ಕೋಲ್ಕತ್ತಾ( ಪಶ್ಚಿಮ ಬಂಗಾಳ): ಮಮತಾ ಬ್ಯಾನರ್ಜಿ ದುಬೈಗೆ ತೆರಳಬೇಕಿದ್ದ ವಿಮಾನವೂ ತಾಂತ್ರಿಕ ಕಾರಣಗಳಿಂದಾಗಿ ಮೂರು ಗಂಟೆ ವಿಳಂಬಗೊಂಡಿದೆ ಎಂದು ವರದಿ ಆಗಿದೆ. ಪಶ್ಚಿಮ ಬಂಗಾಳಕ್ಕೆ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅವರು ವಾಣಿಜ್ಯ ಶೃಂಗಸಭೆಯಲ್ಲಿ ಭಾಗಿಯಾಗುವ ಉದ್ದೇಶದಿಂದ ವಿದೇಶ ಪ್ರವಾಸ ನಡೆಸಿದ್ದರು, ದುಬೈ ಮತ್ತು ಸ್ಪೇನ್ಗೆ 12 ದಿನದ ಪ್ರವಾಸ ನಡೆಸುವ ಉದ್ದೇಶದಿಂದ ಅವರು ಇಂದು ಬೆಳಗ್ಗೆ 8.30ಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಪ್ರಯಾಣ ನಡೆಸಬೇಕಿತ್ತು.
ಅವರು ಇನ್ನೇನು ಹೊರಡುವ ಮುಂದೆ ತಾಂತ್ರಿಕ ಕಾರಣದಿಂದಾಗಿ ವಿಮಾನ ಮೂರು ಗಂಟೆ ವಿಳಂಬವಾಗಿದೆ. ಮುಖ್ಯಮಂತ್ರಿಗಳು ಇಂದು ರಾತ್ರಿ ದುಬೈಗೆ ಪ್ರಯಾಣ ನಡೆಸಬೇಕಿತ್ತು. ಅಲ್ಲಿಂದ ಅಂದರೆ ದುಬೈನಿಂದು ಬುಧವಾರ ಅವರು ಸ್ಪೇನ್ ರಾಜಧಾನಿ ಮ್ಯಾಡ್ರಿಡ್ಗೆ ಪ್ರಯಾಣ ನಡೆಸಬೇಕಿತು. ಇದೀಗ ವಿಮಾನ ವಿಳಂಬದಿಂದಾಗಿ ಸ್ಪೇನ್ಗೆ ಸಂಪರ್ಕಿಸುವ ವಿಮಾನದ ಲಭ್ಯತೆ ಇಲ್ಲದ ಕಾರಣ ಇದೀಗ ಅವರು ದುಬೈನಲ್ಲಿ ಒಂದು ದಿನ ಕಳೆಯಬೇಕಿದೆ.
ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ವಿದೇಶ ಪ್ರಯಾಣ ಬೆಳಸಿ ಐದು ವರ್ಷಗಳಾಗಿದೆ. ಈ ವರ್ಷ ಕೋಲ್ಕತ್ತಾ ಇಂಟರ್ನ್ಯಾಷನ್ ಬುಕ್ ಫೇರ್ ಮಾದರಿ ದೇಶ ಸ್ಪೇನ್ ಆಗಿದೆ. ಅವರು ಈ ಉದ್ಯಮದಲ್ಲಿ ಉತ್ತಮ ಉತ್ಪಾದಕರಾಗಿದ್ದು, ಅಲ್ಲಿ ನಾವು ವಾಣಿಜ್ಯ ಸಭೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿದರು
