ಮುಂಬೈ(ಮಹಾರಾಷ್ಟ್ರ): ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವನೀಯ ದುರಂತವೊಂದು ಕೊಂಚದರಲ್ಲೇ ತಪ್ಪಿದೆ.
ಏರ್ ಇಂಡಿಯಾ ವಿಮಾನಕ್ಕೆ ಪುಶ್‌ಬ್ಯಾಕ್ ನೀಡುತ್ತಿದ್ದ ವಾಹನ ವಿಮಾನದ ಬಳಿಯೇ ಹೊತ್ತಿ ಉರಿಯಿತು. ಇಂದು ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು 10 ನಿಮಿಷದಲ್ಲಿ ಬೆಂಕಿ ಹತೋಟಿಗೆ ತಂದಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾವುದೇ ರೀತಿಯ ಗಾಯ ಅಥವಾ ಪ್ರಾಣಹಾನಿ ಆಗಿಲ್ಲ.
ಏರ್ ಇಂಡಿಯಾ ವಿಮಾನ ಮುಂಬೈನಿಂದ ಗುಜರಾತ್‌ನ ಜಾಮ್ನಗರಕ್ಕೆ ತೆರಳುತ್ತಿತ್ತು. ಇದರಲ್ಲಿ 85 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Fact Check: ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಹುದ್ದೆಗಳಿಗೆ ನೇಮಕಾತಿ ಸುದ್ದಿ ಸುಳ್ಳು