ನಾಗ್ಪುರ (ಮಹಾರಾಷ್ಟ್ರ): 19 ವರ್ಷದ ಯುವಕನೊಬ್ಬ ತನ್ನ 17 ವರ್ಷದ ಪ್ರಿಯತಮೆಯನ್ನು ಅಪಹರಿಸಿ ಚಿತ್ರ ಹಿಂಸೆ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ, ಕೃತ್ಯವನ್ನು ಚಿತ್ರೀಕರಿಸಿ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿರುವ ನಾಗ್ಪುರ ಪೊಲೀಸ್ ಅಧಿಕಾರಿ, ಆರೋಪಿ ಸಮೀರ್ ಖಾನ್ ಸಲೀಂ ಖಾನ್ 2019 ರಲ್ಲಿ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ. ಇವರಿಬ್ಬರು ಜೊತೆಯಾಗಿ ಅನೇಕ ಟಿಕ್ಟಾಕ್ ವಿಡಿಯೋ ಮಾಡಿ ಜಾಲತಾಣಗಳಿಗೆ ಅಪ್ಲೋಡ್ ಮಾಡುತ್ತಿದ್ದರು ಎಂದಿದ್ದಾರೆ.
ಬಾಲಕಿ ಮತ್ತೊಬ್ಬನ ಜತೆಯೂ ಸಂಬಂಧ ಹೊಂದಿದ್ದಾಳೆಂದು ಖಾನ್ ಶಂಕಿಸಿದ್ದರಿಂದ ಸಂಬಂಧದಲ್ಲಿ ಬಿರುಕು ಮೂಡಿತು. ಅಲ್ಲದೆ, ಮದುವೆಯಾಗುವುದಾಗಿ ನಂಬಿಸಿ, ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಸಹ ಬೆಳೆಸಿದ್ದ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಜೂನ್ 18 ರಂದು ಖಾನ್ ತನ್ನ ಸ್ನೇಹಿತ ಮೊಹಮ್ಮದ್ ಸಿದ್ಧಿಕಿ ಸಹಾಯದೊಂದಿಗೆ ಬಾಲಕಿಯನ್ನು ಒತ್ತಾಯಪೂರ್ವಕವಾಗಿ ಬೈಕ್ನಲ್ಲಿ ಕರೆದೊಯ್ದಿದ್ದಾರೆ. ಅಪಹರಣದ ವಿಡಿಯೋ ಚಿತ್ರೀಕರಿಸಿರುವ ಖಾನ್, ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಆರೋಪಿಗಳು ಬಾಲಕಿಯನ್ನು ವೀಟಾ ಭಟ್ಟಿ ಎಂಬ ಪ್ರದೇಶಕ್ಕೆ ಕರೆದೊಯ್ದು ನಿಂದಿಸಿ ಥಳಿಸಿದ್ದಾನೆ. ಹತ್ಯೆಗೂ ಸ್ಕೆಚ್ ಹಾಕಿದ್ದನಂತೆ. ಆದರೆ, ಬಾಲಕಿ ಚಾಣಾಕ್ಷತನದಿಂದ ಎಸ್ಕೇಪ್ ಆಗಿದ್ದಾಳೆ.
ಟ್ವಿಟ್ಟರ್ನಲ್ಲಿ ಕಿಡ್ನಾಪ್ ದೃಶ್ಯ ನೋಡಿದ್ದ ಪೊಲೀಸರು ಖಾನ್ ಹಾಗೂ ಸಿದ್ದಿಕಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ಜಾತಿ ಮರೆತು ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಕೊಲೆಗೈದ ಪಾಪಿ ಅರೆಸ್ಟ್