ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಕೊರೊನಾ ಆರ್ಭಟ ಜೋರಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅಲ್ಲಿನ ಸರ್ಕಾರ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ. ಸೋಮವಾರದಿಂದಲೇ ಈಜುಕೊಳ, ಜಿಮ್ಸ್ ಸೇರಿದಂತೆ ಪ್ರಮುಖ ಶಾಪ್ಗಳನ್ನ ಬಂದ್ ಮಾಡಲು ತೀರ್ಮಾನಿಸಿದೆ.
ಪ್ರಮುಖವಾಗಿ ಸ್ಪಾ, ಬ್ಯೂಟಿ ಪಾರ್ಲರ್, ಮೃಗಾಲಯಗಳು, ವಸ್ತುಸಂಗ್ರಹಾಲಯಗಳು, ಕ್ರೀಡಾಂಗಣಗಳು, ವಾಣಿಜ್ಯ ಸಂಕೀರ್ಣ ಮತ್ತು ಮನೋರಂಜನಾ ಸ್ಥಳಗಳನ್ನ ಸಂಪೂರ್ಣವಾಗಿ ಬಂದ್ ಮಾಡಲು ನಿರ್ಧರಿಸಲಾಗಿದೆ. ಉಳಿದಂತೆ ಫೆಬ್ರವರಿ 15ರವರೆಗೆ ಶಾಲಾ-ಕಾಲೇಜ್ಗಳು ಬಂದ್ ಆಗಲಿವೆ. ಹೇರ್ ಕಟಿಂಗ್ ಸಲೂನ್ಗಳು ಮತ್ತು ಶಾಪಿಂಗ್ ಮಾಲ್ ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲಿವೆ.
ದೇಶದಲ್ಲಿ ಕೊರೊನಾ ಆರ್ಭಟ ಜೋರಾಗಿರುವ ಕಾರಣ ಈಗಾಗಲೇ ಕರ್ನಾಟಕ, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಇದೀಗ ಮಹಾರಾಷ್ಟ್ರ ಕೂಡ ಈ ಸಾಲಿಗೆ ಸೇರಿಕೊಂಡಿದೆ. ಜನವರಿ 10ರಿಂದ ಮಹಾರಾಷ್ಟ್ರದಲ್ಲಿ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ಐದಕ್ಕಿಂತಲೂ ಹೆಚ್ಚಿನ ಜನರು ಒಟ್ಟಿಗೆ ಸೇರಲು ಅವಕಾಶವಿರುವುದಿಲ್ಲ ಎಂದು ಸೂಚನೆ ಹೊರಡಿಸಲಾಗಿದೆ.
-
#Omicron: Maharashtra Govt to impose night curfew (11pm-5am) from Jan 10, bar movement of people in groups of 5 or more
— ANI (@ANI) January 8, 2022 " class="align-text-top noRightClick twitterSection" data="
Swimming pools, gyms, spas, beauty salons, zoos, museums, & entertainment parks to remain closed
Hair cutting salons and malls to operate at 50% capacity pic.twitter.com/ZG0GaMulAw
">#Omicron: Maharashtra Govt to impose night curfew (11pm-5am) from Jan 10, bar movement of people in groups of 5 or more
— ANI (@ANI) January 8, 2022
Swimming pools, gyms, spas, beauty salons, zoos, museums, & entertainment parks to remain closed
Hair cutting salons and malls to operate at 50% capacity pic.twitter.com/ZG0GaMulAw#Omicron: Maharashtra Govt to impose night curfew (11pm-5am) from Jan 10, bar movement of people in groups of 5 or more
— ANI (@ANI) January 8, 2022
Swimming pools, gyms, spas, beauty salons, zoos, museums, & entertainment parks to remain closed
Hair cutting salons and malls to operate at 50% capacity pic.twitter.com/ZG0GaMulAw
ಪ್ರಮುಖವಾಗಿ ಹೋಟೆಲ್, ರೆಸ್ಟೋರೆಂಟ್ಗಳು, ಸಿನಿಮಾ ಹಾಲ್ಗಳು ಶೇ. 50ರ ಸಾಮರ್ಥ್ಯದೊಂದಿಗೆ ರಾತ್ರಿ 10 ಗಂಟೆವರೆಗೆ ಕಾರ್ಯ ನಿರ್ವಹಿಸಬಹುದಾಗಿದೆ. ಹೋಮ್ ಡೆಲಿವರಿಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿರಿ: ಈ ಹುಂಜದ ಬೆಲೆ ಬರೋಬ್ಬರಿ 2.6 ಲಕ್ಷ ರೂಪಾಯಿ.. ಅಂತಹದ್ದೇನಿದೆ ಇದರಲ್ಲಿ!?
ಮಹಾರಾಷ್ಟ್ರದಲ್ಲಿಂದು 40,925 ಕೋವಿಡ್ ಪ್ರಕರಣ ದಾಖಲಾಗಿದ್ದು, 20 ಜನರು ಸಾವನ್ನಪ್ಪಿದ್ದಾರೆ. ಮುಂಬೈನಲ್ಲೇ 20,318 ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ.