ETV Bharat / bharat

ಡಿಜಿಟಲ್ ಆರ್ಥಿಕತೆಗೆ ಮಿಂಚಿನ ವೇಗ: ಜನವರಿಯಲ್ಲಿ 200 ಕೋಟಿ ಆಧಾರ್ ಕಾರ್ಡ್ ಆಧರಿತ ವಹಿವಾಟು

author img

By

Published : Mar 1, 2023, 1:33 PM IST

ದೇಶದಲ್ಲಿ ಆಧಾರ್ ಕಾರ್ಡ್ ಆಧರಿತ ವಹಿವಾಟುಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಜನವರಿ ಒಂದೇ ತಿಂಗಳಲ್ಲಿ 199 ಕೋಟಿಗೂ ಅಧಿಕ ಆಧಾರ್ ದೃಢೀಕೃತ ವಹಿವಾಟುಗಳು ನಡೆದಿವೆ ಎಂದು ಸರ್ಕಾರ ತಿಳಿಸಿದೆ.

ಡಿಜಿಟಲ್ ಆರ್ಥಿಕತೆಗೆ ಮಿಂಚಿನ ವೇಗ: ಜನವರಿಯಲ್ಲಿ 200 ಕೋಟಿ ಆಧಾರ್ ಕಾರ್ಡ್ ಆಧರಿತ ವಹಿವಾಟು
Nearly 200 crore Aadhaar authentication transactions carried out in Jan 2023

ನವದೆಹಲಿ : ಆಧಾರ್ ಕಾರ್ಡ್ ಹೊಂದಿದವರು ಈವರೆಗೆ 9,029.28 ಕ್ಕೂ ಅಧಿಕ ಆಧಾರ್ ದೃಢೀಕೃತ ವಹಿವಾಟುಗಳನ್ನು ನಡೆಸಿದ್ದಾರೆ. 2023ರ ಜನವರಿ ತಿಂಗಳೊಂದರಲ್ಲೇ 199 ಕೋಟಿಗೂ ಅಧಿಕ ಆಧಾರ್ ದೃಢೀಕೃತ ವಹಿವಾಟುಗಳು ನಡೆದಿವೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಭಾರತದ ಡಿಜಿಟಲ್ ಆರ್ಥಿಕತೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದರ ಮುನ್ಸೂಚನೆ ಇದಾಗಿದೆ ಎಂದು ಸರ್ಕಾರ ಹೇಳಿದೆ.

ಬಹುಪಾಲು ಸಂಖ್ಯೆಯ ದೃಢೀಕೃತ ವಹಿವಾಟುಗಳನ್ನು ಬಯೋಮೆಟ್ರಿಕ್ ಫಿಂಗರ್‌ಪ್ರಿಂಟ್ ಬಳಸಿ ನಡೆಸಲಾಗಿದ್ದರೂ, ಭೌಗೋಳಿಕ ಮತ್ತು ಓಟಿಪಿ ದೃಢೀಕರಣಗಳನ್ನು ಕೂಡ ಬಳಸಲಾಗಿದೆ. ಜನವರಿ ತಿಂಗಳಲ್ಲಿ, 135.53 ಕೋಟಿ ಬಯೋಮೆಟ್ರಿಕ್ ಫಿಂಗರ್‌ಪ್ರಿಂಟ್ ಆಧಾರಿತ ದೃಢೀಕರಣಗಳನ್ನು ಕೈಗೊಳ್ಳಲಾಗಿದೆ. ಭಾರತೀಯರ ದೈನಂದಿನ ಜೀವನದಲ್ಲಿ ಆಧಾರ್ ಕಾರ್ಡ್​ನ ಮಹತ್ವ ಈಗ ಎಷ್ಟು ಹೆಚ್ಚಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈಗಾಗಲೇ ಆಧಾರ್ ಆಧಾರಿತ ಫಿಂಗರ್‌ಪ್ರಿಂಟ್ ದೃಢೀಕರಣಕ್ಕಾಗಿ ಹೊಸ ಭದ್ರತಾ ಕಾರ್ಯವಿಧಾನವನ್ನು ಹೊರತಂದಿದೆ. ಕೃತಕ ಬುದ್ಧಿಮತ್ತೆ ಮತ್ತು ಆಂತರಿಕವಾಗಿ ಅಭಿವೃದ್ಧಿಪಡಿಸಲಾದ ಯಂತ್ರ ಕಲಿಕೆ (AI/ML) ಆಧಾರಿತ ಭದ್ರತಾ ಕಾರ್ಯವಿಧಾನ, ಸೆರೆಹಿಡಿಯಲಾದ ಫಿಂಗರ್ ಪ್ರಿಂಟ್‌ನ ಜೀವಂತಿಕೆಯನ್ನು ಪರಿಶೀಲಿಸಲು ಬೆರಳು ಸೂಕ್ಷ್ಮತೆ ಮತ್ತು ಫಿಂಗರ್ ಇಮೇಜ್ ಎರಡರ ಸಂಯೋಜನೆಯನ್ನು ಈಗ ಬಳಸಲಾಗುತ್ತಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಪ್ರಕಾರ, ಜನವರಿ ಅಂತ್ಯದ ವೇಳೆಗೆ ಆಧಾರ್ ಸಂಖ್ಯೆ ಹೊಂದಿದವರ ಎಲ್ಲಾ ವಯೋಮಾನದವರ ಪ್ರಮಾಣ ಶೇಕಡಾ 94.65 ಕ್ಕೆ ಏರಿದೆ ಮತ್ತು ಬಹುತೇಕ ವಯಸ್ಕ ಜನಸಂಖ್ಯೆಯು ಆಧಾರ್ ಸಂಖ್ಯೆ ಪಡೆದುಕೊಮಡಿದೆ. ಜನವರಿ ತಿಂಗಳಲ್ಲಿ ಕಾರ್ಡ್​ ಹೊಂದಿದವರ ಮನವಿಗಳ ಮೇರೆಗೆ 1.37 ಕೋಟಿಗೂ ಹೆಚ್ಚು ಆಧಾರ್‌ ಕಾರ್ಡ್​ಗಳ ಮಾಹಿತಿಯನ್ನು ಅಪ್ಡೇಟ್ ಮಾಡಲಾಗಿದೆ. ಆಧಾರ್ ಇ-ಕೆವೈಸಿ ಸೇವೆಯು ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಸೇವೆಗಳಿಗೆ ಪಾರದರ್ಶಕ ಮತ್ತು ಸುಧಾರಿತ ಗ್ರಾಹಕರ ಅನುಭವ, ವ್ಯವಹಾರವನ್ನು ಸುಲಭಗೊಳಿಸಲು ಸಹಾಯ ಮಾಡುವ ಮೂಲಕ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ 2023 ರಲ್ಲಿ 29.52 ಕೋಟಿಗೂ ಹೆಚ್ಚು ಇಕೆವೈಸಿ ವಹಿವಾಟುಗಳನ್ನು ನಡೆಸಲಾಗಿದೆ.

