ಮುಂಬೈ: ದೇಶದಲ್ಲಿ ಕೋವಿಡ್ ಲಸಿಕೆ ಕೊರತೆ ನೀಗಿಸಲು ಒಂದಕ್ಕಿಂತ ಹೆಚ್ಚು ಫಾರ್ಮಾ ಕಂಪನಿಗಳಿಗೆ ಲಸಿಕೆ ತಯಾರಿಕೆಗೆ ಅವಕಾಶ ನೀಡಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ವಿವಿಧ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ಸಭೆಯಲ್ಲಿ ಮಾತನಾಡಿದ ಅವರು, ಒಂದಕ್ಕಿಂತ ಹೆಚ್ಚಿನ ಫಾರ್ಮಾ ಕಂಪನಿಗಳಿಗೆ ಕೋವಿಡ್ ಲಸಿಕೆ ತಯಾರಿಸಲು ಪರವಾನಿಗೆ ನೀಡಬೇಕು. ಅವರು ಮೊದಲು ದೇಶದ ಜನರಿಗೆ ಲಸಿಕೆ ಪೂರೈಸಲಿ, ಬಳಿಕ ಹೆಚ್ಚುವರಿ ಇದ್ದರೆ ವಿದೇಶಗಳಿಗೆ ರಫ್ತು ಮಾಡಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಹೊಸ ತಳಿ ವೈರಸ್ ಕುರಿತು ಕೇಜ್ರಿವಾಲ್ ಟ್ವೀಟ್.. ಸಿಂಗಾಪುರ ಸರ್ಕಾರ, ವಿದೇಶಾಂಗ ಸಚಿವರಿಂದ ತೀವ್ರ ಖಂಡನೆ
ಲಸಿಕೆ ಅಭಿವೃದ್ದಿಪಡಿಸಿದ ಕಂಪನಿಗಳಿಂದ ಅನುಮತಿ ಪಡೆದು ಇತರ ಕಂಪನಿಗಳು ಲಸಿಕೆ ತಯಾರಿಸಬೇಕು. ಈ ವೇಳೆ ಪೇಟೆಂಟ್ ಕಂಪನಿಗೆ ಶೇ. 10 ರಷ್ಟು ಗೌರವಧನ ನೀಡಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.