ಕಾನ್ಪುರ(ಉತ್ತರ ಪ್ರದೇಶ): ಮಾವನ ಮನೆಯವರು ಮೋಸ ಮಾಡಿದ್ದು, ತೃತೀಯಲಿಂಗಿಯೊಬ್ಬರ ಜೊತೆಗೆ ತನಗೆ ವಿವಾಹ ಮಾಡಿಸಲಾಗಿದೆ ಎಂದು ವ್ಯಕ್ತಿವೋರ್ವ ಆರೋಪ ಮಾಡಿದ್ದು, ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿರುವ ವಿಚಿತ್ರ ಘಟನೆ ಕಾನ್ಪುರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಪಂಕಿ ಪ್ರದೇಶದ ಶಾಸ್ತ್ರಿ ನಗರ ನಿವಾಸಿ ಏಪ್ರಿಲ್ 28ರಂದು ವಿವಾಹವಾಗಿದ್ದನು. ಮದುವೆಯಾದ ಕೆಲವು ದಿನಗಳಲ್ಲಿ ತನ್ನೊಂದಿಗೆ ದೈಹಿಕವಾಗಿ ಸಹಕರಿಸುತ್ತಿಲ್ಲ ಎಂದು ಅನುಮಾನಗೊಂಡು, ವೈದ್ಯರ ಬಳಿ ತಪಾಸಣೆಗೆ ಕರೆದುಕೊಂಡು ಹೋದಾಗ ತಾನು ಮದುವೆ ಆಗಿದ್ದು ಮಹಿಳೆಯನ್ನಲ್ಲ ಅನ್ನೋ ವಿಚಾರ ತಿಳಿದಿದೆ.
ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ವಂಚಿಸಿ ತೃತೀಯ ಲಿಂಗಿಯೊಬ್ಬರನ್ನು ಮದುವೆ ಮಾಡಿದ ಆರೋಪದಲ್ಲಿ ತೃತೀಯ ಲಿಂಗಿ, ಆಕೆಯ ಪೋಷಕರು ಮತ್ತು ವಿವಾಹ ಸಂಬಂಧ ಕುದುರಿಸಿದ ಬ್ರೋಕರ್ ವಿರುದ್ಧ ದೂರು ದಾಖಲಿಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಮುಂಬೈ ಸ್ಫೋಟದ ರೂವಾರಿ ತಹವ್ವೂರ್ ಹುಸೈನ್ ಗಡಿಪಾರು ಅರ್ಜಿ ಜೂನ್ 24ಕ್ಕೆ ವಿಚಾರಣೆ
ವೈದ್ಯಕೀಯ ವರದಿಗಳ ಸಮೇತ ದೂರು ನೀಡಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420ರ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸುಮಾರು 8 ಮಂದಿಯ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.