ಗುಂಟೂರು (ಆಂಧ್ರಪ್ರದೇಶ) : ತಾನು ಕೇಳಿದಷ್ಟು ಹಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ಮಹಿಳೆಯೋರ್ವಳನ್ನ ಲಾರಿ ಡ್ರೈವರ್ ಎಳೆದೊಯ್ದ ಪರಿಣಾಮ ಆಕೆ ಲಾರಿಯಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಯ್ಡುಪೇಟನ ಜಿಂದಾಲ್ ಬಳಿ ಈ ದಾರುಣ ಘಟನೆ ನಡೆದಿದ್ದು, ಮಹಿಳೆಯೋರ್ವಳು ತನ್ನ ಮಕ್ಕಳೊಂದಿಗೆ ಚಿಲಕಲೂರಿಪೇಟೆಯಿಂದ ಕಸ ಎತ್ತಲು ಮಕ್ಕಳೊಂದಿಗೆ ಲಾರಿವೊಂದರಲ್ಲಿ ಗುಂಟೂರಿಗೆ ಬಂದಿದ್ದಾಳೆ. ಈ ವೇಳೆ ಡ್ರೈವರ್ ಕೇಳಿರುವುದಕ್ಕಿಂತಲೂ ಕಡಿಮೆ ಹಣ ನೀಡಿದ್ದಕ್ಕಾಗಿ ಆಕ್ರೋಶಗೊಂಡಿರುವ ವ್ಯಕ್ತಿ, ಆಕೆಯನ್ನ ಲಾರಿಯಲ್ಲೇ ಎಳೆದೊಯ್ದಿದ್ದಾನೆ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ: ಶರಣಾಗಲು ಕಾಲಾವಕಾಶ ಕೋರಿ ಸುಪ್ರೀಂಕೋರ್ಟ್ ಮೊರೆ ಹೋದ ಸಿಧು
ರಮಣ ಎಂಬ ಮಹಿಳೆ ತನ್ನ ಮಕ್ಕಳೊಂದಿಗೆ ಗುಂಟೂರಿಗೆ ಆಗಮಿಸಿದ್ದು, ಈ ವೇಳೆ ಲಾರಿ ಚಾಲಕನಿಗೆ 300 ರೂ. ಬದಲಿಗೆ 100 ರೂ. ನೀಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಡ್ರೈವರ್ ಲಾರಿ ಮುಂದಕ್ಕೆ ಓಡಿಸಿದ್ದಾನೆ. ಈ ವೇಳೆ ಮಹಿಳೆ ಲಾರಿಯಡಿ ಬಿದ್ದು ಸಾವನ್ನಪ್ಪಿದ್ದಾಳೆ. ತಾಯಿ ಸಾವನ್ನಪ್ಪಿರುವುದನ್ನ ನೋಡಿರುವ ಮಕ್ಕಳು ಆಕೆಯ ಮೈಮೇಲೆ ಬಿದ್ದು ಗೋಳಾಡಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಚಾಲಕನಿಗೋಸ್ಕರ ಶೋಧಕಾರ್ಯ ಆರಂಭಿಸಿದ್ದಾರೆ.