ETV Bharat / bharat

ಬಿ.ಸಿ ರಾಯ್​ & ಜ್ಯೋತಿ ಬಸು ನಂತರ 3ನೇ ಅವಧಿಗೆ ಸಿಎಂ ಆದ ಮಮತಾ; ಏನೆಲ್ಲ ಸವಾಲು? - ಮಾಜಿ ಸಿಎಂ ಬಿ.ಸಿ ರಾಯ್

ತೀವ್ರ ಹಣಾಹಣಿಯಿಂದ ಕೂಡಿದ್ದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಹ್ಯಾಟ್ರಿಕ್​ ಗೆಲುವು ಸಾಧಿಸಿದ್ದು, ನಿನ್ನೆ ರಾಜ್ಯದ ಸಿಎಂ ಆಗಿ ಪದಗ್ರಹಣ ಮಾಡಿದ್ದಾರೆ. ಆದರೆ, ಸದ್ಯ ಅವರ ಮುಂದೆ ಹತ್ತಾರು ಸವಾಲುಗಳಿವೆ.

Mamata Banerjee
Mamata Banerjee
author img

By

Published : May 6, 2021, 5:40 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲು ಮಾಡಿ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಕಾಂಗ್ರೆಸ್​​ನ ದಂತಕಥೆ ಡಾ. ಬಿ.ಸಿ ರಾಯ್​ ಹಾಗೂ ಜ್ಯೋತಿ ಬಸು ಅವರ ನಂತರ ಈ ಸಾಧನೆ ಮಾಡಿರುವ ಮುಖ್ಯಮಂತ್ರಿ ಎಂಬ ಸಾಧನೆಗೂ ಇದೀಗ ಮಮತಾ ಬ್ಯಾನರ್ಜಿ ಪಾತ್ರರಾಗಿದ್ದಾರೆ. ಈ ಹಿಂದೆ ರಾಯ್​ ಹಾಗೂ ಜ್ಯೋತಿ ಬಸು ಪಶ್ಚಿಮ ಬಂಗಾಳದಲ್ಲಿ ಸತತವಾಗಿ ಮೂರು ಅವಧಿಗೆ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿದ್ದರು.

ಆದರೆ, ಇದೀಗ ಉದ್ಭವವಾಗುವ ಎರಡು ಪ್ರಶ್ನೆಗಳೆಂದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಹಾಗೂ ತೃಣಮೂಲ ಕಾಂಗ್ರೆಸ್​​ನ ಮುಖ್ಯಸ್ಥರಾಗಿ ಈ ಹಿಂದಿನ ಎರಡು ಅವಧಿಗಿಂತಲೂ ಮೂರನೇ ಅವಧಿ ಎಷ್ಟು ಭಿನ್ನವಾಗಿರುತ್ತದೆ ಎಂಬುದು. ಇದರ ಜತೆಗೆ ರಾಜಕಾರಣಿಯಾಗಿ ಅವರು ಮೂರನೇಯ ಅವಧಿ ಎಷ್ಟೊಂದು ಸವಾಲುಗಳಿಂದ ಕೂಡಿದೆ ಎಂಬುದಾಗಿದೆ.

ಇದನ್ನೂ ಓದಿ: ಕೋವಿಡ್​ ತಂದಿಟ್ಟ ಸಂಕಷ್ಟ: 23 ಕೋಟಿ ಭಾರತೀಯರನ್ನ ಬಡತನಕ್ಕೆ ತಳ್ಳಿದ ಕೊರೊನಾ!

2011ರಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅನೇಕ ಸವಾಲು ಎದುರಿಸಿರುವ ಮಮತಾ, 2016ರಲ್ಲಿ ಮತ್ತೊಮ್ಮೆ ರಾಜ್ಯದ ಸಿಎಂ ಆಗಿ ಪದಗ್ರಹಣ ಮಾಡಿದ್ದರು. ಈ ಎರಡು ಅವಧಿಯಲ್ಲಿ ಮುಖ್ಯವಾಗಿ ಎಡಪಂಥೀಯರ ಸಮಸ್ಯೆ ಎದುರಿಸಿದ ಮಮತಾ ಮೂರನೇ ಅವಧಿಯಲ್ಲಿ ವಿಧಾನಸಭೆಯೊಳಗೆ ಬಿಜೆಪಿಯನ್ನ ಎದುರಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಕಾರಣ ಪಶ್ಚಿಮ ಬಂಗಾಳದಲ್ಲಿ ಇದೀಗ ಬಿಜೆಪಿ ವಿರೋಧ ಪಕ್ಷವಾಗಿದೆ.

ಹಿರಿಯ ಪತ್ರಕರ್ತ ಸಂತನು ಸನ್ಯಾಲ್​ ಪ್ರಕಾರ, ಮುಖ್ಯಮಂತ್ರಿಯಾಗಿ ಮೂರನೇ ಅವಧಿಯಲ್ಲಿ ಮಮತಾ ಬ್ಯಾನರ್ಜಿ ಹೆಚ್ಚು ಸವಾಲು ಎದುರಿಸಬೇಕಾಗಿದೆ. ಮತದಾನದ ನಂತರದ ಹಿಂಸಾಚಾರ, ಕೋವಿಡ್ ಬಿಕ್ಕಟ್ಟು ಹಾಗೂ ರಾಜ್ಯದಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಇವರಿಗೆ ಪ್ರಮುಖ ಸವಾಲು. ಇದರ ಜತೆಗೆ ರಾಜ್ಯದಲ್ಲಿ ಬಂಡವಾಳ ಶಾಹಿಗಳನ್ನ ಸೆಳೆಯುವ ಪ್ರಯತ್ನ ಸಹ ನಡೆಯಬೇಕಾಗಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.