ಮುಂಬೈ: ಉದ್ದವ್ ಠಾಕ್ರೆ ಒಬ್ಬ ಸಂವೇದನಾಶೀಲ ಹಾಗೂ ಸುಸಂಸ್ಕೃತ ಮುಖ್ಯಮಂತ್ರಿಯನ್ನು ಕಳೆದುಕೊಂಡಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಬೇಸರ ವ್ಯಕ್ತಪಡಿಸಿದ್ದಾರೆ. ಸಂಖ್ಯೆಗಳ ಆಟ ಆಡಲ ತಮಗೆ ಆಸಕ್ತಿಯಿಲ್ಲ ಎಂದು ಹೇಳಿದ ಠಾಕ್ರೆ ಬುಧವಾರ ರಾತ್ರಿಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದರು.
-
Uddhav Thackeray Resigns: ‘He Stepped Down Gracefully, but We Will Keep Balasaheb’s Shiv Sena Alive,’ Tweets Sanjay Raut @rautsanjay61 @OfficeofUT #UddhavThackeray #UddhavThackerayResigns #SanjayRauthttps://t.co/Eo2fsBgNwY
— LatestLY (@latestly) June 29, 2022 " class="align-text-top noRightClick twitterSection" data="
">Uddhav Thackeray Resigns: ‘He Stepped Down Gracefully, but We Will Keep Balasaheb’s Shiv Sena Alive,’ Tweets Sanjay Raut @rautsanjay61 @OfficeofUT #UddhavThackeray #UddhavThackerayResigns #SanjayRauthttps://t.co/Eo2fsBgNwY
— LatestLY (@latestly) June 29, 2022Uddhav Thackeray Resigns: ‘He Stepped Down Gracefully, but We Will Keep Balasaheb’s Shiv Sena Alive,’ Tweets Sanjay Raut @rautsanjay61 @OfficeofUT #UddhavThackeray #UddhavThackerayResigns #SanjayRauthttps://t.co/Eo2fsBgNwY
— LatestLY (@latestly) June 29, 2022
ಈ ಹಿನ್ನೆಲೆಯಲ್ಲಿ ಸಂಜಯ್ ರಾವುತ್ ಟ್ವೀಟ್ ಮಾಡಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಪರಂಪರೆಯನ್ನು ಮುಂದೆ ತೆಗೆದುಕೊಂಡು ಹೋಗುತ್ತೇವೆ ಮತ್ತು ಇದಕ್ಕಾಗಿ ಜೈಲಿಗೆ ಹೋಗಲು ಸಿದ್ಧ ಎಂದು ಅವರು ಹೇಳಿದರು. ವಿಶ್ವಾಸಘಾತುಕರಿಗೆ ಎಂದಿಗೂ ಒಳ್ಳೆಯದಾಗುವುದಿಲ್ಲ ಮತ್ತು ಅದನ್ನು ಇತಿಹಾಸವು ಇದನ್ನು ಸಾಬೀತುಪಡಿಸುತ್ತದೆ ಎಂದಿರುವ ಸಂಜಯ ರಾವುತ್, ಶಿವಸೇನೆಯ ಬೃಹತ್ ಗೆಲುವಿನ ಆರಂಭವಾಗಿದೆ ಎಂದಿದ್ದಾರೆ.
ನಾವು ಲಾಠಿ ಎದುರಿಸುತ್ತೇವೆ, ಜೈಲಿಗೆ ಹೋಗುತ್ತೇವೆ ಎಂದು ಬಂಡಾಯಗಾರರಿಗೆ ಮತ್ತು ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಅಷ್ಟೇ ಅಲ್ಲ ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆಯನ್ನು ಜೀವಂತವಾಗಿಡುತ್ತೇವೆ ಎಂದೂ ಸಂಜಯ್ ರಾವತ್ ಇದೇ ವೇಳೆ ಘೋಷಿಸಿದ್ದಾರೆ.
2019ರಲ್ಲಿ ಉದ್ಧವ್ ಅವರನ್ನು ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವಂತೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮನವೊಲಿಸಿದ್ದರು. ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ರಾವತ್ ಇದೇ ವೇಳೆ ಹೇಳಿದರು. ಪವಾರ್ ಅವರ ಮಾರ್ಗದರ್ಶನದಿಂದ ಸರ್ಕಾರ ಸುಗಮವಾಗಿ ನಡೆದುಕೊಂಡು ಬಂದಿತ್ತು.
ಅಧಿಕಾರ ಬರುತ್ತದೆ ಮತ್ತು ಹೋಗುತ್ತದೆ ಮತ್ತು ಅಧಿಕಾರ ಯಾರಿಗೂ ಶಾಸ್ವತವಲ್ಲ, ಖಂಡಿತ ನಮಗೆ ನ್ಯಾಯ ಸಿಗುತ್ತದೆ ಎಂದೂ ಅವರು ಇದೇ ವೇಳೆ ಹೇಳಿದರು. ಇದು ಅಗ್ನಿ ಪರೀಕ್ಷೆಯ ಸಮಯ, ಈ ದಿನಗಳು ಶೀಘ್ರದಲ್ಲೇ ಹಾದುಹೋಗುತ್ತವೆ ರಾವುತ್ ಹೇಳಿದರು.
ಇದನ್ನು ಓದಿ:ಮಹಾರಾಷ್ಟ್ರ ಆಘಾಡಿ ಸರ್ಕಾರದ ಪತನದ ಹಾದಿ: ಆರು ಮಹತ್ವದ ಬೆಳವಣಿಗೆಗಳು..