ಕೂನೂರು(ತಮಿಳುನಾಡು): ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಹಾಗೂ 12 ಮಂದಿ ಹುತಾತ್ಮರಾದ ಸ್ಥಳದಲ್ಲಿ ಸ್ಮಾರಕ ಚೌಕ ನಿರ್ಮಿಸಬೇಕು ಕೂನೂರು ಸಮೀಪದ ನಂಜಪ್ಪ ಛತ್ರಂನ ನಿವಾಸಿಗಳು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಒತ್ತಾಯಿಸಿದ್ದಾರೆ.
ಮತ್ತೊಂದೆಡೆ ಹೆಲಿಕಾಪ್ಟರ್ ಅಪಘಾತಕ್ಕೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿದ್ದ ರಾಮನಾಥಪುರಂನ ವಿವಾಹ ಸಮಾರಂಭಗಳಲ್ಲಿ ಫೋಟೋಗ್ರಾಫರ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ, ಜೋ ಮತ್ತು ಅವರ ಸ್ನೇಹಿತ ನಾಜರ್ ಶುಕ್ರವಾರ ಕೊಯಮತ್ತೂರಿನ ನಗರ ಪೊಲೀಸ್ ಆಯುಕ್ತ ಪ್ರದೀಪ್ ಕುಮಾರ್ ಅವರನ್ನು ಭೇಟಿಯಾಗಿ ಸೆರೆಹಿಡಿದ ವಿಡಿಯೋ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ಹೆಲಿಕಾಪ್ಟರ್ ದುರಂತದ ನಂತರ ರಕ್ಷಣಾ ಕಾರ್ಯಾಚರಣೆಗೆ ಸಹಕಾರ ನೀಡಿದ, ದುರಂತದ ಕುರಿತು ಸಾಕ್ಷ್ಯ ಹೇಳಿದ ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿಗಳಿಗೆ ಭಾರತೀಯ ವಾಯುಪಡೆ ಧನ್ಯವಾದ ಅರ್ಪಿಸಿದೆ.
ನೀಲಗಿರಿ ಜಿಲ್ಲಾ ಪೊಲೀಸರು ದುರಂತದ ಕುರಿತು ತನಿಖೆ ನಡೆಸುತ್ತಿದ್ದು, ಕೆಲವರ ಮೊಬೈಲ್ ನಂಬರ್ ಮತ್ತು ವಿಳಾಸವನ್ನು ಸಂಗ್ರಹಿಸಿ ತನಿಖಾಧಿಕಾರಿಗಳಿಗೆ ನೀಡುತ್ತೇವೆ ಎಂದು ಪೊಲೀಸ್ ಆಯುಕ್ತ ಪ್ರದೀಪ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಹೆಲಿಕಾಪ್ಟರ್ ಪತನ: ಎಲ್ಲ ನಾಲ್ವರು ವೀರಪುತ್ರರ ಪಾರ್ಥಿವ ಶರೀರ ಗುರುತು ಪತ್ತೆ, ಇಂದು ತವರೂರಿಗೆ ರವಾನೆ