105 ಬ್ಯಾಂಕ್‌ಗಳು ಸೇರಿದಂತೆ ಒಟ್ಟು 170 ಘಟಕಗಳು ಇ-ಕೆವೈಸಿಯಲ್ಲಿ ಲೈವ್ ಆಗಿವೆ. ಇ-ಕೆವೈಸಿ ಅಳವಡಿಕೆಯು ಹಣಕಾಸು ಸಂಸ್ಥೆಗಳು, ಟೆಲಿಕಾಂ ಸೇವಾ ಪೂರೈಕೆದಾರರು ಮತ್ತು ಇತರ ಸಂಸ್ಥೆಗಳ ಗ್ರಾಹಕರ ಸ್ವಾಧೀನ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಜನವರಿ 2023 ರ ಅಂತ್ಯದ ವೇಳೆಗೆ, ಇದುವರೆಗಿನ ಆಧಾರ್ ಇ-ಕೆವೈಸಿ ವಹಿವಾಟುಗಳ ಸಂಚಿತ ಸಂಖ್ಯೆ 1412.25 ಕೋಟಿಗೆ ಏರಿದೆ. ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (AePS) ಆದಾಯ ಮಟ್ಟಗಳ ಕೆಳಭಾಗದಲ್ಲಿರುವವರಿಗೆ ಹಣಕಾಸಿನ ಸೇರ್ಪಡೆಯನ್ನು ಸಕ್ರಿಯಗೊಳಿಸುತ್ತಿದೆ. ಜನವರಿ 2023 ರ ಅಂತ್ಯದ ವೇಳೆಗೆ, ಸಂಚಿತವಾಗಿ, 1,629.98 ಕೋಟಿ ಬ್ಯಾಂಕಿಂಗ್ ವಹಿವಾಟುಗಳನ್ನು AePS ಮತ್ತು ಮೈಕ್ರೋ-ಎಟಿಎಂಗಳ ನೆಟ್‌ವರ್ಕ್ ಮೂಲಕ ಸಾಧ್ಯವಾಗಿಸಲಾಗಿದೆ.

ದೇಶದಲ್ಲಿ ಕೇಂದ್ರ ಮತ್ತು ರಾಜ್ಯಗಳೆರಡೂ ನಡೆಸುತ್ತಿರುವ 1,100 ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಉಪಕ್ರಮಗಳಿಗೆ ಆಧಾರ್ ಬಳಸಲು ಸೂಚಿಸಲಾಗಿದೆ. ಆಧಾರ್ ಡಿಜಿಟಲ್ ಐಡಿ ಕೇಂದ್ರ ಮತ್ತು ರಾಜ್ಯಗಳಲ್ಲಿನ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ದಕ್ಷತೆ, ಪಾರದರ್ಶಕತೆ ಮತ್ತು ಉದ್ದೇಶಿತ ಫಲಾನುಭವಿಗಳಿಗೆ ಕಲ್ಯಾಣ ಸೇವೆಗಳನ್ನು ತಲುಪಿಸಲು ಸಹಾಯ ಮಾಡುತ್ತಿದೆ.

ಇದನ್ನೂ ಓದಿ : ಆನ್​ಲೈನ್​ನಲ್ಲಿ ಆಧಾರ್​​ ವಿಳಾಸ ತಿದ್ದುಪಡಿಗೆ ಹೊಸ ವಿಧಾನ: ಕುಟುಂಬದ ಮುಖ್ಯಸ್ಥರ ಒಪ್ಪಿಗೆ ಸಾಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.