಾಡಲಾಗಿದೆ. ಈ ಹುದ್ದೆಗೆ ಆಯ್ಕೆಯಾಗಿರುವ ವ್ಯಕ್ತಿ ಬರೋಬ್ಬರಿ 44 ಲಕ್ಷ ರೂ.ನೀಡಿದ್ದು, ಗ್ರಾಮದ ದೇವಸ್ಥಾನದಲ್ಲಿ ಬಿಡ್​​ ನಡೆಸಲಾಗಿದೆ.

44 ಲಕ್ಷ ರೂ. ನೀಡಿ ಹರಾಜು ಮೂಲಕ ಸರಪಂಚ್​ ಹುದ್ದೆ ಗೆದ್ದ ವ್ಯಕ್ತಿ

ಚಂದೇರಿ ಜಿಲ್ಲೆಯಲ್ಲಿ ಬರುವ ಭತೌಲಿ ಗ್ರಾಮದಲ್ಲಿ ಪಂಚಾಯ್ತಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಬೇಕಿದೆ. ಆದರೆ, ಗ್ರಾಮಸ್ಥರು ತಮ್ಮ ಸರಪಂಚ್​ನ ಆಯ್ಕೆ ಮಾಡುವ ಉದ್ದೇಶದಿಂದ ದೇವಸ್ಥಾನದಲ್ಲಿ ಸಭೆ ಸೇರಿದ್ದರು. ಇಲ್ಲಿ ಸರಪಂಚ್​​ ಹುದ್ದೆಗಾಗಿ ಹರಾಜು​ ನಡೆಸಲಾಗಿದ್ದು,​ ಸೌಭಾಗ್​ ಸಿಂಗ್​ ಎಂಬ ವ್ಯಕ್ತಿ 44 ಲಕ್ಷ ರೂ. ನೀಡಿ ಬಿಡ್​ ಖರೀದಿ ಮಾಡಿದ್ದಾರೆ.

Man gets sarpanch post through Auction
ಬರೋಬ್ಬರಿ 44 ಲಕ್ಷ ರೂ. ನೀಡಿ ಬಿಡ್​​ ಗೆದ್ದ ವ್ಯಕ್ತಿ

ಇದನ್ನೂ ಓದಿರಿ: ಗ್ರಾಮೀಣ ಜನರ ಸೇವೆ ಮಾಡುವ ಬಯಕೆ... ಪಂಚಾಯ್ತಿ ಚುನಾವಣಾ ಕಣಕ್ಕಿಳಿದ ಮಾಡೆಲ್​

ಗ್ರಾಮ ಪಂಚಾಯ್ತಿ ಸರಪಂಚ್​ ಹುದ್ದೆಗೆ ಗ್ರಾಮದ ನಾಲ್ವರು ಬಿಡ್​​ನಲ್ಲಿ ಭಾಗಿಯಾಗಿದ್ದರು. ಹರಾಜು ಪ್ರಕ್ರಿಯೆಯಲ್ಲಿ 21 ಲಕ್ಷ ರೂ.ದಿಂದ ಆರಂಭಗೊಂಡಿದ್ದು, ಕೊನೆಯದಾಗಿ ಗ್ರಾಮದ ಸೌಭಾಗ್​ ಸಿಂಗ್​​ 44 ಲಕ್ಷ ರೂ. ನೀಡಿ ಆಯ್ಕೆಯಾಗಿದ್ದಾರೆ. ಸರಪಂಚ್​ ಆಗಿ ಆಯ್ಕೆಯಾಗಿರುವ ವ್ಯಕ್ತಿ ನೀಡುವ 44 ಲಕ್ಷ ರೂ. ಹಣ ಗ್ರಾಮದ ದೇವಸ್ಥಾನದ ಅಭಿವೃದ್ಧಿಗಾಗಿ ವಿನಿಯೋಗ ಮಾಡಲು ನಿರ್ಧರಿಸಲಾಗಿದೆ.

ಈ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ, ಪ್ರಕರಣದ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿ ನಾಮಪತ್ರ ಸಲ್ಲಿಕೆ ಮಾಡಬೇಕು.ಇದರ ಬಗ್ಗೆ ವಿಚಾರಣೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.