ETV Bharat / bharat

Madurai Train Fire Accident: ಮಧುರೈ ರೈಲಿನಲ್ಲಿ ಅಗ್ನಿ ಅವಘಡ: ಸಾವಿನ ಸಂಖ್ಯೆ 9ಕ್ಕೆ ಏರಿಕೆ...

Madurai Train Fire Accident: ಉತ್ತರ ಪ್ರದೇಶದ ಲಖಿಪುರದಿಂದ ಬಂದಿದ್ದ ಪ್ರವಾಸಿ ರೈಲಿನಲ್ಲಿ ಮಧುರೈ ಸಮೀಪ ಬೆಂಕಿ ತಗುಲಿದ್ದು, ರೈಲಿನಲ್ಲಿ ಪ್ರಯಾಣಿಸುತ್ತಿದ್ದ 9 ಜನರು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದಾರೆ.

ಮಧುರೈ ರೈಲಿನಲ್ಲಿ ಬೆಂಕಿ ಅವಘಡ: ಇಬ್ಬರ ಸಾವು, 20 ಜನರಿಗೆ ಗಾಯ
Madurai Train Fire Accident
author img

By ETV Bharat Karnataka Team

Published : Aug 26, 2023, 7:45 AM IST

Updated : Aug 26, 2023, 1:20 PM IST

ಮಧುರೈ (ತಮಿಳುನಾಡು): ಉತ್ತರ ಪ್ರದೇಶ ರಾಜ್ಯದ ಲಖನೌದಿಂದ ರಾಮೇಶ್ವರಂಗೆ ಬರುತ್ತಿದ್ದ ಪ್ರವಾಸಿ ರೈಲಿನ ಖಾಸಗಿ ಕೋಚ್​​ಗೆ, ಮಧುರೈ ಸಮೀಪ ಬೆಂಕಿ ತಗುಲಿದೆ. ಈ ಅಗ್ನಿ ಅವಘಡದ ವೇಳೆ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ 9 ಜನರು ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದುರ್ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮಧುರೈ ರೈಲಿನಲ್ಲಿ ಅಗ್ನಿ ಅವಘಡ

ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ರೈಲಿನಲ್ಲಿ ಸಿಲುಕಿರುವ ಪ್ರವಾಸಿಗರನ್ನು ರಕ್ಷಿಸಿದರು. ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟರು. ಖಾಸಗಿ ಕೋಚ್‌ನಲ್ಲಿದ್ದ ಅಕ್ರಮ ಎಲ್‌ಪಿಜಿ ಸಿಲಿಂಡರ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Madurai Train Fire Accident
ಮಧುರೈ ರೈಲಿನಲ್ಲಿ ಅಗ್ನಿ ಅವಘಡ

ಉತ್ತರ ಪ್ರದೇಶದಿಂದ ಬರುತ್ತಿದ್ದ ಈ ರೈಲಿನ ಎರಡು ಖಾಸಗಿ ಕೋಚ್‌ನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಮಧುರೈ ನಿಲ್ದಾಣದಲ್ಲಿ ರೈಲು ನಿಂತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತಗುಲಿರುವುದರ ಕುರಿತು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • #WATCH | Tamil Nadu: Fire reported in private/individual coach at Madurai yard at 5:15 am today in Punalur-Madurai Express. Fire services have arrived and put off the fire and no damage has caused to another coaches. The passengers have allegedly smuggled gas cylinder that caused… pic.twitter.com/Dsh4Wu5vtb

    — ANI (@ANI) August 26, 2023 " class="align-text-top noRightClick twitterSection" data=" ">

