ETV Bharat / bharat

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಬಂಧನ

author img

By

Published : Nov 2, 2021, 4:06 AM IST

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್​ರನ್ನು ಇಡಿ ಬಂಧಿಸಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

Anil Deshmukh arrested, Maharashtra former Home Minister Anil Deshmukh arrested, Maharashtra former Home Minister Anil Deshmukh arrested ಅನಿಲ್ ದೇಶಮುಖ್ ಬಂಧನ,  ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಬಂಧನ,  ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಬಂಧನ,
ಅಕ್ರಮ ಹಣ ವರ್ಗಾವಣೆ ಪ್ರಕರಣ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್​ರನ್ನು ಜಾರಿ ನಿರ್ದೇಶನಾಲಯವು ಮುಂಬೈನಲ್ಲಿ ಬಂಧಿಸಿದೆ. ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದೇಶ್​ಮುಖ್​ ಅವರ ಕಚೇರಿಯಲ್ಲಿ 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಬಂಧಿಸಿದರು.

ತಮ್ಮ ವಿರುದ್ಧದ ಲಂಚದ ಆರೋಪಗಳ ನಡುವೆ ಈ ವರ್ಷದ ಆರಂಭದಲ್ಲಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದ ಶ್ರೀ ದೇಶಮುಖ್ ತನಿಖಾ ಸಂಸ್ಥೆಯಿಂದ ಸಮನ್ಸ್ ರದ್ದುಗೊಳಿಸುವಂತೆ ಮನವಿ ಮಾಡಿದ ಕಾರಣ ಬಾಂಬೆ ಹೈಕೋರ್ಟ್ ಶುಕ್ರವಾರ ಇವರ ಅರ್ಜಿಯನ್ನು ನಿರಾಕರಿಸಿತು.

ಸೋಮವಾರ ವೀಡಿಯೊ ಹೇಳಿಕೆಯಲ್ಲಿ, 71 ವರ್ಷದ ಎನ್‌ಸಿಪಿ ನಾಯಕ "ನನ್ನ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು" ಎಂದು ಹೇಳಿದ್ದಾರೆ. ಮುಂಬೈನ ಮಾಜಿ ಟಾಪ್ ಕಾಪ್ ಪರಮ್ ಬೀರ್ ಸಿಂಗ್ ಅವರು ಶ್ರೀ ದೇಶಮುಖ್ ವಿರುದ್ಧ ಭ್ರಷ್ಟಾಚಾರ ಮತ್ತು ಸುಲಿಗೆ ಆರೋಪ ಹೊರಿಸಿದ್ದರು.

ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಸ್ಫೋಟಕಗಳು ಪತ್ತೆ ಪ್ರಕರಣ ಹಾಗೂ ಕಾರಿನ ಮಾಲೀಕ ಮನ್ಸುಖ್ ಹಿರೆನ್ ಸಾವು ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಮಾರ್ಚ್‌ನಲ್ಲಿ ಮಾಜಿ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರನ್ನು ಬಂಧಿಸಿದ್ದರು.

ವಿಚಾರಣೆ ವೇಳೆ, ಸಚಿನ್‌ ವಾಜೆ ಹೇಳಿಕೆ ಹಾಗೂ ಮುಂಬೈನ ಮಾಜಿ ಪೋಲಿಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರ ಆರೋಪದ ಮೇರೆಗೆ ಅನಿಲ್ ದೇಶ್‌ಮುಖ್ ವಿರುದ್ಧ 100 ಕೋಟಿ ರೂ.ಗಳ ಅಕ್ರಮ ಹಣ ವಹಿವಾಟು ಪ್ರಕರಣವನ್ನು ಸಿಬಿಐ ದಾಖಲಿಸಿಕೊಂಡು ತನಿಖೆ ನಡೆಸುತ್ತಿತ್ತು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.