ETV Bharat / bharat

ಶಿವಸೇನೆ vs ಶಿವಸೇನೆ: ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಿದ ಸುಪ್ರೀಂ ಕೋರ್ಟ್‌ - ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು

ಮಹಾರಾಷ್ಟ್ರ ರಾಜಕೀಯ: ಏಕನಾಥ್ ಶಿಂಧೆ ಬಣದ ಶಾಸಕರನ್ನು ಅನರ್ಹಗೊಳಿಸುವಂತೆ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ ಅರ್ಜಿ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ ನಡೆಸಿತು.

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು
author img

By

Published : May 11, 2023, 12:56 PM IST

Updated : May 11, 2023, 2:15 PM IST

ನವದೆಹಲಿ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಶಿವಸೇನೆಯ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿತು. ಶಿಂಧೆ ಬಂಡಾಯದ ನಂತರ ಉದ್ಧವ್ ಠಾಕ್ರೆ ನೇತೃತ್ವದ ಮೂರು ಪಕ್ಷಗಳ ಮಹಾ ವಿಕಾಸ್ ಆಘಾಡಿ (ಎಂವಿಎ) ನೇತೃತ್ವದ ಸರ್ಕಾರದ ಪತನಕ್ಕೆ ಕಾರಣವಾದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದ ಸಲ್ಲಿಸಲಾದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರಿದ್ದ ಪೀಠ ಇಂದು ವಿಚಾರಣೆ ನಡೆಸಿದೆ.

ಶಿವಸೇನೆಯಿಂದ ಬಂಡಾಯವೆದ್ದು ಬಿಜೆಪಿ ಸೇರಿದ್ದ ಏಕನಾಥ್​ ಶಿಂಧೆ ಬಣದ 16 ಶಾಸಕರನ್ನು ಅನರ್ಹಗೊಳಿಸಬೇಕೆಂದು ಕೋರಿ ಶಿವಸೇನೆಯ ನಾಯಕ ಹಾಗೂ ಮಾಜಿ ಸಿಎಂ ಉದ್ಧವ್​ ಠಾಕ್ರೆ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. ಇದಕ್ಕೆ ಶಿಂಧೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿಂದೆ ಮಹಾರಾಷ್ಟದ ಸರ್ಕಾರದ ಬಿಕ್ಕಟ್ಟಿನ ಕುರಿತು ಸುಪ್ರೀಂ ಕೋರ್ಟ್​ಗೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ ಮೇ 11 ಕ್ಕೆ ತೀರ್ಪು ಕಾಯ್ದಿರಿಸಿತ್ತು. ಶಾಸಕರ ಅರ್ಹತೆ ತೀರ್ಪನ್ನು ನ್ಯಾಯಾಲಯ ಎತ್ತಿ ಹಿಡಿದರೆ ಶಿಂಧೆ ಬಣದ ಶಿವಸೇನೆ ಮತ್ತು ಬಿಜೆಪಿ ಸರ್ಕಾರ ಪತನಗೊಳ್ಳಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಇದನ್ನೂ ಓದಿ: ಏಕನಾಥ್​ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ: ಉದ್ಧವ್​ ಕೈ ಜಾರಿದ ಬಿಲ್ಲು-ಬಾಣ

ಕಳೆದ ವರ್ಷ ಉಂಟಾದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಶಿವಸೇನೆ, ಕಾಂಗ್ರೆಸ್​, ಎನ್​ಸಿಪಿ ಮೈತ್ರಿಕೂಟದ ಮಹಾ ವಿಕಾಸ ಆಘಾಡಿ ಸರ್ಕಾರದ ವಿರುದ್ಧ ಶಿವಸೇನೆ ನಾಯಕ ಏಕನಾಥ್​ ಶಿಂಧೆ ಬಂಡಾಯದ ಬಾವುಟ ಹಾರಿಸಿ, ಬಿಜೆಪಿಯೊಂದಿಗೆ ಕೈಜೋಡಿಸಿ ಸರ್ಕಾರ ರಚನೆ ಮಾಡಿದ್ದರು. ಇದರಿಂದ ಶಿವಸೇನೆ ಪಕ್ಷ ಇಬ್ಭಾಗಗೊಂಡು, 2022ರ ಜೂನ್​ 29ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್​ ಠಾಕ್ರೆ ರಾಜೀನಾಮೆ ನೀಡಿದ್ದರು.