ರೈಲಿನಲ್ಲಿದ್ದ 60ಕ್ಕೂ ಹೆಚ್ಚು ಯಾತ್ರಾರ್ಥಿಗಳು: ರೈಲ್ವೆ ಇಲಾಖೆ ಹೇಳಿಕೆಯ ಪ್ರಕಾರ, ಈ ಹಿಂದೆ ನಾಗರ್‌ಕೋಯಿಲ್ ಜಂಕ್ಷನ್‌ನಿಂದ ಮಧುರೈಗೆ ಪ್ರಯಾಣಿಸುವಾಗ ಬೆಂಕಿ ಅವಘಡಕ್ಕೆ ಈಡಾದ ಕೋಚ್ ಅನ್ನು ರೈಲು ಸಂಖ್ಯೆ 16730, ಪುನಲೂರ್-ಮಧುರೈ ಎಕ್ಸ್‌ಪ್ರೆಸ್‌ಗೆ ಜೋಡಿಸಲಾಗಿತ್ತು. ನಿನ್ನೆ (ಆಗಸ್ಟ್ 25, 2023) ಮಧ್ಯಾಹ್ನ 3:47 ಕ್ಕೆ ಮಧುರೈಗೆ ಆಗಮಿಸಿದಾಗ, ಖಾಸಗಿ ಪಕ್ಷದ ಕೋಚ್ ಅನ್ನು ನಂತರ ಬೇರ್ಪಡಿಸಿ ಮಧುರೈ ಸ್ಟೇಬ್ಲಿಂಗ್ ಲೈನ್‌ನಲ್ಲಿ ಇರಿಸಲಾಗಿತ್ತು. ದಕ್ಷಿಣ ಭಾರತದಲ್ಲಿ ಸ್ವಾಮಿ ದರ್ಶನ ಪಡೆಯಲು 60ಕ್ಕೂ ಹೆಚ್ಚು ಯಾತ್ರಾರ್ಥಿಗಳು ಆಗಸ್ಟ್ 17 ರಂದು ಉತ್ತರ ಪ್ರದೇಶದ ಲಖನೌದಿಂದ ರೈಲಿನಲ್ಲಿ ತಮಿಳುನಾಡಿಗೆ ಆಗಮಿಸಿದರು. ನಾಗರ್‌ಕೋಯಿಲ್‌ನ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ದರ್ಶನ ಪಡೆದ ಅವರು ಇಂದು(ಶನಿವಾರ) ಮುಂಜಾನೆ ಮಧುರೈ ತಲುಪಿದ್ದಾರೆ. ಮಧುರೈ ರೈಲು ನಿಲ್ದಾಣದಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ಮಧುರೈ ಬೋಡಿ ಲಯನ್‌ನಲ್ಲಿ ಪ್ರವಾಸಿ ರೈಲನ್ನು ನಿಲ್ಲಿಸಲಾಗಿತ್ತು.

  • #WATCH | Tamil Nadu: Fire reported in private/individual coach at Madurai yard at 5:15 am today in Punalur-Madurai Express. Fire services have arrived and put off the fire and no damage has caused to another coaches. The passengers have allegedly smuggled gas cylinder that caused… pic.twitter.com/5H7wQeGu93

ಈ ವೇಳೆ ರೈಲಿನ ಖಾಸಗಿ ಕೋಚ್‌ನಲ್ಲಿದ್ದ ಪ್ರಯಾಣಿಕರು ಸಿಲಿಂಡರ್​ನಿಂದ ಅಡುಗೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ರೈಲಿನಲ್ಲಿ ಟೀ ತಯಾರಿಸುತ್ತಿದ್ದಾಗ ಬೆಂಕಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. ಇದಾದ ನಂತರ ಯಾತ್ರಾರ್ಥಿಗಳು ಕಿರುಚುತ್ತಾ ಕೆಳಗಿಳಿದರು. 50ಕ್ಕೂ ಹೆಚ್ಚು ಪ್ರವಾಸಿಗರು ರೈಲಿನಿಂದ ಕೆಳಗಿಳಿದಿದ್ದಾರೆ. ನಂತರ ರೈಲಿನಲ್ಲಿ ಸಿಲುಕಿಕೊಂಡಿದ್ದ ಕೆಲವರನ್ನು ರಕ್ಷಣೆ ಮಾಡಲಾಗಿದೆ.