ವಿದೇಶಿ ಪ್ರತಿನಿಧಿಗಳು ಆಗಾಗ್ಗೆ ಇಲ್ಲಿಗೆ ಬರುತ್ತಿದ್ದಾರೆ. ಆದರೆ, ನಾವು ಅಲ್ಲಿಗೆ ಹೋಗಲು ಆಗಿರಲಿಲ್ಲ. ಇದೇ ಕಾರಣ ಇದೀಗ ಹೋಗುತ್ತಿದ್ದೇವೆ. ಇದೇ ವೇಳೆ ದುಬೈನಲ್ಲಿನ ಬ್ಯುಸಿನೆಸ್ ಕಾನ್ಫರೆನ್ಸ್ನಲ್ಲಿ ಭಾಗಿಯಾಗುತ್ತಿದ್ದು, ಈ ಬಗ್ಗೆ ನಿಯಮಿತವಾಗಿ ಮಾಹಿತಿ ನೀಡುವುದಾಗಿ ತಿಳಿಸಿದರು
ಮುಖ್ಯಮಂತ್ರಿಗಳ ಈ ವಿದೇಶಿ ಪ್ರವಾಸದ ವೇಳೆ ಮುಖ್ಯ ಕಾರ್ಯದರ್ಶಿ ಹರಿಕೃಷ್ಣ ದ್ವಿವೇದಿ ಮತ್ತು ಇತರ ಸರ್ಕಾರಿ ಅಧಿಕಾರಿಗಳು ಕೂಡ ಜೊತೆಯಾಗಲಿದ್ದಾರೆ. ಸೌರವ್ ಗಂಗೂಲಿ ಜೊತೆಗೆ ಪೂರ್ವ ಬಂಗಾಳ ಪ್ರತಿನಿಧಿ ಮೊಹುನ್ ಭಗನ್ ಕೂಡ ಇರಲಿದ್ದಾರೆ. ಸೌರವ್ ಗಂಗೂಲಿ ಲಂಡನ್ನಿಂದ ನೇರವಾಗಿ ಮ್ಯಾಡ್ರಿಡ್ಗೆ ತೆರಳಲಿದ್ದಾರೆ.
ಸೋಮವಾರ ಸಿಎಂ ಅವರ ಈ ಪ್ರವಾಸ ಕುರಿತು ಸಂಪೂರ್ಣ ಮಾಹಿತಿಯನ್ನು ರಾಜ್ಯ ಕಾರ್ಯದರ್ಶಿ ನಬನ್ನ ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದರು. ಸಿಎಂ ಮಮತಾ ಬ್ಯಾನರ್ಜಿ ಮೂರು ದಿನ ಮ್ಯಾಡ್ರಿಡ್ನಲ್ಲಿ ತಂಗಲಿದ್ದು, ಅಲ್ಲಿ ಇಂಡಸ್ಟ್ರಿ ಕಾನ್ಫರೆನ್ಸ್ನಲ್ಲಿ ಭೇಟಿಯಾಗಿದ್ದಾರೆ. ಅಲ್ಲಿಂದ ಅವರು ಬಾರ್ಸಿಲೋನಾಕ್ಕೆ ತೆರಳಿದ್ದು ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಸಮ್ಮಿಟ್ (ಬಿಜಿಬಿಎಸ್)ನಲ್ಲಿ ಭಾಗಿಯಾಗಲಿದ್ದಾರೆ. ಇಲ್ಲಿ ಅವರು ಬೆಂಗಾಲ್ ಫುಟ್ಬಾಲ್ ಅಭಿವೃದ್ಧಿ ನಿಟ್ಟಿನಲ್ಲಿ ಲಾ ಲಿಂಗ ಅಧ್ಯಕ್ಷ ಜಾವೇರ್ ಟೆಬಸ್ ಅವರನ್ನು ಭೇಟಿಯಾಗಲಿದ್ದಾರೆ
ವಾಪಸ್ ಬರುವ ಮಾರ್ಗದಲ್ಲಿ ದುಬೈನಲ್ಲಿ ಬಿಜಿಬಿಎಸ್ ಸಂಬಂಧ ಕೆಲವು ಸ್ಥಳೀಯ ಇಂಡಸ್ಟ್ರಿಯನ್ಗಳೊಂದಿಗೆ ಸಭೆಯ ನಡೆಸಲಿದ್ದು, ಸೆ. 23ಕ್ಕೆ ಅವರು ಕೋಲ್ಕತ್ತಾಗೆ ಮರಳಲಿದ್ದಾರೆ ಎಂದರು. (ಐಎಎನ್ಎಸ್)
ಇದನ್ನೂ ಓದಿ: ವಸತಿ ಫ್ಲಾಟ್ಗಳ ಹೆಸರಲ್ಲಿ ವಂಚನೆ ಆರೋಪ.. ಇಡಿ ವಿಚಾರಣೆಗೆ ಹಾಜರಾದ ನಟಿ, ಸಂಸದೆ ನುಸ್ರತ್ ಜಹಾನ್