ETV Bharat / bharat

ಭಾರತ ಉಸಿರುಗಟ್ಟಿಸುವಂತಿದ್ದರೆ, ದೇಶ ಬಿಟ್ಟು ಹೊರಡಿ: ಫಾರೂಕ್​ ಅಬ್ದುಲ್ಲಾಗೆ ಆರ್​ಎಸ್​ಎಸ್​ ಸಲಹೆ - ಆರ್‌ಎಸ್‌ಎಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್

ಜಮ್ಮು ಕಾಶ್ಮೀರಕ್ಕೆ ವಿಶೇಷ ಸಾಂವಿಧಾನಿಕ ಸ್ಥಾನಮಾನದ ಹಕ್ಕುಗಳನ್ನು ಮರುಪಡೆಯುವ ಸಲುವಾಗಿ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿದಂತೆ ಪ್ರತಿಭಟನೆ ನಡೆಸಬೇಕು ಎಂಬ ನ್ಯಾಷನಲ್ ಕಾನ್ಫರೆನ್ಸ್ ನಾಯಕನ ಹೇಳಿಕೆಗೆ ಆರ್​ಎಸ್​ಎಸ್​ ಆಕ್ರೋಶ ವ್ಯಕ್ತಪಡಿಸಿದೆ.

Leave India if you feel suffocated here: RSS leader to Farooq Abdullah
ಭಾರತ ಉಸಿರುಗಟ್ಟಿಸುವಂತಿದ್ದರೆ, ದೇಶವನ್ನು ಬಿಟ್ಟು ಹೊರಡಿ: ಫಾರೂಕ್​ ಅಬ್ದುಲ್ಲಾಗೆ ಆರ್​ಎಸ್​ಎಸ್​ 'ಸಲಹೆ'
author img

By

Published : Dec 7, 2021, 6:43 AM IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಹಕ್ಕುಗಳನ್ನು ಮರಳಿ ಪಡೆಯಲು ರೈತರು ಪ್ರತಿಭಟನೆ ನಡೆಸಿದಂತೆ ಪ್ರತಿಭಟನೆ ನಡೆಸಬೇಕು, ತ್ಯಾಗ ಮಾಡಬೇಕು ಎಂಬ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿಕೆಗೆ ಆರ್​ಎಸ್​ಎಸ್​ ಅಸಮಾಧಾನ ವ್ಯಕ್ತಪಡಿಸಿದೆ.

ಜಮ್ಮುವಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್‌ಎಸ್‌ಎಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್, ಫಾರೂಕ್ ಅಬ್ದುಲ್ಲಾ ಹಿಂಸೆಯನ್ನು ಪ್ರೀತಿಸುತ್ತಾರೆ, ಶಾಂತಿಯನ್ನಲ್ಲ ಎಂಬುದು ಅವರ ಹೇಳಿಕೆಯಿಂದ ಗೊತ್ತಾಗುತ್ತದೆ.

ಅಬ್ದುಲ್ಲಾ ಅವರು ಭಾರತದಲ್ಲಿ ಉಸಿರುಗಟ್ಟಿಸುವಂತಹ ವಾತಾವರಣ ಇದೆ ಎಂದು ಭಾವಿಸಿದರೆ ಪ್ರಪಂಚದ ಯಾವುದೇ ಭಾಗದಲ್ಲಿ ಅವರು ವಾಸಿಸಬಹುದು. ದೇಶ ತೊರೆದು ಬೇರೆ ದೇಶದಲ್ಲಿ ವಾಸ ಮಾಡಬಹುದು ಎಂದು ವ್ಯಂಗ್ಯಮಿಶ್ರಿತ ಸಲಹೆಯನ್ನು ಇಂದ್ರೇಶ್ ಕುಮಾರ್ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಮರು ಪಡೆಯಲು ಚೀನಾದ ನೆರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಫಾರೂಕ್ ಅಬ್ದುಲ್ಲಾ ಈ ಹಿಂದೆ ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಇಂದ್ರೇಶ್ ಕುಮಾರ್, ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಅವರು ಭಾರತದಲ್ಲಿರಲು ಇಷ್ಟ ಪಡದಿದ್ದರೆ, ಬೇರೆ ಎಲ್ಲಿ ಬೇಕಾದರೂ ವಾಸ ಮಾಡಬಹುದು. ಅರಬ್ ಅಥವಾ ಅಮೆರಿಕ ಅಥವಾ ಅವರ ಪತ್ನಿ ವಾಸ ಮಾಡುತ್ತಿರುವ ಇಂಗ್ಲೆಂಡ್​ಗೆ ತೆರಳಿಯೂ ವಾಸ ಮಾಡಲು ಯೋಚನೆ ಮಾಡಬಹುದು ಎಂದರು.

ಜಮ್ಮು ಮತ್ತು ಕಾಶ್ಮೀರದ ಇಬ್ಬರೂ ನಾಯಕರು ಪ್ರಚೋದನಾತ್ಮಕ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಅವರ ಪ್ರಚೋದನಕಾರಿ ಹೇಳಿಕೆಗಳು ಅಡ್ಡಿಯಾಗುತ್ತವೆ ಎಂದು ಇಂದ್ರೇಶ್ ಕುಮಾರ್ ಮೆಹಬೂಬಾ ಮುಫ್ತಿ ವಿರುದ್ಧವೂ ಕಿಡಿಕಾರಿದರು.

ಭಾನುವಾರ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರ 116ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶ್ರೀನಗರದ ನಸೀಂಬಾಗ್‌ನಲ್ಲಿರುವ ಸಮಾಧಿಯ ಬಳಿ ನ್ಯಾಷನಲ್ ಕಾನ್ಫರೆನ್ಸ್ ಯುವ ವಿಭಾಗದ ಸಮಾವೇಶ ಉದ್ದೇಶಿಸಿ ಮಾತನಾಡಿದ ಫಾರೂಕ್ ಅಬ್ದುಲ್ಲಾ ಈ ರೀತಿಯ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಪೆನ್ನು​ ಮಾರಾಟ ಮಾಡ್ತಿದ್ದ ಬಾಲಕಿಗೆ iPhone ಗಿಫ್ಟ್​ ನೀಡಿದ ತೇಜ್​​ ಪ್ರತಾಪ್​​​​

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.