ETV Bharat / bharat

ಜಪಾನ್​ ಹಿಂದಿಕ್ಕಿ ಏಷ್ಯಾದಲ್ಲಿಯೇ ಭಾರತ ಮೂರನೇ 'ಅತಿಬಲಿಷ್ಠ ರಾಷ್ಟ್ರ'; ಕೇಂದ್ರ ಸರ್ಕಾರ - Asia Power Index

author img

By ETV Bharat Karnataka Team

Published : 2 hours ago

ಏಷ್ಯಾ- ಪೆಸಿಫಿಕ್​ ಪ್ರದೇಶದಲ್ಲಿ ಅತಿ ಬಲಿಷ್ಠ ರಾಷ್ಟ್ರಗಳ ಪಟ್ಟಿ ಬಿಡುಗಡೆಯಾಗಿದ್ದು, ಜಪಾನ್​ ಹಿಂದಿಕ್ಕಿದ ಭಾರತ ಮೂರನೇ ಶಕ್ತಿಯುತ ದೇಶ ಎಂಬ ಗರಿಮೆಗೆ ಪಾತ್ರವಾಗಿದೆ.

ಏಷ್ಯಾದ ಶಕ್ತಿಯುತ ರಾಷ್ಟ್ರಗಳ ಸೂಚ್ಯಂಕ
ಏಷ್ಯಾದ ಶಕ್ತಿಯುತ ರಾಷ್ಟ್ರಗಳ ಸೂಚ್ಯಂಕ (Representational image (ANI))

ನವದೆಹಲಿ: ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಬೆಳೆದಿರುವ ಭಾರತ, ಏಷ್ಯಾ ಖಂಡದಲ್ಲಿ ಮೂರನೇ 'ಪವರ್​​ಫುಲ್​​' ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಾಂತ್ರಿಕತೆಗೆ ಹೆಸರಾಗಿರುವ ಪುಟ್ಟ ರಾಷ್ಟ್ರ ಜಪಾನ್​ ಅನ್ನು ಹಿಂದಿಕ್ಕಿ ಈ ಸಾಧನೆ ಮಾಡಿದೆ.

ಬುಧವಾರ ಬಿಡುಗಡೆಯಾಗಿರುವ ಏಷ್ಯಾದ ಶಕ್ತಿಯುತ ರಾಷ್ಟ್ರಗಳ ಸೂಚ್ಯಂಕದಲ್ಲಿ ಭಾರತ ಮೂರನೇ ಸ್ಥಾನವನ್ನು ಹೊಂದಿದ್ದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದ್ದು, ಏಷ್ಯಾ ಪವರ್ ಇಂಡೆಕ್ಸ್‌ನಲ್ಲಿ ಭಾರತವು ಜಪಾನ್ ಅನ್ನು ಹಿಂದಿಕ್ಕಿ ಮೂರನೇ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ ಎಂದಿದೆ.

ಇದು ಭಾರತದ ಕ್ರಿಯಾತ್ಮಕ ಬೆಳವಣಿಗೆ, ಯುವ ಜನಸಂಖ್ಯೆ ಮತ್ತು ಬೆಳೆಯುತ್ತಿರುವ ಆರ್ಥಿಕತೆಯು ಏಷ್ಯಾದಲ್ಲಿ ಪ್ರಮುಖ ಶಕ್ತಿ ರಾಷ್ಟ್ರವಾಗಿ ತನ್ನ ಸ್ಥಾನವನ್ನು ಭದ್ರ ಮಾಡಿಕೊಂಡಿದೆ ಎಂದು ಸಚಿವಾಲಯವು ತಿಳಿಸಿದೆ. ದೇಶದ ಭೌಗೋಳಿಕ ರಾಜಕೀಯ ಸ್ಥಾನಮಾನವನ್ನೂ ಪ್ರತಿಬಿಂಬಿಸುತ್ತದೆ ಎಂದಿದೆ.

ಜಪಾನ್​ ಹಿಂದಿಕ್ಕಿದ ಭಾರತ: ಲೋವಿ ಸಂಸ್ಥೆಯು ಏಷ್ಯಾ ಪವರ್ ಇಂಡೆಕ್ಸ್ 2024 ರ ಸಾಲಿನ ವರದಿಯನ್ನು ಬಿಡುಗಡೆ ಮಾಡಿದ್ದು, ಏಷ್ಯಾ-ಪೆಸಿಫಿಕ್​​ನ ಪವರ್​ಫುಲ್​ ಡೈನಾಮಿಕ್ಸ್‌ ರಾಷ್ಟ್ರಗಳನ್ನು ಇದು ಗುರುತಿಸಿದೆ. ಏಷ್ಯಾ-ಪೆಸಿಫಿಕ್‌ ಪ್ರದೇಶದ 27 ದೇಶಗಳನ್ನು ಮೌಲ್ಯಮಾಪನ ಮಾಡಿದ್ದು, ಭಾರತಕ್ಕೆ ಮೂರನೇ ಶಕ್ತಿಯುತ ರಾಷ್ಟ್ರ ಎಂಬ ಮನ್ನಣೆ ನೀಡಿದೆ. ವಿಶೇಷವೆಂದರೆ, ತಾಂತ್ರಿಕವಾಗಿ ಮುಂದಿರುವ ಜಪಾನ್​, ಭಾರತಕ್ಕಿಂತ ಹಿಂದೆ ಬಿದ್ದಿದೆ ಎಂದು ವರದಿ ತಿಳಿಸಿದೆ.

