ETV Bharat / bharat

ದುರ್ಗಾದೇವಿ ಕಾಲಿನಡಿ ಅಸುರನ ಬದಲಾಗಿ ಗಾಂಧೀಜಿ ಮುಖ.. ಪಶ್ಚಿಮ ಬಂಗಾಳದಲ್ಲಿ ವಿವಾದ - ಅಸುರನ ವಿಗ್ರಹವಿದ್ದ ಜಾಗದಲ್ಲಿ ಗಾಂಧೀಜಿ ಹೋಲುವ ಮುಖ

ಪಶ್ಚಿಮಬಂಗಾಳದಲ್ಲಿ ದೇವಿ ಆರಾಧನೆಯಲ್ಲಿ ವಿವಾದವೊಂದು ಕೇಳಿಬಂದಿದೆ. ದುರ್ಗಾ ದೇವಿಯ ಕಾಲಿನಡಿ ಇರಬೇಕಿದ್ದ ಅಸುರನ ಜಾಗದಲ್ಲಿ ಗಾಂಧೀಜಿ ಹೋಲುವ ವಿಗ್ರಹವನ್ನು ಇಟ್ಟು ಅವಮಾನ ಮಾಡಲಾಗಿದೆ.

mahatma-gandhi-lookalike-as-asura
ದುರ್ಗಾದೇವಿ ಕಾಲಿನಡಿ ಅಸುರನ ಬದಲಾಗಿ ಗಾಂಧೀಜಿ ಮುಖ
author img

By

Published : Oct 3, 2022, 9:16 AM IST

ಕೋಲ್ಕತ್ತಾ(ಪಶ್ಚಿಮಬಂಗಾಳ): ದೇಶಾದ್ಯಂತ ನವರಾತ್ರಿ ಉತ್ಸವ ಕಳೆಗಟ್ಟಿದೆ. ಶಕ್ತಿದೇವತೆಯ ಸಂಭ್ರಮದ ಆಚರಣೆಯ ಮಧ್ಯೆಯೇ ಪಶ್ಚಿಮಬಂಗಾಳದಲ್ಲಿ ವಿವಾದವೊಂದು ಕೇಳಿಬಂದಿದೆ. ಅಸುರನನ್ನು ಮರ್ದಿಸುವ ಕಾಳಿಯ ವಿಗ್ರಹದ ಕಾಲಿನಡಿ ಅಸುರನ ಜಾಗದಲ್ಲಿ ಮಹಾತ್ಮ ಗಾಂಧೀಜಿ ಹೋಲುವ ತಲೆ ಇಟ್ಟಿದ್ದು ಟೀಕೆಗೆ ಗುರಿಯಾಗಿದೆ.

ಅಖಿಲ ಭಾರತ ಹಿಂದೂ ಮಹಾಸಭಾದಿಂದ ಪ್ರತಿಷ್ಠಾಪಿಸಲಾದ ದುರ್ಗಾ ದೇವಿಯ ಕಾಲಿನಡಿ ಅಸುರನ ವಿಗ್ರಹವಿದ್ದ ಜಾಗದಲ್ಲಿ ಗಾಂಧೀಜಿ ಹೋಲುವ ಮುಖವನ್ನು ಇಡಲಾಗಿದೆ. ಈ ಬಗ್ಗೆ ಟೀಕೆ ವ್ಯಕ್ತವಾದ ಬಳಿಕ ಬದಲಿಸಲಾಗಿದೆ. ಅಲ್ಲದೇ ಪೂಜೆಗೂ ಅವಕಾಶವನ್ನು ನಿರಾಕರಿಸಲಾಗಿದೆ. ಆದರೆ, ಇದನ್ನು ಪೊಲೀಸರು ಅಲ್ಲಗಳೆದಿದ್ದಾರೆ.

ದುಷ್ಟಶಕ್ತಿಗಳ ಮರ್ದನದ ಪ್ರತೀಕ: ಗಾಂಧೀಜಿ ಹೋಲುವ ತಲೆಯನ್ನು ವಿಗ್ರಹವನ್ನು ಇಟ್ಟಿದ್ದಾರೆ ಎನ್ನಲಾದ ಹಿಂದು ಮಹಾಸಭಾದ ವಿರುದ್ಧ ಟೀಕೆ ಕೇಳಿಬಂದ ಬಳಿಕ, ಅದನ್ನು ತೆರವು ಮಾಡಿ ರಾಕ್ಷಸನ ಮುಖವನ್ನು ಇಡಲಾಗಿದೆ. ಇದು ದುಷ್ಟಶಕ್ತಿಗಳ ಮರ್ದನದ ಪ್ರತೀಕವಾಗಿ ಇದನ್ನು ಇಡಲಾಗಿದೆ ಎಂದು ಆಯೋಜಕರು ಸಮರ್ಥಿಸಿಕೊಂಡಿದ್ದಾರೆ.

ಕನ್ನಡಕವುಳ್ಳ ಆ ಮುಖ ಗಾಂಧೀಜಿಯಲ್ಲದಿದ್ದರೂ, ಹೋಲಿಕೆಯಾಗುತ್ತಿರುವುದು ಕಾಕತಾಳೀಯ. ದೇವಿ ಆರಾಧನೆಗೆ ಅನುಮತಿ ಪಡೆದಿದ್ದರೂ ಸಹಿತ ಪೂಜೆಗೆ ಅಡ್ಡಿ ಪಡಿಸಲಾಗಿದೆ. ಆರಾಧನೆ ಬಂದ್​ ಮಾಡುವಂತೆ ಸೂಚಿಸಲಾಗಿದೆ ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಮೊಹಂತೋ ಸುಂದರ ಗಿರಿ ಮಹಾರಾಜ್ ಆರೋಪಿಸಿದ್ದಾರೆ.

ಓಈದಿ: 6 ವರ್ಷದ ಬಾಲಕನ ತಲೆ ಕಡಿದು ಬಲಿ ನೀಡಿದ ಕೀಚಕರು.. ಇದು ದೈವಾದೇಶವಂತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.