ETV Bharat / bharat

ರೈಸ್ ಪುಲ್ಲಿಂಗ್ ಯಂತ್ರದ ಹೆಸರಲ್ಲಿ ಆರು ಕೋಟಿ ರೂ.ವಂಚನೆ: ನಾಲ್ವರ ವಿರುದ್ಧ ಎಫ್‌ಐಆರ್ - ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್

ನಾಸಾಗೆ ರೈಸ್ ಪುಲ್ಲರ್ ಯಂತ್ರಗಳನ್ನು ಮಾರಾಟ ಮಾಡುವ ನೆಪದಲ್ಲಿ ಹಲವರಿಗೆ ಕೋಟ್ಯಂತರ ರೂ. ವಂಚಿಸಿದ ಆರೋಪದ ಮೇಲೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

Representative image
ಸಾಂದರ್ಭಿಕ ಚಿತ್ರ
author img

By

Published : Feb 3, 2023, 7:43 AM IST

ಪುಣೆ(ಮಹಾರಾಷ್ಟ್ರ): ಅಮೆರಿಕದ ಪ್ರಮುಖ ಏಜೆನ್ಸಿಯಾದ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ)ಗೆ ರೈಸ್ ಪುಲ್ಲರ್ ಯಂತ್ರಗಳನ್ನು ಮಾರಾಟ ಮಾಡುವ ನೆಪದಲ್ಲಿ ಸುಮಾರು 100 ಜನರಿಗೆ ಒಟ್ಟು 6 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಪುಣೆಯಲ್ಲಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನಾಲ್ವರ ವಿರುದ್ಧ ಎಫ್‌ಐಆರ್: ಈ ಸಂಬಂಧ ಹಡಪ್ಸರ್ ನಿವಾಸಿ ಬಾಬಾಸಾಹೇಬ್ ಸೋನಾವಾನೆ (50) ಮಂಗಳವಾರ ಬಂಡ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ರಾಮ್ ಗಾಯಕ್ವಾಡ್, ರಾಮಚಂದ್ರ ವಾಘಮಾರೆ, ಸಂತೋಷ್ ಸಪ್ಕಲ್ ಮತ್ತು ರಾಹುಲ್ ಜಾಧವ್ ಎಂದು ಗುರುತಿಸಲಾದ ನಾಲ್ವರು ಶಂಕಿತರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 406, 420, 467, 468, 471, 120 ಬಿ, 34 ಮತ್ತು ಮಹಾರಾಷ್ಟ್ರ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅನೇಕರಿಗೆ ಆಮಿಷ: ಪೊಲೀಸರ ಪ್ರಕಾರ, ಜೂನ್ 2018 ರಿಂದ, ಆರೋಪಿಗಳು ನಾಸಾಗೆ "ರೈಸ್ ಪುಲ್ಲರ್ ಯಂತ್ರ"ಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿ ಹೂಡಿಕೆ ಮಾಡುವಂತೆ ಅನೇಕ ಜನರಿಗೆ ಆಮಿಷವೊಡ್ಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಇದರಿಂದ ಬೃಹತ್​ ಆದಾಯ ಸಿಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಈ ಉದ್ದೇಶಕ್ಕಾಗಿ ನಾಸಾದ ಸಂಶೋಧಕರು ಭಾರತಕ್ಕೆ ಬರಲಿದ್ದಾರೆ ಎಂದು ಆರೋಪಿಗಳು ಹೇಳಿಕೊಂಡಿದ್ದರು. ಅಲ್ಲದೇ ಪುಣೆ ರೈಲ್ವೆ ನಿಲ್ದಾಣದ ಬಳಿಯ ಸಾಧು ವಾಸ್ವಾನಿ ಚೌಕ್ ಪ್ರದೇಶದ ಹೋಟೆಲ್‌ನಲ್ಲಿ ಹೂಡಿಕೆದಾರರೊಂದಿಗೆ ಸಭೆ ಸಹ ನಡೆಸಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ರೈಸ್ ಪುಲ್ಲಿಂಗ್ ದಂಧೆ: ಆಂಧ್ರ ಮೂಲದ ದಂಪತಿ ಸೇರಿ 6 ಜನರ ಬಂಧನ

ರೈಸ್ ಪುಲ್ಲರ್ ಮೆಟಲ್​​ಗೆ ಭಾರಿ ಬೇಡಿಕೆ ಇದೆ ಎಂದು ಆರೋಪಿಗಳು ಜನರಿಗೆ ಆಮಿಷ ಒಡ್ಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಲವಾರು ವ್ಯಕ್ತಿಗಳು ವ್ಯವಹಾರದಲ್ಲಿ ಹಣವನ್ನು ಹೂಡಿಕೆ ಮಾಡಿದರು. ಆದರೆ, ಭರವಸೆಯಂತೆ ಆದಾಯ ಸಿಗಲಿಲ್ಲ. ಹಾಗಾಗಿ ಸುಮಾರು ನೂರು ಮಂದಿ ಹೂಡಿಕೆದಾರರು ಪುಣೆ ನಗರ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗದಲ್ಲಿ (ಇಒಡಬ್ಲ್ಯೂ) ದೂರು ಸಲ್ಲಿಸಿದ್ದಾರೆ. ಈ ದೂರುಗಳ ವಿಚಾರಣೆ ನಡೆಸಿದ ಬಳಿಕ ಎಫ್‌ಐಆರ್‌ ದಾಖಲಿಸಲಾಗಿದೆ. ಇಒಡಬ್ಲ್ಯೂ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್ ರೂಯಿಕರ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ರೈಸ್ ಪುಲ್ಲಿಂಗ್​ ಗ್ಯಾಂಗ್​​ ಪತ್ತೆ: ಹೈದರಾಬಾದ್​ನಲ್ಲಿ ರೈಸ್ ಪುಲ್ಲಿಂಗ್​ ಗ್ಯಾಂಗ್​​ವೊಂದನ್ನು ಇತ್ತೀಚೆಗೆ ಬೆಂಗಳೂರು ಪೊಲೀಸರು ಪತ್ತೆ ಹೆಚ್ಚಿದ್ದರು. ಈ ಗ್ಯಾಂಗ್​ ಮಹಿಳೆ ಸೇರಿದಂತೆ 15 ಮಂದಿಯಿಂದ 5 ಕೋಟಿಗೂ ಅಧಿಕ ಹಣ ವಸೂಲಿ ಮಾಡಿರುವುದು ತನಿಖೆಯಿಂದ ಪತ್ತೆಯಾಗಿತ್ತು. ರೈಸ್ ಪುಲ್ಲಿಂಗ್​ ಗ್ಯಾಂಗ್​ನಿಂದ ಮೋಸ ಹೋದ ವ್ಯಕ್ತಿಯೊಬ್ಬರು ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಜಾಡು ಹಿಡಿದು ಬೆಂಗಳೂರು ಪೊಲೀಸರು ಹೈದರಾಬಾದ್​ಗೆ ಬಂದಿದ್ದರು.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ರೈಸ್ ಪುಲ್ಲಿಂಗ್​ ಗ್ಯಾಂಗ್​​ ಪತ್ತೆ ಹಚ್ಚಿಸಿದ ಬೆಂಗಳೂರು ಪೊಲೀಸರು: 5 ಕೋಟಿಗೂ ಅಧಿಕ ಹಣ ವಸೂಲಿ ಬೆಳಕಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.