ETV Bharat / bharat

ಲೂಧಿಯಾನ ಕೋರ್ಟ್ ಸ್ಫೋಟ: ಸಂಚುಕೋರ ಹರ್​​ಪ್ರೀತ್​​ ಸಿಂಗ್​​​ ಬಂಧಿಸಿದ ಎನ್​ಐಎ

author img

By

Published : Dec 2, 2022, 10:32 AM IST

ಪಾಕಿಸ್ತಾನದ ಇಂಟರ್​ನ್ಯಾಶನಲ್​ ಸಿಖ್​ ಯೂತ್​ ಫೆಡರೇಶನ್​ ಮುಖ್ಯಸ್ಥ ಲಖ್ಬೀರ್​ ಸಿಂಗ್​ ರೋಡ್​ನ ಸಹವರ್ತಿಯೇ ಈ ಹರ್​ಪ್ರೀತ್​​ ಸಿಂಗ್.

ಲೂಧಿಯಾನ ನ್ಯಾಯಾಲಯ ಸ್ಪೋಟ ಪ್ರಕರಣ ಅರೋಪಿ ಹರ್​​ಪ್ರೀತ್​​ ಸಿಂಗ್​​​ ಬಂಧಿಸಿದ ಎನ್​ಐಎ
ludhiana-court-blast-case-accused-harpreet-singh-arrested-by-nia

ನವ ದೆಹಲಿ: ತಲೆಮರೆಸಿಕೊಂಡಿದ್ದ ಲೂಧಿಯಾನ ನ್ಯಾಯಾಲಯ ಸ್ಪೋಟದ ರೂವಾರಿ ಮತ್ತು ಉಗ್ರ ಹರ್​ಪ್ರೀತ್​ ಸಿಂಗ್​ನನ್ನು ರಾಷ್ಟ್ರೀಯ ತನಿಖಾ ದಳದ(ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ. ಮಲೇಷಿಯಾದ ಕೌಲಲಾಂಪುರ್​ ವಿಮಾನ ನಿಲ್ದಾಣದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬರುವಾಗ ಆತನನ್ನು ಅರೆಸ್ಟ್‌ ಮಾಡಲಾಗಿದೆ.

ಪಾಕಿಸ್ತಾನದ ಇಂಟರ್​ನ್ಯಾಶನಲ್​ ಸಿಖ್​ ಯೂತ್​ ಫೆಡರೇಶನ್​ ಮುಖ್ಯಸ್ಥ ಲಖ್ಬೀರ್​ ಸಿಂಗ್​ ರೋಡ್​ನ ಸಹವರ್ತಿಯೇ ಈ ಹರ್​ಪ್ರೀತ್​​ ಸಿಂಗ್. 2021ರಲ್ಲಿ ಲೂಧಿಯಾನ ಕೋರ್ಟ್​​ ಆವರಣದಲ್ಲಿ ರೋಡ್​​ ಜೊತೆ ಸೇರಿ ಹರ್‌ಪ್ರೀತ್​ ಸಿಂಗ್​ ಬಾಂಬ್​ ಸ್ಪೋಟಿಸಿದ್ದ. ಈ ಭಾರಿ ಸ್ಪೋಟದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದರು.

ಡಿಸೆಂಬರ್​ 23, 2021ರಲ್ಲಿ ಪಂಜಾಬ್​ ಪೊಲೀಸರು ಪ್ರಕರಣ ದಾಖಲಿಸಿದರೆ, ಎನ್​ಐಎ ಜ.1ರಂದು ಪುನಃ ಪ್ರಕರಣ ದಾಖಲಿಸಿಕೊಂಡಿತ್ತು. ತನಿಖೆ ವೇಳೆ ಹರ್​ಪ್ರೀತ್​ ಸಿಂಗ್​ ಆಲಿಯಾಸ್​ ಹ್ಯಾಪಿ ತನ್ನ ಸಹಚರ ಲಖ್ಬೀರ್​ ಸಿಂಗ್​ ರೋಡ್​ ಜೊತೆ ಮಲೇಷಿಯಾದಲ್ಲಿರುವುದು ತಿಳಿದು ಬಂದಿದೆ ಎಂದು ಎನ್​ಐಎ ತಿಳಿಸಿದೆ. ಹರ್​ಪ್ರೀತ್​ ಪಂಜಾಬ್​ನ ಅಮೃತ್​ಸರ ಜಿಲ್ಲೆಯ ನಿವಾಸಿಯಾಗಿದ್ದಾನೆ.

ಇದನ್ನೂ ಓದಿ: ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣ: ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.