  • #WATCH | Tamil Nadu: "Today early morning at 5:30 am there was a fire accident in the coach which was halted here at Madurai railway station...They were pilgrims & were travelling from Uttar Pradesh. This morning when they tried to make coffee & tried to lit the gas stove, there… https://t.co/MgXuD4CDir pic.twitter.com/iDDBOmjIDX

ಅಗ್ನಿಶಾಮಕ ದಳದಿಂದ ಬೆಂಕಿ ಹತೋಟಿಗೆ: ಅಗ್ನಿಶಾಮಕ ದಳದವರು ರೈಲು ಬೋಗಿಯಲ್ಲಿನ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಅಗ್ನಿ ದುರಂತದಿಂದ ಈವರೆಗೆ ಪೈಕಿ ವಯೋವೃದ್ಧರು ಸೇರಿದಂತೆ 9 ಜನರು ಸಾವನ್ನಪ್ಪಿದ್ದಾರೆ. ಈ ಸಂಬಂಧ ರೈಲ್ವೆ ರಕ್ಷಣಾ ಪಡೆಯ ಪೊಲೀಸರು ಹಾಗೂ ಎಸ್‌ಎಸ್‌ ಕಾಲೋನಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ತಮಿಳುನಾಡು ವಾಣಿಜ್ಯ ತೆರಿಗೆ ಸಚಿವ ಮೂರ್ತಿ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ರೈಲ್ವೆ ಅಧಿಕಾರಿಗಳು, ಚಿಕ್ಕ ಗಾಯಗಳಿಂದ ಬಳಲುತ್ತಿರುವ ಕೆಲವು ಪ್ರಯಾಣಿಕರನ್ನು ಅಪಘಾತದ ಕುರಿತು ವಿಚಾರಿಸಿದರು. ಮಧುರೈ ಜಿಲ್ಲಾಧಿಕಾರಿ ಸಂಗೀತಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.

  • Deeply saddened by the tragic incident near Madurai Railway junction where nine precious lives were lost in a train fire accident. My heartfelt condolences go out to the families of the deceased. To support the affected families, an ex-gratia of 3 lakh INR will be provided.

    I…

    — M.K.Stalin (@mkstalin) August 26, 2023 " class="align-text-top noRightClick twitterSection" data=" ">

ಮೃತರಿಗೆ ತಲಾ 10 ಲಕ್ಷ ರೂ. ಪರಿಹಾರ: ಈ ಅಗ್ನಿ ದುರಂತ ಘಟನೆಗೆ ದಕ್ಷಿಣ ರೈಲ್ವೆ ಪ್ರತಿಕ್ರಿಯಿಸಿದೆ. ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

''ಮಧುರೈ ರೈಲ್ವೆ ಜಂಕ್ಷನ್ ಬಳಿ ರೈಲು ಅಗ್ನಿ ದುರಂತದಲ್ಲಿ ಒಂಬತ್ತು ಜೀವಗಳು ಬಲಿಯಾದ ದಾರುಣ ಘಟನೆಯಿಂದ ತೀವ್ರ ದುಃಖವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪ. ಮೃತರ ಕುಟುಂಬರಿಗೆ ತಲಾ 3 ಲಕ್ಷ ರೂ. ಪರಿಹಾರ ನೀಡಲಾಗುವುದು. ಈ ಕುರಿತು ಸಚಿವ ಮೂರ್ತಿ ಅವರಿಗೆ ಸೂಚನೆ ನೀಡಿದ್ದೇನೆ. ಗಾಯಾಳುಗಳಿಗೆ ಅತ್ಯುನ್ನತ ಗುಣಮಟ್ಟದ ಚಿಕಿತ್ಸೆ ನೀಡುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೃತ ದೇಹಗಳನ್ನು ಅವರ ಊರುಗಳಿಗೆ ಸಾಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಮಿಳುನಾಡಿನ ಸಿಎಂ ಎಂ.ಕೆ. ಸ್ಟಾಲಿನ್ ಟ್ವೀಟ್​ ಮಾಡಿದ್ದಾರೆ.

ಜೊತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಮೃತರ ಕುಟುಂಬರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಒದಗಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಕ್ರೀಡಾ ಉದ್ಘಾಟನೆಗೆ ಕಿಕ್ಕರಿದು ಬಂದ ಅಭಿಮಾನಿಗಳು.. ಕಾಲ್ತುಳಿತದಲ್ಲಿ 12 ಜನ ಸಾವು, 80ಕ್ಕೂ ಹೆಚ್ಚು ಜನರಿಗೆ ಗಾಯ

Last Updated : Aug 26, 2023, 1:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.