ETV Bharat / bharat

ಲಾಲೂ ಪ್ರಸಾದ್ ಯಾದವ್​​ ಅವರೇ ಪಕ್ಷದ ಸುಪ್ರೀಮೋ : ಆರ್​​ಜೆಡಿ ನಾಯಕ - RJD Supremo

ಬಿಹಾರಕ್ಕೆ ಭೇಟಿ ನೀಡಲಿರುವ ಲಾಲೂ ಅವರು ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುತ್ತಾರೆ. ಒಂದು ಬಾರಿ ಅವರ ಆರೋಗ್ಯ ಚೇತರಿಕೆಯಾದರೆ, ತಮ್ಮ ಬಹುಪಾಲು ಸಮಯವನ್ನು ಬಿಹಾರದ ಜನತೆಯೊಂದಿಗೆ ಕಳೆಯುತ್ತಾರೆ..

Lalu Prasad Yadav will continue to be party's national prez, says RJD leader
ಲಾಲೂ ಪ್ರಸಾದ್ ಯಾದವ್​​ ಅವರೇ ಪಕ್ಷದ ಸುಪ್ರಿಮೋ: ಆರ್​​ಜೆಡಿ ನಾಯಕ
author img

By

Published : Jul 20, 2021, 9:54 PM IST

ನವದೆಹಲಿ : ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರೇ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಪಕ್ಷದ ಮುಖ್ಯಸ್ಥರಾಗಿ ಮುಂದುವರೆಯಲಿದ್ದಾರೆ ಎಂದು ಬಿಹಾರ ಆರ್​ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಜಗದಾನಂದ್ ಸಿಂಗ್ ಅವರು, ಇತ್ತೀಚೆಗೆ ಲಾಲೂ ಪ್ರಸಾದ್ ಯಾದವ್ ಅವರನ್ನು ಭೇಟಿಯಾಗಿದ್ದೇನೆ. ಪ್ರಸ್ತುತ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಯಾದವ್ ಅವರ ಆರೋಗ್ಯ ಉತ್ತಮವಾಗಿದೆ ಮತ್ತು ಶೀಘ್ರದಲ್ಲೇ ಅವರು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ ಎಂದಿದ್ದಾರೆ.

ಬಿಹಾರಕ್ಕೆ ಭೇಟಿ ನೀಡಲಿರುವ ಲಾಲೂ ಅವರು ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುತ್ತಾರೆ. ಒಂದು ಬಾರಿ ಅವರ ಆರೋಗ್ಯ ಚೇತರಿಕೆಯಾದರೆ, ತಮ್ಮ ಬಹುಪಾಲು ಸಮಯವನ್ನು ಬಿಹಾರದ ಜನತೆಯೊಂದಿಗೆ ಕಳೆಯುತ್ತಾರೆ ಎಂದು ಜಗದಾನಂದ್ ಸಿಂಗ್ ಹೇಳಿದ್ದಾರೆ.

ಇದಕ್ಕೂ ಮೊದಲು ಲಾಲೂ ಪುತ್ರ ತೇಜಸ್ವಿ ಯಾದವ್ ಪಕ್ಷದ ರಾಷ್ಟ್ರದ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಗದಾನಂದ್ ಸಿಂಗ್, ಲಾಲೂ ಪಕ್ಷದ ಮುಖ್ಯಸ್ಥರಾಗಿ ಮುಂದುವರೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪುತ್ರ ವಿಜಯೇಂದ್ರಗೆ ಭವಿಷ್ಯ ಕಲ್ಪಿಸಲು ತ್ಯಾಗ.. ಸ್ವಪ್ರೇರಣೆಯಿಂದ ಸಿಎಂ ಕುರ್ಚಿ ಬಿಡಲು ನಿರ್ಧರಿಸಿದರೇ ಬಿಎಸ್‌ವೈ!?

ತಮ್ಮ ಮತ್ತು ಲಾಲೂ ಪುತ್ರ ತೇಜ್​ ಪ್ರತಾಪ್ ಯಾದವ್ ಅವರ ನಡುವಿನ ವೈಮನಸ್ಸಿನ ವಿಚಾರವಾಗಿಯೂ ಮಾತನಾಡಿದ ಜಗದಾನಂದ್ ಸಿಂಗ್, ತೇಜ್ ಪ್ರತಾಪ್ ನನಗೆ ಸಂಬಂಧಿ, ನಮ್ಮಿಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.