ETV Bharat / bharat

ನಾನು 'ಮಂಕಿ ಬಾತ್' ಕೇಳುವುದಿಲ್ಲ, ಶಿಕ್ಷೆಯಾಗುವುದೇ?: ಟಿಎಂಸಿ ಸಂಸದೆ ವ್ಯಂಗ್ಯ

ಮಹುವಾ ಮೊಯಿತ್ರಾ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

author img

By

Published : May 12, 2023, 12:56 PM IST

Mahua Tweet
ಮಹುವಾ ಮೊಯಿತ್ರಾ

ನವದೆಹಲಿ: ಬಿಜೆಪಿ ಸರ್ಕಾರದ ವಿವಿಧ ನೀತಿಗಳನ್ನು ಕಟುವಾಗಿ ವಿರೋಧಿಸುವುದಕ್ಕೆ ಹೆಸರುವಾಸಿಯಾಗಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ಶುಕ್ರವಾರ ರೇಡಿಯೊ ಪ್ರಸಾರವನ್ನು 'ಮಂಕಿ ಬಾತ್' ಎಂದು ಕರೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಅನ್ನು ಲೇವಡಿ ಮಾಡಿದ್ದಾರೆ. ರೇಡಿಯೊದಲ್ಲಿ ಪ್ರಸಾರವಾಗುವ ಪ್ರಧಾನ ಮಂತ್ರಿಯವರ ಕಾರ್ಯಕ್ರಮವನ್ನು ತಾವು ಕೇಳುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಮಹುವಾ ಮೊಯಿತ್ರಾ ಟ್ವೀಟ್‌ನಲ್ಲಿ, ''ಮನ್ ಕಿ ಬಾತ್'' ಕೇಳದಿದ್ದಕ್ಕಾಗಿ 36 ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳುವ ವರದಿಗೆ ಅವರು ಕೋಪದಿಂದಲೇ ಪ್ರತಿಕ್ರಿಯಿಸಿದರು. ಈ ಸುದ್ದಿಯು ಕೋಲಾಹಲಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಮೊಹಿತ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. "ನಾನು ಮಂಕಿ ಬಾತ್ ಕೇಳಿಲ್ಲ. ಒಮ್ಮೆಯೂ ಇಲ್ಲ. ಯಾವಾಗಾದ್ರೂ ನನಗೂ ಶಿಕ್ಷೆಯಾಗುತ್ತದೆಯೇ? ಒಂದು ವಾರದವರೆಗೆ ಮನೆಯಿಂದ ಹೊರಬರಲು ನನಗೆ ಅನುಮತಿಸುವುದಿಲ್ಲವೇ? ಇದು ನಿಜವಾಗಿಯೂ ಆತಂಕಕಾರಿ" ಎಂದಿದ್ದಾರೆ.

  • I haven’t listened to monkey baat either. Not once. Not ever. Am I going to be punished as well? Will l be forbidden from leaving my house for a week?

    Seriously worried now. pic.twitter.com/HaqEQwsWOj

    — Mahua Moitra (@MahuaMoitra) May 12, 2023 " class="align-text-top noRightClick twitterSection" data=" ">

ಇದನ್ನೂ ಓದಿ: 'ಕುಮಾರಸ್ವಾಮಿ 30 ಸ್ಥಾನ ಗೆದ್ದು ಸಿಎಂ ಆಗಲಿಲ್ಲವೇ?' ಆಂಧ್ರ ಮುಖ್ಯಮಂತ್ರಿ ಸ್ಥಾನದ ಮೇಲೆ ಪವನ್ ಕಲ್ಯಾಣ್‌ ಕಣ್ಣು

ಏಪ್ರಿಲ್ 30ರಂದು ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್​ನ 100ನೇ ಸಂಚಿಕೆ ಸಂದರ್ಭದಲ್ಲಿ ಚಂಡೀಗಢದ ಪಿಜಿಐಎಂಇಆರ್​ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಶಿಕ್ಷಣದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ಕೇಳಲು ವ್ಯವಸ್ಥೆ ಮಾಡಲಾಗಿತ್ತು. "ಮನ್ ಕಿ ಬಾತ್ ಏಪ್ರಿಲ್ 30 ರಂದು ಥಿಯೇಟರ್-1ನಲ್ಲಿ ಪ್ರಸಾರಕ್ಕೆ ಸಕಲ ಸಿದ್ಧತೆಗಳು ಆಗಿತ್ತು" ಎಂದು ಅಧಿಕಾರಿಗಳು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಮೊದಲ ಮತ್ತು ಮೂರನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಗೆ 100ನೇ ಸಂಚಿಕೆಯನ್ನು ಕೇಳುವುದು ಕಡ್ಡಾಯಗೊಳಿಸಲಾಗಿತ್ತು ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದರು.

ಇದನ್ನೂ ಓದಿ: ಶಾಲೆಗೆ ಹೋಗುವಾಗ ಪ್ರತಿನಿತ್ಯ ಹಿಂಬಾಲಿಸಿ ಕಿರುಕುಳ: ನೊಂದು ಶಿಕ್ಷಣ ನಿಲ್ಲಿಸಿದ ವಿದ್ಯಾರ್ಥಿನಿ

ಈ ಸೂಚನೆಯನ್ನು ನಿರ್ಲಕ್ಷಿಸಿದ್ದ ಕೇಂದ್ರ ಸರ್ಕಾರಿ ನರ್ಸಿಂಗ್ ಸಂಸ್ಥೆಯ 36 ವಿದ್ಯಾರ್ಥಿಗಳು, ''ಮನ್ ಕಿ ಬಾತ್''ನ 100ನೇ ಸಂಚಿಕೆ ಕೇಳಲು ನಿಗದಿಪಡಿಸಿದ ಸ್ಥಳಕ್ಕೆ ಹೋಗಲಿಲ್ಲ. ತೃತೀಯ ವರ್ಷದ 28 ವಿದ್ಯಾರ್ಥಿಗಳು ಮತ್ತು 8 ಪ್ರಥಮ ವರ್ಷದ ವಿದ್ಯಾರ್ಥಿಗಳು ಒಂದು ವಾರ ಹಾಸ್ಟೆಲ್‌ನಿಂದ ಹೊರಗೆ ಕಾಲಿಡುವಂತಿಲ್ಲ ಎಂದು ಅಧಿಕಾರಿಗಳು ಮೇ 3ರಂದು ಆದೇಶ ಹೊರಡಿಸಿದ್ದರು. ಈ ಘಟನೆ ಗುರುವಾರ ಬೆಳಕಿಗೆ ಬಂದಿದೆ. "ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್​ನ 100ನೇ ಸಂಚಿಕೆಯನ್ನು ಕೇಳದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಹಾಸ್ಟೆಲ್​ನಿಂದ ಹೊರಗೆ ಹೋಗುವುದನ್ನು ನಿಷೇಧಿಸಲಾಗುತ್ತಿದೆ" ಎಂದು ಪಿಜಿಐಎಂಇಆರ್ ತಿಳಿಸಿತ್ತು.

ಇದನ್ನೂ ಓದಿ: 'ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ 2 ಲಕ್ಷ ಉದ್ಯೋಗ ಭರ್ತಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.