ETV Bharat / bharat

ಕುಡಿದ ನಶೆಯಲ್ಲಿ ಬಂಡೆ ಮೇಲೆ ಸೆಲ್ಫಿಗೆ ಯತ್ನಿಸಿ ಕೆಳಕ್ಕೆ ಬಿದ್ದ ವ್ಯಕ್ತಿ

ಹರಿಯಾಣದ ಗುರುಗ್ರಾಮ್ - ಫರಿದಾಬಾದ್ ರಸ್ತೆಯಲ್ಲಿ ಬಂಡೆ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದ ವೇಳೆ ಆಯ ತಪ್ಪಿ ಕಂದಕಕ್ಕೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

man-dies-after-falling-from-a-cliff-while-taking-selfie-in-faridabad
ಕುಡಿದ ನಶೆಯಲ್ಲಿ ಬಂಡೆ ಮೇಲೆ ಸೆಲ್ಫಿಗೆ ಯತ್ನಿಸಿ ಬಿದ್ದ ವ್ಯಕ್ತಿ: ಕುಟುಂಬಕ್ಕೆ ಮಾಡಿದ ವಿಡಿಯೋ ಕಾಲ್​​ ಕೊನೆಯಾಯ್ತು
author img

By

Published : Nov 22, 2022, 9:58 PM IST

ಫರಿದಾಬಾದ್ (ಹರಿಯಾಣ): ಕುಡಿತ ನಶೆಯಲ್ಲಿ ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಂಡೆಯ ಮೇಲಿಂದ ಆಳವಾದ ಕಂದಕಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಹರಿಯಾಣದ ಗುರುಗ್ರಾಮ - ಫರಿದಾಬಾದ್ ರಸ್ತೆಯ ಕಲ್ಲಿನ ಗಣಿಯಲ್ಲಿ ನಡೆದಿದೆ. ಮೃತರನ್ನು 42 ವರ್ಷದ ಕಮಲ್ ಎಂದು ಗುರುತಿಸಲಾಗಿದೆ.

ಕಳೆದ ಶನಿವಾರ ಇಲ್ಲಿನ ಅರಾವಳಿ ಬೆಟ್ಟಯ ವೈಂದಾ ಕಲ್ಲಿನ ಗಣಿ ಬಳಿಗೆ ಕಮಲ್​ ತನ್ನ ಸ್ನೇಹಿತರಾದ ರವಿ ಮತ್ತು ಹಮೇಂದ್ರ ಎಂಬುವವರೊಂದಿಗೆ ಮದ್ಯ ಸೇವಿಸಲು ಹೋಗಿದ್ದರು. ವೈನ್ ಸೇವಿಸಿದ ನಂತರ ಕಮಲ್ ತನ್ನ ಕುಟುಂಬ ಸದಸ್ಯರಿಗೆ ವಿಡಿಯೋ ಕಾಲ್​ ಮಾಡಿ, ಬೃಹತ್​ ಬಂಡೆಯ ತುದಿ ತೋರಿಸಿದ್ದಾರೆ. ಬಳಿಕ ಸೆಲ್ಫಿ ತೆಗೆಯುತ್ತಿದ್ದ ವೇಳೆ ಆಯಾ ತಪ್ಪಿ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಮಲ್​ ಬಿದ್ದ ಬಗ್ಗೆ ಅಂದು ರಾತ್ರಿ 9:30ಕ್ಕೆ ನಮಗೆ ಮಾಹಿತಿ ಸಿಕ್ಕಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಆದರೆ, ಅಂದು ಕತ್ತಲೆಯಾಗಿದ್ದ ಕಾರಣ ಭಾನುವಾರ ಮಧ್ಯಾಹ್ನ ಶವ ಹೊರತೆಗೆಯಲಾಯಿತು. ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆ ಸಂದರ್ಭದಲ್ಲಿ ಜೊತೆಗಿದ್ದ ಇಬ್ಬರು ಸ್ನೇಹಿತರನ್ನು ವಿಚಾರಣೆಗೊಳಪಡಿಸಲಾಗಿದೆ.

ಇದು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕ ದುಷ್ಕೃತ್ಯವೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಅಂತರ್ಜಾತಿ ವಿವಾಹ..12 ದಿನದಲ್ಲಿ ಜನ್ಮದಿನ ಆಚರಿಸಿಕೊಳ್ಳಬೇಕಿದ್ದ ಮಗಳ ಹತ್ಯೆ.. ಚಿತೆಗೆ ಬೆಂಕಿಯಿಟ್ಟ ಕೊಲೆಗಾರ ಅಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.