ನಂತರ ಉದ್ಧವ್​ ಹಾಗೂ ಶಿಂಧೆ ನಡುವೆ ಮೂಲ ಶಿವಸೇನೆ ಯಾವುದು ಎಂಬ ಕಿತ್ತಾಟ ಶುರುವಾಗಿತ್ತು. ಇದರ ನಡುವೆ ನವೆಂಬರ್​ನಲ್ಲಿ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಶಿವಸೇನೆಯ ಮೂಲ ಚಿಹ್ನೆಯಾದ ಬಿಲ್ಲು ಮತ್ತು ಬಾಣದ ಗುರುತನ್ನು ಯಾವುದೇ ಬಣ ಬಳಸದಂತೆ ಸೂಚಿಸಲಾಗಿತ್ತು. ಎರಡು ಬಣಗಳಿಗೂ ಪ್ರತ್ಯೇಕವಾದ ಚಿಹ್ನೆಯನ್ನು ಹಂಚಿಕೆ ಮಾಡಲಾಗಿತ್ತು. ಆಗ ಶಿಂಧೆ ಬಣವು ಎರಡು ಕತ್ತಿ ಮತ್ತು ಗುರಾಣಿ ಚಿಹ್ನೆ ಪಡೆದಿದ್ದರೆ, ಉದ್ಧವ್ ಠಾಕ್ರೆ ಬಣವು ಪ್ರಜ್ವಲಿಸುವ ಜ್ಯೋತಿಯ ಚಿಹ್ನೆ ಹೊಂದಿತ್ತು.

ಮತ್ತೊಂದೆಡೆ, ಈ ವಿಷಯವು ಚುನಾವಣಾ ಆಯೋಗದ ಮೆಟ್ಟಿಲೇರಿತ್ತು. ಫೆಬ್ರವರಿ 17ರಂದು ಚುನಾವಣಾ ಆಯೋಗ, ಏಕನಾಥ್​ ಶಿಂಧೆ ಬಣಕ್ಕೆ ಮೂಲ ಚಿಹ್ನೆ ಅಂದರೆ, ಬಿಲ್ಲು ಮತ್ತು ಬಾಣದ ಗುರುತು ಹಂಚಿಕೆ ಮಾಡಿತ್ತು. ಇತ್ತ, ಉದ್ಧವ್ ಠಾಕ್ರೆ ಬಣಕ್ಕೆ ಪ್ರಜ್ವಲಿಸುವ ಜ್ಯೋತಿಯ ಚಿಹ್ನೆಯನ್ನು ಮುಂಬರುವ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳು ಮುಗಿಯುವವರೆಗೆ ಇರಿಸಿಕೊಳ್ಳಲು ಅನುಮತಿಸಿತ್ತು.

ಚುನಾವಣಾ ಆಯೋಗದ ಈ ಆದೇಶವನ್ನು ಪ್ರಶ್ನಿಸಿ ಉದ್ಧವ್​ ಠಾಕ್ರೆ ಬಣವು ಶಿವಸೇನೆ ಚಿಹ್ನೆ ಹಂಚಿಕೆ ವಿಷಯವು ಸುಪ್ರೀಂ ಕೋರ್ಟ್​ನಲ್ಲಿ ಇನ್ನೂ ಬಾಕಿಯಿರುವಾಗಲೇ ಆಯೋಗ ಚಿಹ್ನೆ ಮತ್ತು ಪಕ್ಷದ ಹೆಸರು ಹಂಚಿಕೆ ಹಂಚಿಕೆ ಮಾಡಿದೆ ಎಂದು ತಕರಾರು ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸಂವಿಧಾನಿಕ ಪೀಠವು ಮೇ 11ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿದೆ. ಜೊತೆಗೆ ಶಿವಸೇನೆಯಿಂದ ಬಂಡಾಯವೆದ್ದ ಏಕನಾಥ್​ ಶಿಂಧೆ ಬಣದ 16 ಶಾಸಕರನ್ನು ಅನರ್ಹಗೊಳಿಸಬೇಕೆಂದು ಕೋರಿಯೂ ಠಾಕ್ರೆ ಬಣ ಅರ್ಜಿ ಸಲ್ಲಿಸಿತ್ತು

ಇದನ್ನೂ ಓದಿ: ದೆಹಲಿ ಸರ್ಕಾರ-ಕೇಂದ್ರದ ನಡುವಿನ 'ಪವರ್' ಫೈಟ್: ಸುಪ್ರೀಂ ಕೋರ್ಟ್​ ಮಹತ್ವದ ಆದೇಶ

Last Updated : May 11, 2023, 2:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.