ETV Bharat / bharat

ಮಾಲ್ಡಾದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಥಳಿಸಿದ ಘಟನೆ: ಸಂತ್ರಸ್ತೆಯರು ಸೇರಿ ಏಳು ಜನರ ಬಂಧನ - ದರೋಡೆ ಪ್ರಕರಣ

Malda incident : ಪಕುವಾ ಹ್ಯಾಟ್ ಪ್ರದೇಶದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರಿಗೆ ಮತ್ತೊಂದು ಗುಂಪಿನ ಮಹಿಳೆಯರು ವಿವಸ್ತ್ರಗೊಳಿಸಿ, ಚಿತ್ರಹಿಂಸೆ ನೀಡಿ ತೀವ್ರ ಥಳಿಸಿರುವ ಅಮಾನುಷ ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಮಾಲ್ಡಾ ಜಿಲ್ಲೆಯ ಎಸ್ಪಿ ಪ್ರದೀಪ್ ಕುಮಾರ್ ಯಾದವ್ ತಿಳಿಸಿದ್ದಾರೆ.

Malda District SP Pradeep Kumar Yadav
ಮಾಲ್ಡಾ ಜಿಲ್ಲೆಯ ಎಸ್ಪಿ ಪ್ರದೀಪ್ ಕುಮಾರ್ ಯಾದವ್
author img

By

Published : Jul 23, 2023, 7:01 PM IST

ಕೋಲ್ಕತ್ತಾ(ಪಶ್ಚಿಮ​ ಬಂಗಾಳ) ಜುಲೈ 19 ರಂದು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಬಾಮಂಗೋಳ ಪೊಲೀಸ್ ಠಾಣೆ ವ್ಯಾಪ್ತಿಯ ಪಕುವಾ ಹ್ಯಾಟ್ ಪ್ರದೇಶದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರಿಗೆ ಮತ್ತೊಂದು ಗುಂಪಿನ ಮಹಿಳೆಯರು ವಿವಸ್ತ್ರಗೊಳಿಸಿ, ಚಿತ್ರಹಿಂಸೆ ನೀಡಿ ತೀವ್ರ ಥಳಿಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವೀಡಿಯೊ ಕ್ಲಿಪ್‌ಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಕುಮಾರ್ ಯಾದವ್ ತಿಳಿಸಿದ್ದಾರೆ.

ಸಂತ್ರಸ್ತ ಇಬ್ಬರು ಮಹಿಳೆಯರು ಪರಿಶಿಷ್ಟ ಜಾತಿಗೆ ಸೇರಿದವರು. ಅವರ ಮೇಲೆ ದಾಳಿ ಮಾಡಿದ ಮಹಿಳೆಯರು ಸಹ ಪರಿಶಿಷ್ಟ ಪಂಗಡದವರು ಆಗಿದ್ದಾರೆ. ವಿವಸ್ತ್ರಗೊಳಿಸಿ, ಚಿತ್ರಹಿಂಸೆ ನೀಡಿ ತೀವ್ರ ಥಳಿಸಿರುವ ಅಮಾನುಷ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಂದ ನಿರ್ಲಕ್ಷ್ಯ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಇಬ್ಬರು ಸಂತ್ರಸ್ತ ಮಹಿಳೆಯರನ್ನು ಬಂಧಿಸಿದ್ದು ಏಕೆ ?: ಬಾಮಂಗೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಂತ್ರಸ್ತ ಇಬ್ಬರು ಮಹಿಳೆಯರು ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವ ಪುರಾವೆ ಸಿಕ್ಕ ಹಿನ್ನೆಲೆ ಬಂಧಿಸಲಾಗಿದೆ. ಇದಲ್ಲದೇ ನಾಲಗೋಳ ಚೆಕ್​ಪೊಸ್ಟ್​ ಧ್ವಂಸ ಕೃತ್ಯದಲ್ಲಿ ಈ ಇಬ್ಬರು ಮಹಿಳೆಯರು ಭಾಗಿಯಾಗಿದ್ದರು. ಈ ವೇಳೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ಈ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಎಸ್ಪಿ ತಿಳಿಸಿದ್ದಾರೆ.

ಆದಿವಾಸಿ ಮಹಿಳೆಯರಿಗೆ ಕಿರುಕುಳ ಆರೋಪ ಐವರ ಬಂಧನ: ಇಬ್ಬರು ಆದಿವಾಸಿ ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪದಡಿ ಬಂಧಿತ ಐವರ ಜತೆಗೆ ಇನ್ನೂ ಕೆಲವರು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಅವರನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ.

ಇಬ್ಬರು ಬುಡಕಟ್ಟು ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತ ಐವರಲ್ಲಿ ಮಿನಾತಿ ತುಡು, ಬಸಂತಿ ಮರ್ಡಿ, ರೇವತಿ ಬರ್ಮನ್ ಎಂಬ ಮೂವರು ಮಹಿಳೆಯರು, ಮನೋರಂಜನ್ ಮೊಂಡಲ್ ಮತ್ತು ಬಿಜೋಯ್ ಮೊಂಡಲ್ ಎಂಬ ಇಬ್ಬರು ಪುರುಷರು ಸೇರಿದ್ದಾರೆ.

ವೈರಲ್ ಆಗಿರುವ ವಿಡಿಯೋ ಕ್ಲಿಪ್‌ಗೆ ಸಂಬಂಧಿಸಿದಂತೆ ಇನ್ನೂ ಇಬ್ಬರು ವ್ಯಕ್ತಿಗಳನ್ನು ಗುರುತಿಸಲಾಗಿದೆ. ಅವರನ್ನು ಟ್ರ್ಯಾಕ್ ಮಾಡುತ್ತಿದ್ದೇವೆ. ಬಂಧಿಸಿದ ಬಳಿಕ ಅವರ ಗುರುತುಗಳನ್ನು ಬಹಿರಂಗಪಡಿಸಲಾಗುವುದು ಎಂದು ಮಾಲ್ಡಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಕುಮಾರ್ ಯಾದವ್ ತಿಳಿಸಿದ್ದಾರೆ.

ಇಬ್ಬರು ಬುಡಕಟ್ಟು ಮಹಿಳೆಯರು ಹಣವನ್ನು ಕದಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಬಂಧಿತ ಐವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ನಂತರ ಈ ಇಬ್ಬರು ಮಹಿಳೆಯರನ್ನು ಥಳಿಸಿದ್ದರು, ಬಟ್ಟೆಗಳನ್ನು ಹರಿದು ಹಾಕಿದ್ದರು. ಸ್ಥಳದಲ್ಲಿದ್ದ ಇಬ್ಬರು ನಾಗರಿಕ ಸ್ವಯಂಸೇವಕರು ಮಹಿಳೆಯರನ್ನು ರಕ್ಷಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆತಂದರು ಎಂದು ತಿಳಿಸಿದ್ದಾರೆ. ಆದರೆ ಇಬ್ಬರು ಸಂತ್ರಸ್ತೆ ಮಹಿಳೆಯರ ಸಂಬಂಧಿಕರು ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಯಾವುದೇ ದೂರು ನೀಡಿಲ್ಲ ಎಂದು ಯಾದವ್ ಹೇಳಿದರು.

ಇದನ್ನೂಓದಿ:'ಲೋಕಲ್​ ಸಿನಿಮಾ' ಹೆಸರಲ್ಲಿ ಅತ್ಯಾಚಾರ​ ವಿಡಿಯೋ ಮಾರಾಟ ದಂಧೆ, ಇದಕ್ಕಿದೆ ಪೊಲೀಸರ ಕೃಪಾಕಟಾಕ್ಷ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.