ETV Bharat / bharat

ಮದುವೆಯಾದ್ರೂ 10 ಗರ್ಲ್​ಫ್ರೆಂಡ್ಸ್​​​​: ಲವರ್​ಗಳಿಗಾಗಿ ದರೋಡೆ; ಆರೋಪಿಯಿಂದ ಜಾಗ್ವಾರ್ ಸೇರಿ ಚಿನ್ನಾಭರಣ ವಶ - ಲವರ್​ಗಳಿಗಾಗಿ ದರೋಡೆ

ಗರ್ಲ್​ಫ್ರೆಂಡ್​ಗಳ ಆಸೆ ಈಡೇರಿಕೆ ಮಾಡಲು ಕಳ್ಳತನ ಮಾಡ್ತಿದ್ದ ವ್ಯಕ್ತಿಯೋರ್ವನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆತನಿಂದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.

Man arrest
Man arrest
author img

By

Published : Oct 25, 2021, 1:43 AM IST

ನವದೆಹಲಿ/ಘಾಜಿಯಾಬಾದ್​: ಲವರ್​​ಗಳ ಆಸೆ ಈಡೇರಿಸಲು ಕಳ್ಳತನ ಮಾಡ್ತಿದ್ದ ವ್ಯಕ್ತಿಯೋರ್ವನ ಬಂಧನ ಮಾಡುವಲ್ಲಿ ಘಾಜಿಯಾಬಾದ್​​ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಚಿನ್ನಾಭರಣ,ವಜ್ರ ಸೇರಿದಂತೆ 1 ಕೋಟಿ ರೂ. ಮೌಲ್ಯದ ಜಾಗ್ವಾರ್ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.

Man arrest
ಬಂಧಿತನಿಂದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ವಶ

ಬಂಧಿತ ಆರೋಪಿಯನ್ನ ಇರ್ಫಾನ್​ ಅಲಿಯಾಸ್​ ಉಜಾಲ್​ ಎಂದು ಗುರುತಿಸಲಾಗಿದೆ. ಕಳ್ಳತನದಿಂದಲೇ ಈತ 1 ಕೋಟಿ ರೂಪಾಯಿ ಮೌಲ್ಯದ ಜಾಗ್ವಾರ್ ಕಾರು ಖರೀದಿ ಮಾಡಿದ್ದನೆಂದು ತಿಳಿದು ಬಂದಿದೆ. ಈಗಾಗಲೇ ಮದುವೆಯಾಗಿದ್ದ ಈ ವ್ಯಕ್ತಿಗೆ 10 ಗರ್ಲ್​ಫ್ರೆಂಡ್​ಗಳಿದ್ದರು ಎಂದು ತಿಳಿದು ಬಂದಿದೆ. ಅವರ ಆಸೆ ಈಡೇರಿಕೆ ಮಾಡುವ ಉದ್ದೇಶದಿಂದ ಕಳ್ಳತನ ಮಾಡ್ತಿದ್ದನು.

ತನಿಖೆ ವೇಳೆ ಆಶ್ಚರ್ಯಕರವಾದ ಮಾಹಿತಿ ಬಹಿರಂಗಗೊಂಡಿದ್ದು, ಗೋವಾ ರಾಜ್ಯಪಾಲರ ಪಕ್ಕದ ಮನೆ ಹಾಗೂ ನ್ಯಾಯಾಧೀಶರ ಮನೆಗೂ ಕನ್ನ ಹಾಕಿದ್ದನು ಎನ್ನಲಾಗಿದೆ.

ಇದನ್ನೂ ಓದಿರಿ: ಮರುಕಳಿಸದ ಇತಿಹಾಸ: ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಭಾರತಕ್ಕೆ ಮೊದಲ ಸೋಲು

ಆರೋಪಿಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತು ಹಾಗೂ 1 ಕೋಟಿ ರೂ. ಮೌಲ್ಯದ ಜ್ವಾಗ್ವಾರ್ ಕಾರು ಸೇರಿದಂತೆ ಇತರೆ ಎರಡು ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ. ಈತ ಏಕಾಂಗಿಯಾಗಿ ದರೋಡೆ ಮಾಡ್ತಿದ್ದನು ಎಂದು ತಿಳಿದು ಬಂದಿದೆ. ಆರೋಪಿ ಗೋವಾ, ತಮಿಳುನಾಡು, ದೆಹಲಿ, ಉತ್ತರ ಪ್ರದೇಶ, ಪಂಜಾಬ್​, ಹರಿಯಾಣ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗುಜರಾತ್​​​ನಲ್ಲಿ ಕಳ್ಳತನ ಮಾಡಿದ್ದು, ತನ್ನ ಅಪರಾಧ ಒಪ್ಪಿಕೊಂಡಿದ್ದಾನೆ. ಈತನ ಮೇಲೆ 25ಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದು, ಈತನಿಗೆ ಸಹಾಯ ಮಾಡಿರುವ ಆರೋಪದ ಮೇಲೆ ಹೆಂಡತಿ ಹಾಗೂ ಓರ್ವ ಗೆಳತಿಯನ್ನ ಘಾಜಿಯಾಬಾದ್​ ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.