ETV Bharat / bharat

ಇಹಲೋಕ ತ್ಯಜಿಸಿದ ಲಾವಣಿಗಳ ರಾಣಿ ಸುಲೋಚನಾ ಚವಾಣ್​.. ಇಂದು ಸಂಜೆ ಅಂತ್ಯಕ್ರಿಯೆ

author img

By

Published : Dec 10, 2022, 1:41 PM IST

ಲಾವಣಿಗಳ ರಾಣಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಲೋಚನಾ ಚವಾಣ್ ಅವರು ಡಿಸೆಂಬರ್​ 10 ರಂದು ಗಾನ ನಿಲ್ಲಿಸಿದರು. ಇಂದು ಸಂಜೆ ಮುಂಬೈನ ಮೆರೈನ್ ಲೈನ್ಸ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

lavani-singer-sulochana-chavan-passed
ಲಾವಣಿಗಳ ರಾಣಿ ಸುಲೋಚನಾ ಚವಾಣ್​

ಹೈದರಾಬಾದ್: ಲಾವಣಿಗಳ ರಾಣಿ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತೆ ಹಿರಿಯ ಗಾಯಕಿ ಸುಲೋಚನಾ ಚವಾಣ್ ಅವರು ವಯೋಸಹಜ ಕಾರಣದಿಂದ ಇಂದು ಅವರು ಮಹಾರಾಷ್ಟ್ರದ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದರು. ಹಿರಿಯ ಕಂಠಕ್ಕೆ 89 ವರ್ಷ ವಯಸ್ಸಾಗಿತ್ತು. ಇಂದು ಸಂಜೆ ದಕ್ಷಿಣ ಮುಂಬೈನ ಮೆರೈನ್ ಲೈನ್ಸ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸುಲೋಚನಾ ಚವಾಣ್​ ಅವರು ಮಾರ್ಚ್ 13, 1933 ರಂದು ಮುಂಬೈನಲ್ಲಿ ಜನಿಸಿದ್ದರು. ಚಿಕ್ಕಂದಿನಿಂದಲೇ ಗಾಯನದೆಡೆಗೆ ಪ್ರಭಾವಿತರಾಗಿದ್ದ ಅವರು, ಅದನ್ನೇ ವೃತ್ತಿಯನ್ನಾಗಿ ಆಯ್ದುಕೊಂಡರು. ಅದರಲ್ಲೂ ಲಾವಣಿ ಹಾಡುಗಳ ಬಗ್ಗೆ ಹೆಚ್ಚು ಆಸ್ಥೆ ಹೊಂದಿದ್ದರು. ಅವರ ಕಂಠಸಿರಿಯಲ್ಲಿ ಬಂದ ಅದೆಷ್ಟೋ ಲಾವಣಿ ಗೀತೆಗಳು ಜನಮನ ತಣಿಸಿವೆ.

1965 ರಲ್ಲಿ ತೆರೆಕಂಡ ಮಲ್ಹಾರಿ ಮಾರ್ತಾಂಡ್ ಸಿನಿಮಾದ ಎರಡು ಹಾಡುಗಳಾದ ತುಜ್ಯಾ ಉಸಲಾ ಲಾಗಲ್ ಕೊಲ್ಹಾ, ಪದಾರವಾರ್ತಿ ಜರ್ತಾರಿಚ್ಚಾ, 1964 ರಲ್ಲಿ ಬೆಳ್ಳಿಪರದೆ ಮೇಲೆ ಮಿಂಚಿದ ಸವಾಲ್ ಮಜಾ ಐಕಾ ಸಿನಿಮಾದ ಸೋಲಾವಾ ವರೀಸ್ ಧೋಕ್ಯಾಚಾ, ಕಸ ಕೇ ಪಾಟೀಲ್ ಬಾರಾ ಹೇ ಕಾ? ಹಾಡುಗಳು ಇಂದಿಗೂ ಜನಮಾನದಲ್ಲಿ ಅಚ್ಚಳಿಯದೇ ಕೂತಿವೆ.

ಪದ್ಮಶ್ರೀ ಪ್ರದಾನ: ಇಂತಹ ಮೇರು ಗಾಯಕಿಯ ಸಾಧನೆಯನ್ನು ಗುರುತಿಸಿದ ಕೇಂದ್ರ ಸರ್ಕಾರ 2022 ರ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಾರ್ಚ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸುಲೋಚನಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದರು. ಕಲಾ ಸಾಧನೆಗಾಗಿ ಅವರಿಗೆ "ಲಾವಣಿ ಸಮ್ರಾಧನಿ"(ಲಾವಣಿಗಳ ರಾಣಿ) ಎಂಬ ಬಿರುದನ್ನು ಸಹ ನೀಡಲಾಗಿದೆ.

ಓದಿ: ನಾನು ಸಿಎಂ ಹುದ್ದೆ ರೇಸ್​ನಲ್ಲಿಲ್ಲ: ಪ್ರಬಲ ಆಕಾಂಕ್ಷಿ ಸುಖವಿಂದರ್ ಸಿಂಗ್ ಸುಖು ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.