ETV Bharat / bharat

ಮಹಿಳೆ, ಹಾಲಿ ಪ್ರಿಯಕರನ ಮೇಲೆ ಆ್ಯಸಿಡ್​ ದಾಳಿ: ಪತಿ, ಮಾಜಿ ಪ್ರಿಯಕರನಿಂದ ಕೃತ್ಯ - throwing acid on woman

ಮಹಿಳೆ ಮತ್ತು ಆಕೆಯ ಪ್ರಿಯಕರನ ಮೇಲೆ ಪತಿ ಹಾಗೂ ಮಾಜಿ ಪ್ರಿಯಕರ ಆ್ಯಸಿಡ್​ ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪರಾರಿಯಾಗಿರುವ ಪತಿ ತೌಫಿಕ್ ಇದ್ರಿಸ್ ಮತ್ತು ಕಮ್ರಾನ್ ಅನ್ಸಾರಿ ವಿರುದ್ಧ ಪೆಲ್ಹಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆ್ಯಸಿಡ್​ ದಾಳಿ
ಆ್ಯಸಿಡ್​ ದಾಳಿ
author img

By

Published : Nov 3, 2022, 5:28 PM IST

Updated : Nov 3, 2022, 7:01 PM IST

ವಿರಾರ್ (ಮಹಾರಾಷ್ಟ್ರ): ವಿವಾಹಿತ ಮಹಿಳೆ ಮತ್ತು ಅವರ ಹಾಲಿ ಲವರ್​ ಮೇಲೆ ಪತಿ ಹಾಗೂ ಮಾಜಿ ಪ್ರೇಮಿ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲ್ಲಸೊಪಾರ ಪಟ್ಟಣದಲ್ಲಿ ಸೋಮವಾರ ನಡೆದಿದೆ.

ಸಂತ್ರಸ್ತರಾದ ಕರಿಷ್ಮಾ ಅಲಿ (20) ಮತ್ತು ಕಲಾಂ ಖಾನ್​ ಮುಖ ಹಾಗೂ ಕೈಗಳ ಮೇಲೆ ಸುಟ್ಟ ಗಾಯಗಳಾಗಿವೆ. ಪರಾರಿಯಾಗಿರುವ ಪತಿ ತೌಫಿಕ್ ಇದ್ರಿಸ್ ಮತ್ತು ಮಾಜಿ ಪ್ರೇಮಿ ಕಮ್ರಾನ್ ಅನ್ಸಾರಿ ವಿರುದ್ಧ ಪೆಲ್ಹಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಿಳೆ ಮೇಲೆ ಆ್ಯಸಿಡ್​ ದಾಳಿ
ಮಹಿಳೆ ಮೇಲೆ ಆ್ಯಸಿಡ್​ ದಾಳಿ

ಏನಿದು ಪ್ರಕರಣ: ತೌಫಿಕ್​ನನ್ನು ಮಹಿಳೆ ಮದುವೆಯಾಗಿದ್ದರು. ಆದರೆ ಆಕೆಗೆ ಆತ ಚಿತ್ರಹಿಂಸೆ ನೀಡುತ್ತಿದ್ದ ಕಾರಣ ತೊರೆದಿದ್ದರು. ಬಳಿಕ ಅದೇ ಪ್ರದೇಶದಲ್ಲಿ ವಾಸಿಸುವ ಕಮ್ರಾನ್ ಅನ್ಸಾರಿಯೊಂದಿಗೆ ಲಿವ್ ಇನ್ ಸಂಬಂಧದಲ್ಲಿ ಇದ್ದರು. ಆದರೆ, ಕಮ್ರಾನ್ ಮದುವೆಗೆ ನಿರಾಕರಿಸಿದ್ದರಿಂದ ಆತನನ್ನೂ ತೊರೆದಿದ್ದಾರೆ. ಇದಾದ ನಂತರ ಆಕೆ ನಲ್ಲಸೊಪಾರದ ಕಲಾಂ ಖಾನ್​ ಜೊತೆ ವಾಸವಾಗಿದ್ದರು.

ಇದನ್ನೂ ಓದಿ: ಕೇವಲ 950 ರೂಪಾಯಿ ಸಾಲ ಮರುಪಾವತಿಸದ್ದಕ್ಕೆ ಯುವಕನ ಮೇಲೆ ಆ್ಯಸಿಡ್​ ದಾಳಿ

ಈ ವಿಚಾರ ಪತಿ ತೌಫಿಕ್ ಹಾಗೂ ಗೆಳೆಯ ಕಮ್ರಾನ್​ಗೆ ತಿಳಿದ ತಕ್ಷಣ ಅವರೊಂದಿಗೆ ಜಗಳವಾಡಿದ್ದಾರೆ. ಅಲ್ಲದೇ ಕರಿಷ್ಮಾ ಇಬ್ಬರನ್ನೂ ತಿರಸ್ಕರಿಸಿದ್ದಾಳೆ. ಇದರಿಂದ ಕೋಪಗೊಂಡ ಇಬ್ಬರು ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿ, ಆ್ಯಸಿಡ್​ ದಾಳಿ ನಡೆಸಿದ್ದಾರೆ. ಸೋಮವಾರ ತಡರಾತ್ರಿ ಎರಡು ಗಂಟೆ ಸುಮಾರಿಗೆ ಕಮಲ್ ಹಾಗೂ ಕರಿಷ್ಮಾ ಮಲಗಿದ್ದ ವೇಳೆ ಕಿಟಕಿಯ ಗಾಜು ಒಡೆದು ಇಬ್ಬರ ಮೇಲೂ ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ.

Last Updated : Nov 3, 2022, 7:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.