ಏಷ್ಯಾ ಪವರ್​ ಇಂಡೆಕ್ಸ್​​ ವರದಿಯ ಪ್ರಕಾರ, ಭಾರತ ಪ್ರಾದೇಶಿಕವಾಗಿ ಅತಿ ಬಲಿಷ್ಠವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಕೊರೊನಾ ಸಾಂಕ್ರಾಮಿಕದ ನಂತರ ಕ್ಷಿಪ್ರಗತಿಯಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಿದೆ. ಇದು ದೇಶವನ್ನು ರಾಜಕೀಯ, ಬೌಗೋಳಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಬಲಾಢ್ಯವನ್ನಾಗಿ ಮಾಡಿದೆ ಎಂದು ಹೇಳಿದೆ.

ಭಾರತವು ತನ್ನ ಆರ್ಥಿಕ ಸಾಮರ್ಥ್ಯದಲ್ಲಿ 4.2 ಪಾಯಿಂಟ್ ಏರಿಕೆ ಕಂಡಿದೆ. ದೇಶದ ಅಗಾಧ ಜನಸಂಖ್ಯೆ ಮತ್ತು ಜಿಡಿಪಿ ಬೆಳವಣಿಗೆಯು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಬೆಳೆಯುವಲ್ಲಿ ಸಹಾಯ ಮಾಡುತ್ತದೆ. ಭಾರತದ ಭವಿಷ್ಯದ ಸಂಪನ್ಮೂಲಗಳ ಸ್ಕೋರ್ 8.2 ಪಾಯಿಂಟ್‌ ಇದೆ. ಇದು ಸಂಭಾವ್ಯ ಜನಸಂಖ್ಯೆ ಲಾಭಾಂಶವನ್ನೂ ಸೂಚಿಸುತ್ತದೆ. ಪ್ರಾದೇಶಿಕ ಪ್ರತಿಸ್ಪರ್ಧಿಗಳಾದ ಚೀನಾ, ಜಪಾನ್​​ಗಿಂತ ಭಿನ್ನವಾಗಿ ಮುಂಬರುವ ದಶಕಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಕಾರ್ಮಿಕ ಬಲವನ್ನು ಹೊಂದಲಿದೆ ಎಂದು ಇಂಡೆಕ್ಸ್​ ತಿಳಿಸಿದೆ.

ವರದಿ ಅನುಸರಿಸಿದ ಮಾನದಂಡಗಳು: ಏಷ್ಯಾ ಪವರ್ ಇಂಡೆಕ್ಸ್ ಎಂಟು ಪ್ರಮುಖ ಮಾನದಂಡಗಳ ಆಧಾರದ ಮೇಲೆ ದೇಶಗಳನ್ನು ಪವರ್​ಫುಲ್​ ಎಂದು ಮೌಲ್ಯಮಾಪನ ಮಾಡಿದೆ. ಸಂಪನ್ಮೂಲ, ಆರ್ಥಿಕತೆ, ಸೇನಾ ಸಾಮರ್ಥ್ಯ, ಸ್ಥಿತಿಸ್ಥಾಪಕತ್ವ, ಭವಿಷ್ಯದ ಸಂಪನ್ಮೂಲಗಳು, ರಾಜತಾಂತ್ರಿಕ ಪ್ರಭಾವ ಮತ್ತು ಸಾಂಸ್ಕೃತಿಕ ಪ್ರಭಾವವನ್ನು ಪರಿಗಣಿಸಲಾಗಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಜ್ಯೂಸ್​ ಕಲಬೆರಕೆ ಆರೋಪ: ಬಣ್ಣ ಮಿಶ್ರಣ ಮಾಡಿ ದಾಳಿಂಬೆ ರಸವೆಂದು ಮಾರಾಟ! - JUICE ADULTERATION

ETV Bharat Logo

Copyright © 2024 Ushodaya Enterprises Pvt. Ltd., All Rights Reserved.